ಬನ್ನೂರು ಚರ್ಚ್ ದಫನ ಭೂಮಿಯಲ್ಲಿನ ಸಮಾಧಿ ಧ್ವಂಸ – ಪ್ರಕರಣ ದಾಖಲು
ಪುತ್ತೂರಿನ ಆನೆಮಜಲು ಪ್ರದೇಶದ ಬನ್ನೂರಿನ ಸೈಂಟ್ ಆ್ಯಂಟನಿ ಚರ್ಚ್‌ನಲ್ಲಿ ಕ್ರಿಶ್ಚಿಯನ್ನರ ಸಮಾಧಿಯೊಂದು ಧ್ವಂಸಗೊಂಡಿರುವುದು ಕಂಡುಬಂದಿದೆ. ವಂದನೀಯ ಫಾದರ್ ಬಾಲ್ತಜಾರ್ ಪಿಂಟೊರವರು ಪುತ್ತೂರು ನಗರ ಠಾಣೆಯಲ್ಲಿ ಜೂನ್ 14ರಂದು ಶನಿವಾರ ದೂರನ್ನು ನೀಡಿದ್ದಾರೆ. ಈ ಘಟನೆ ಸ್ಥಳೀಯ ಕ್ರಿಶ್ಚಿಯನ್ ಸಮುದಾಯದಲ್ಲಿ ಕಳವಳ ಮೂಡಿಸಿದೆ.

ದೈವಾಧೀನರಾದ ಕಥೊಲಿಕ್ ಧರ್ಮದ ವ್ಯಕ್ತಿಗಳನ್ನು ಈ ಸ್ಥಳದಲ್ಲಿ ದಫನ ಮಾಡಲಾಗುತ್ತದೆ. ಈ ಧಫನ ಭೂಮಿಯಲ್ಲಿ ಯಾರೋ ದುಷ್ಕರ್ಮಿಗಳು ಸಮಾಧಿಯೊಂದನ್ನು ಒಡೆದು ಹಾಕಿರುವ ಬಗ್ಗೆ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿರುತ್ತಾರೆ. ಸದ್ರಿ ಕೃತ್ಯವನ್ನು ನಡೆಸಿದ ದುಷ್ಕರ್ಮಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.




