August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾಸರಗೋಡಿನ ವರ್ಕಾಡಿಯಲ್ಲಿ ಬೆಂಕಿ ಹಚ್ಚಿ ತಾಯಿಯನ್ನು ಕೊಲೆಗೈದ ಮಗ

ಆರೋಪಿ ಮೆಲ್ವಿನ್ ಮೊಂತೇರೊ ಪರಾರಿ

ಸ್ವತಃ ಮಗನೇ ಹೆತ್ತ ತಾಯಿಯನ್ನು ಕೊಂದು ಬೆಂಕಿ ಹಚ್ಚಿ ಸುಟ್ಟು ಹಾಕಿದ ಪೈಶಾಚಿಕ ಕೃತ್ಯ ವರ್ಕಾಡಿಯಲ್ಲಿ ನಡೆದಿರುವ ಬಗ್ಗೆ ಇಂದು ಜೂನ್ 26ರಂದು ಗುರುವಾರ ವರದಿಯಾಗಿದೆ. ವರ್ಕಾಡಿ ನಲ್ಲೆಂಗಿಯ ಲೂಯಿಸ್ ಮೊಂತೇರೊರವರ ಪತ್ನಿ 59 ವರ್ಷ ಪ್ರಾಯದ ಹಿಲ್ಡಾ ಮೊಂತೇರೊ ಕೊಲೆಗೀಡಾದವರು. ನೆರೆಮನೆಯ ಸಂಬಂಧಿಕರಾದ ವಿಕ್ಟರ್ ರವರ ಪತ್ನಿ 30 ವರ್ಷ ಪ್ರಾಯದ ಲೊಲಿಟಾ ಅವರಿಗೂ ಗಂಭೀರ ಸುಟ್ಟ ಗಾಯಗಳಾಗಿವೆ.

ಆರೋಪಿ 26 ವರ್ಷ ಪ್ರಾಯದ ಮೆಲ್ವಿನ್ ಮೊಂತೇರೊ ಈ ಕೃತ್ಯ ನಡೆಸಿದ ಬಳಿಕ ಆಟೋ ರಿಕ್ಷಾದಲ್ಲಿ ಪರಾರಿಯಾಗಿದ್ದಾನೆ. ತಾಯಿ ಹಿಲ್ಡಾ ಮತ್ತು ಮೆಲ್ವಿನ್ ಮಾತ್ರ ಮನೆಯಲ್ಲಿ ವಾಸವಾಗಿದ್ದರು. ಇನ್ನೋರ್ವ ಪುತ್ರ ಆಲ್ವಿನ್ ಕುವೈತ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಆಲ್ವಿನ್ ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕಾಗಿ ಕುವೈತ್ ಗೆ ತೆರಳಿದ್ದರು. ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದ ಹಿಲ್ಡಾರವರನ್ನು ಮುಂಜಾನೆ ಕೊಲೆಗೈದ ಬಳಿಕ ಮನೆಯ ಹಿಂಬದಿಗೆ ಕೊಂಡೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.

ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಟ್ಟು ಕರಕಲಾದ ಮೃತದೇಹವನ್ನು ಮನೆಯ ನೂರು ಮೀಟರ್ ದೂರದ ಪೊದೆಗಳೆಡೆಗೆ ಎಸೆದ ಆರೋಪಿ ಮೆಲ್ವಿನ್ ಸಂಬಂಧಿಕರಾದ ಲೊಲಿಟಾರ ಮನೆಗೆ ಬಂದು ತಾಯಿ ನಾಪತ್ತೆಯಾಗಿರುವುದಾಗಿ ತಿಳಿಸಿದ್ದ. ಗಾಬರಿಗೊಂಡು ಮನೆಗೆ ಬಂದಾಗ ಲೊಲಿಟಾರಿಗೂ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಲೋಲಿಟಾರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯದ ಬಳಿಕ ಆರೋಪಿ ಆಟೋರಿಕ್ಷಾ ಮೂಲಕ ಹೊಸಂಗಡಿಗೆ ತಲಪಿ ಅಲ್ಲಿಂದ ಮಂಗಳೂರಿಗೆ ಬಸ್ಸು ಮೂಲಕ ಪರಾರಿಯಾಗಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆರೋಪಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದನು. ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ತಲುಪಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page