May 17, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಕ್ರಮ ಮಧ್ಯ ಸಾಗಾಟ ಪ್ರಕರಣ ಆರೋಪಿ ಪ್ರತಾಪ್ ಶೆಟ್ಟಿ ಖುಲಾಸೆ

2023 ರ ಮಾರ್ಚ್ 15ರಂದು ರಾತ್ರಿ 12:15 ಗಂಟೆಗೆ ಗ್ರಾಮದ ಕಡಂಬು ಎಂಬಲ್ಲಿ ಆರೋಪಿ ಪ್ರತಾಪ್ ಶೆಟ್ಟಿ ಯಾವುದೇ ದಾಖಲಾತಿಗಳಿಲ್ಲದೆ ಸ್ವಿಫ್ಟ್ ಕಾರ್ ನಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಮಧ್ಯದ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದುದ್ದನ್ನು ಉಪ್ಪಿನಂಗಡಿ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಪಿ.ಎಸ್.ಐ.ರವರು ತಮ್ಮ ಸಿಬ್ಬಂದಿಗಳ ಜೊತೆ ದಾಳಿ ನಡೆಸಿ ಆರೋಪಿ ವಶದಲ್ಲಿದ್ದ ಒಟ್ಟು 106.83 0 ಲೀಟರ್ ಮಧ್ಯವನ್ನು ವಾಹನ ಸಮೇತ ವಶಪಡಿಸಿಕೊಂಡು ಕರ್ನಾಟಕ ಅಬಕಾರಿ ಕಾಯ್ದೆ ಕಾಲಂ 32,34,43 (ಎ) ರಡಿಯಲ್ಲಿ ಪ್ರಥಮ ವರ್ತಮಾನವನ್ನು ದಾಖಲಿಸಿ ಪೂರ್ಣ ತನಿಕೆಯನ್ನು ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ.

ಪ್ರಕರಣವನ್ನು ಕೈಗೆತ್ತಿಕೊಂಡ ಮಾನ್ಯ ನ್ಯಾಯಾಲಯವು ಸುಮಾರು 12 ಸಾಕ್ಷಿಗಳ ಪೈಕಿ ಎಂಟು ಜನರನ್ನು ವಿಚಾರಣೆ ಮಾಡಿ ಸುಮಾರು 10 ದಾಖಲೆಗಳನ್ನು ಅಭಿಯೋಜನ ಪರ ಗುರುತಿಸುವಿಕೆಯನ್ನು ಮಾಡಿರುತ್ತಾರೆ. ಸದರಿ ಅಭಿಯೋಜನೆ ಮತ್ತು ಆರೋಪಿಯ ಪರ ವಾದ ವಿವಾದಗಳನ್ನು ಆಲಿಸಿದ ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಯೋಗೀಂದ್ರ ಶೆಟ್ಟಿರವರು ಸದರಿ ಆರೋಪಿಯನ್ನು ದೋಷ ಮುಕ್ತ ಎಂದು ತೀರ್ಪು ನೀಡಿ ಸದರಿ ಪ್ರಕರಣದಿಂದ ಖುಲಾಸೆ ಮಾಡಿರುತ್ತದೆ. ಆರೋಪಿಯ ಪರ ಪುತ್ತೂರಿನ ಕಜೆ ಲಾ ಚೇಂಬರ್ಸ್ ನ ವಕೀಲರಾದ ಮಹೇಶ್ ಕಜೆರವರು ವಾದಿಸಿರುತ್ತಾರೆ.

You may also like

News

ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್ – ಇ-ಫಾರ್ಮಸಿ ವಿರೋಧಿಸಿ ದಕ್ಷಿಣ ಕನ್ನಡದಲ್ಲೂ ಔಷಧ ಅಂಗಡಿಗಳು ಸ್ಥಗಿತ!

ಆನ್‌ಲೈನ್ ಮೂಲಕ ನಿಯಮಬಾಹಿರವಾಗಿ ಔಷಧಿಗಳನ್ನು ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘವು ಮೇ 20 ರಂದು ದೇಶಾದ್ಯಂತ ಔಷಧ ವ್ಯಾಪಾರ ಬಂದ್‌ಗೆ ಕರೆ
News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ

You cannot copy content of this page