May 17, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರದ ವೈಸಿಎಸ್ ಕೇಂದ್ರೀಯ ಸಮಿತಿಯ ಮಹಾಸಭೆ – 2025-26ನೇ ಸಾಲಿನ ವಾರ್ಷಿಕ ಚುನಾವಣೆ

ಅಧ್ಯಕ್ಷರಾಗಿ ರಾಯನ್ ಮೆಂಡೊನ್ಸಾ ಮುಕ್ಕಾ ಮತ್ತು ಖಜಾಂಚಿಯಾಗಿ ವಿಯೊನ್ ಪಿಂಟೊ  ಶಿರ್ತಾಡಿ ಬಹುಮತದಿಂದ ಆಯ್ಕೆ

ಮಂಗಳೂರಿನ ಉರ್ವಾ ಚರ್ಚ್ ಸಭಾಂಗಣದಲ್ಲಿ ಇಂದು ಜುಲೈ 6ರಂದು ಆದಿತ್ಯವಾರ  ಮಂಗಳೂರು ಧರ್ಮಕ್ಷೇತ್ರದ ವೈಸಿಎಸ್ ಕೇಂದ್ರೀಯ ಸಮಿತಿಯ ಮಹಾಸಭೆಯು ನಡೆಯಿತು. ಇದರಲ್ಲಿ 2025-26 ನೇ ಸಾಲಿನ ವಾರ್ಷಿಕ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಮುಕ್ಕಾ ಹೋಲಿ ಸ್ಪಿರಿಟ್ ಚರ್ಚ್ ನ ರಯಾನ್ ಮೆಂಡೋನ್ಸಾ ಅಧ್ಯಕ್ಷರಾಗಿ ಮತ್ತು ಖಜಾಂಚಿಯಾಗಿ ಶಿರ್ತಾಡಿ ಚರ್ಚ್ ನ ವಿಯೋನ್ ಲ್ಯಾರನ್ ಪಿಂಟೊ ಬಹುಮತದಿಂದ ಆಯ್ಕೆಯಾದರು.

ಪದಾಧಿಕಾರಿಗಳಾಗಿ President – Ryan Mendonsa Mukka, Vice President – Joslyn Rashmi Dsouza Madanthyar, Secretary – Sweedal Angelica Dsouza Cordel, Treasurer – Veon Laren Pinto Shirthady, Liturgical Secretary – Jennen Crasta Vamapadapadavu, Cultural Secretary – Christal Vinisha Lopez Balkunje, Yuvatare Editor – Aashna Jewel Dsouza Ferar, Regional Treasurer – Venus Lewis Milagres, NEXCO – Amica Frank Bendur ಆಯ್ಕೆಯಾದರು. ಚುನಾವಣೆಯ ನಂತರ ಎಲ್ಲಾ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.

ಅಧ್ಯಕ್ಷತೆಯನ್ನು ವಹಿಸಿದ್ದ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಆಡಳಿತಾಧಿಕಾರಿಯವರಾದ ವಂದನೀಯ ಫಾದರ್ ಜೀವನ್ ಸಿಕ್ವೇರಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವೈಸಿಎಸ್ ರಾಷ್ಟ್ರೀಯ ಅಧ್ಯಕ್ಷ ಆ್ಯನ್ಸನ್ ನಜ್ರೆತ್ ಆಗಮಿಸಿದ್ದರು.  ಕಾರ್ಯಕ್ರಮದಲ್ಲಿ ಎಂಟು ವಿದ್ಯಾರ್ಥಿಗಳನ್ನು ಜೆನ್ನಿಕಾ ಸಾನಿಯಾ ಡಿಸೋಜ – ಕಾಸ್ಸಿಯಾ, ವಿನೋಲಾ ಡಿಸೋಜ – ಕಾಸರಗೋಡು, ರಾನಿಯಾ ಫೆರಾವೊ – ರಾಣಿಪುರ, ಅಶ್ನಾ ಫೆರಾವೊ – ರಾಣಿಪುರ, ಆಶ್ನಾ ಡಿಸೋಜ – ಫೆರಾರ್, ರನಿಲ್ ಡಿಸೋಜ – ಫಜಿರ್, ಬ್ರಿಸಿಟನ್ ಮಾರಿಯೋ ರೊಡ್ರಿಗಸ್ – ಕೊರ್ಡೆಲ್ ಮತ್ತು ವಿಲೋನಾ ಡಿಕುನ್ಹಾ – ಉಜಿರೆ ಇವರೆಲ್ಲರನ್ನು ಅವರ ಗಮನಾರ್ಹ ಸಾಧನೆಗಾಗಿ ವಂದನೀಯ ಫಾದರ್ ಜೀವನ್ ಸಿಕ್ವೇರಾ ಸನ್ಮಾನಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಮೋನಾ ಜಾಕ್ವೆಲಿನ್ ಮೆಂಡೋನ್ಸಾರವರು ಸಾಮಾಜಿಕ ಮಾಧ್ಯಮದ ಕರಾಳ ಮುಖ ಎಂಬ ವಿಷಯದ ಕುರಿತು ನೆರೆದ ಎಲ್ಲಾ ವೈಸಿಎಸ್ ಸದಸ್ಯರಿಗೆ ಜಾಗೃತಿ ಮೂಡಿಸಿದರು. ಮಂಗಳೂರು ಧರ್ಮಕ್ಷೇತ್ರದ ವೈಸಿಎಸ್ ಹಾಗೂ ವೈಎಸ್‌ಎಂ ನಿರ್ದೇಶಕರಾಗಿರುವ ವಂದನೀಯ ಫಾದರ್ ರೋಷನ್ ಡಿಕುನ್ಹಾರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.

ಪೂಜೆಯ ಬಳಿಕ ಸಮಾರೋಪ ಕಾರ್ಯಕ್ರಮವು ಮಧ್ಯಾಹ್ನ 2:00 ಗಂಟೆಗೆ ನಡೆಯಿತು. ಅತಿಥಿಗಳಾಗಿ ಫಾದರ್ ಮುಲ್ಲರ್ ಹೋಮಿಯೋಪತಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂದನೀಯ ಫಾದರ್ ಡೊನಾಲ್ಡ್ ನಿಲೇಶ್ ಕ್ರಾಸ್ತಾ ಮತ್ತು ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಆಗಮಿಸಿದ್ದರು. ನಿರ್ಗಮಿತ ಕಾರ್ಯಕಾರಿ ಸಮಿತಿಯು ಕಾರ್ಯಕ್ರಮವನ್ನು ನಿರ್ವಹಿಸಿತು. ಎಲ್ಲಾ ಕೌನ್ಸಿಲ್ ಸದಸ್ಯರ ಪರವಾಗಿ ವಿಜಯ್ ಡಿಸೋಜ ತಮ್ಮ ಅನುಭವಗಳನ್ನು ಹಂಚಿಕೊಂಡರು. ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದ ವಂದನೀಯ ಫಾದರ್ ಆ್ಯಂಟನಿ ಕ್ಲ್ಯಾನಿ ಡಿಸೋಜರವರು ನೂತನ ಪದಾಧಿಕಾರಿಗಳಿಗೆ ಹುದ್ದೆಗಳ ಹಸ್ತಾಂತರ ಸಮಾರಂಭವನ್ನು ನಡೆಸಿಕೊಟ್ಟರು. ವೈಸಿಎಸ್ ಕೇಂದ್ರೀಯ ನಿರ್ದೇಶಕರಾದ ವಂದನೀಯ ಫಾದರ್ ರೋಷನ್ ಡಿಕುನ್ಹಾರವರು ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು.

2024-25 ನೇ ಸಾಲಿನ ವೈಸಿಎಸ್ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಪ್ರಮಾಣ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಆಡಳಿತಾಧಿಕಾರಿಯವರಾದ ವಂದನೀಯ ಫಾದರ್ ಜೀವನ್ ಸಿಕ್ವೇರಾರವರು ವೇದಿಕೆಯಲ್ಲಿರುವ ಅತಿಥಿಗಳೊಂದಿಗೆ ವೈಸಿಎಸ್ ಸಂಘಟನೆಯ ವಾರ್ಷಿಕ ನಿಯತಕಾಲಿಕೆ ‘ಯುವತಾರೆ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಕೇಂದ್ರೀಯ ವೈಸಿಎಸ್ ಸಚೇತಕ ರೂಬೆನ್ ಡಿಸೋಜ ಬಜ್ಪೆ ಮತ್ತು ಕೇಂದ್ರೀಯ ಸಂಯೋಜಕಿ ಜಾನೆಟ್ ಪಿಂಟೊ ಗುರುಪುರ ಮತ್ತು DEXCO ತಂಡವು ಕಾರ್ಯಕ್ರಮವನ್ನು ಆಯೋಜಿಸಿತ್ತು. ವೈಸಿಎಸ್/ವೈಎಸ್‌ಎಂ ಧ್ಯೇಯ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.

ಈ ಶುಭ ಸಂದರ್ಭದಲ್ಲಿ ವೈಸಿಎಸ್ ಕೇಂದ್ರೀಯ ನಿರ್ದೇಶಕರಾದ ವಂದನೀಯ ಫಾದರ್ ರೋಷನ್ ಡಿಕುನ್ಹಾರವರ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ವೈಸಿಎಸ್ ಕೇಂದ್ರೀಯ ಅಧ್ಯಕ್ಷ ಡಿಯೋನ್ ಸಲ್ಡಾನ್ಹಾ ಎಲ್ಲರನ್ನು ಸ್ವಾಗತಿಸಿದರು. ರಿಯೋನಾ ಫ್ಲೆಮಿಶಾ ಲೋಬೊ ವಾರ್ಷಿಕ ವರದಿಯನ್ನು ಮಂಡಿಸಿದರು. ಉಪಾಧ್ಯಕ್ಷೆ ಬ್ಲಾನೋಲಾ ಡಿಸೋಜ ಧನ್ಯವಾದ ಸಮರ್ಪಿಸಿದರು. ಮೆಲ್ರಾಯ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು. ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

You may also like

News

ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್ – ಇ-ಫಾರ್ಮಸಿ ವಿರೋಧಿಸಿ ದಕ್ಷಿಣ ಕನ್ನಡದಲ್ಲೂ ಔಷಧ ಅಂಗಡಿಗಳು ಸ್ಥಗಿತ!

ಆನ್‌ಲೈನ್ ಮೂಲಕ ನಿಯಮಬಾಹಿರವಾಗಿ ಔಷಧಿಗಳನ್ನು ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘವು ಮೇ 20 ರಂದು ದೇಶಾದ್ಯಂತ ಔಷಧ ವ್ಯಾಪಾರ ಬಂದ್‌ಗೆ ಕರೆ
News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ

You cannot copy content of this page