August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಹಿರಿಯ ಪತ್ರಕರ್ತ ಹಾಗೂ ಬಹುಬಾಷಾ ಸಾಹಿತಿ ರೇಮಂಡ್ ಡಿಕೂನಾರವರ ಜೀವನ ಚರಿತ್ರೆಯ ‘ಟೀಟೋಟ್ಲರ್ಸ್ ಅಟೋಬಯೋಗ್ರಾಫಿ’ ಪುಸ್ತಕ ಮಂಗಳೂರು ಬಿಷಪ್ ರವರಿಂದ ಬಿಡುಗಡೆ

ಜೀವನಪೂರ್ತಿ ಅಮಲು ಸೇವಿಸದ ಒಬ್ಬರು ತನ್ನ ಮೇಲೆ ಬರುವ ಅಮಿಷಗಳನ್ನು ಸರಿದೂಗಿಸುವುದು ಹೇಗೆ ಎಂದು ಬರೆದ ಈ ಟೀಟೊಟ್ಲರ್ಸ್ ಅಟೋಬಯೋಗ್ರಾಪಿ ಒಂದು ಕಾಲದ ಸರಿಯಾದ ಮಾಹಿತಿ ಆಗಿದೆ ಎಂದು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಹೇಳಿದರು.

ಅವರು ಜುಲಾಯ್ 11ರಂದು ಶುಕ್ರವಾರ ಹಿರಿಯ ಪತ್ರಕರ್ತ, ಬಹುಭಾಷಾ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆರವರ ಜೀವನ ಚರಿತ್ರೆಯ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು. ಕೃಷಿ ಚಟುವಟಿಕೆ ಮತ್ತು ವ್ಯಾಪಾರ ಇವುಗಳ ಅನುಭವ ಬೆರೆತ ಪತ್ರಕರ್ತ ಒಬ್ಬರು ಸಮಾಜದ ತರಭೇತಿ ಮಾಡಲು ಹೇಗೆ ಸಾಹಿತ್ಯ ಬರಬಹುದು ಎಂದು ಪುಸ್ತಕ ತೋರಿಸಿದೆ ಎಂದು ಶ್ಲಾಘಿಸಿದರು.

ಮೊದಲಿಗೆ ಮೂಡುಬಿದಿರೆ ಪದ್ಮಶ್ರೀ ಗ್ಯಾಸ್ ಏಜೆನ್ಸಿಯ ಪ್ರಭಂದಕ ಆಲ್ಬರ್ಟ್ ಡಿಆಲ್ಮೇಡಾ ಶುಭಾಶಯ ಕೋರಿದರು. ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಸಾಹಿತಿಗಳು ಮಾತನಾಡುವ ಅಗತ್ಯ ಇಲ್ಲ ಅವರ ಪುಸ್ತಕ ಮಾತನಾಡುತ್ತದೆ. ನಾವೆಲ್ಲರೂ ತೆಂಗಿನ ಮರದಂತೆ. ಅಡ್ಡ ಏನು ಬಂದರೂ ಆಕಾಶದೆಡೆಗೆ ಬೆಳೆಯುವುದು ಬಿಡುವುದಿಲ್ಲ ಮತ್ತು ಫಲ ಕೊಡುವುದು ನಿಲ್ಲಿಸುವುದಿಲ್ಲ.

ಕಾರ್ಯಕ್ರಮದಲ್ಲಿ ಐಸಿವೈಎಂ ಮಂಗಳೂರು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯ್ ಕಾರ್ಡೋಜಾ, ಮಾಂಡ್ ಸೊಭಣ್ ಅಧ್ಯಕ್ಷ ಲೂವಿಸ್ ಜೆ. ಪಿಂಟೋ, ಸೈಂಟ್ ಆನ್ಸ್ ಪ್ರಯರಿ ಸುಪೀರಿಯರ್ ವಂದನೀಯ ಫಾದರ್ ಜೆರಾಲ್ಡ್ ಲೋಬೋ, ಕೆಎನ್‌ಎಸ್ ನ ನಿಯೋಜಿತ ಅಧ್ಯಕ್ಷರಾದ ವಂದನೀಯ ಫಾದರ್ ರೋಕಿ ಡಿಕೂನಾ, ಕೊಂಕಣಿ ಹಿರಿಯ ಲೇಖಕರು ನವೀನ್ ಕುಲ್ಶೇಕರ್, ಕಾಂಗ್ರೆಸ್ ಮುಖಂಡರೂ ಹಾಗೂ ವಕೀಲರೂ ಆಗಿರುವ ಶಾಲೆಟ್ ಪಿಂಟೋ ಮತ್ತು ಸಾಹಿತಿ ಜೋಸ್ಸಿ ಪಿಂಟೋ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಮೊದಲು ಬಲಿಪೂಜೆಯನ್ನು ನಿವೃತ್ತ ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಇವರೊಂದಿಗೆ ವಂದನೀಯ ಫಾದರ್ ಜೆರಾಲ್ಡ್ ಲೋಬೋ, ವಂದನೀಯ ಫಾದರ್ ಮ್ಯಾಕ್ಸಿಮ್ ರೊಸಾರಿಯೊ ಮತ್ತು ವಂದನೀಯ ಫಾದರ್ ಫೆಲಿಕ್ಸ್ ಮೊಂತೆರೋ ಕೃತಜ್ಞತಾ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.

ರಿಯಾನ ಡಿಕೂನಾ ಸ್ವಾಗತಿಸಿದರು ಮತ್ತು ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಎಲಿಯಸ್ ಫೆರ್ನಾಂಡಿಸ್ ವಂದಿಸಿದರು. ನತಾಲಿಯಾ ಡಿಕೂನಾ, ಲೋನಾ ವಾಸ್, ಕೆ. ವಸಂತ್ ರಾವ್, ಅಶ್ಲಿನ್, ನಿಹಾನ್, ವಿಲ್ಸನ್, ನೆಲ್ಸನ್, ಅವಿತ್, ವಿನೋಯ್ ಹಾಗೂ ವಿರೋಯ್ ಸಹಕರಿಸಿದರು.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page