July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಾಲ್ದನೆ ಚರ್ಚ್ ICYM ಘಟಕದಿಂದ ‘ಬುಕ್ ಡ್ರೈವ್’ ಕಾರ್ಯಕ್ರಮ

ಯುವ ಜನರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಸಂತ ತೆರೆಸಾ ಚರ್ಚ್ ಪಾಲ್ದನೆ ಇದರ ICYM ಘಟಕವು ‘ಬುಕ್ ಡ್ರೈವ್’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಯೋಜನೆಯಡಿ ICYM ಸದಸ್ಯರು ಚರ್ಚ್ ಸದಸ್ಯರಿಂದ ವಿವಿಧ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳನ್ನು ಚರ್ಚ್ ನ ಆಸಕ್ತ ಸದಸ್ಯರಿಗೆ ಅವರವರಿಗೆ ಬೇಕಾಗಿರುವ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು.

ಈ ಕಾರ್ಯಕ್ರಮವನ್ನು ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ರಿಚ್ಚರ್ಡ್ ಅಲೋಶಿಯಸ್‌ ಕುವೆಲ್ಲೊರವರು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ICYM ಸಂಘಟನೆಯು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆಧುನಿಕ ಮೊಬೈಲ್‌ ಯುಗದಲ್ಲಿ ಪುಸ್ತಕದ ಓದುವಿಕೆ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ICYM ‘ಬುಕ್‌ ಡ್ರೈವ್’ ಎಂಬ ಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಆಸ್ಟಿನ್‌ ಮೊಂತೇರೊ, ICYM ಸಚೇತಕ ಹಾಗೂ ಮದರ್ ತೆರೆಸಾ ವಾರ್ಡಿನ ಮುಖ್ಯಸ್ಥ ರೋಷನ್‌ ಮೊಂತೇರೊ, ಘಟಕದ ಅಧ್ಯಕ್ಷ ವಿಲೀಶಾ ಬ್ರ್ಯಾಗ್ಸ್ ಹಾಗೂ ಕಾರ್ಯದರ್ಶಿ ವಿಶೆಲ್‌ ಲೋಬೊ ಉಪಸ್ಥಿತರಿದ್ದರು.  ಬುಕ್ ಡ್ರೈವ್ ಅಂಗವಾಗಿ ಮೊದಲ ಹಂತದಲ್ಲಿ ಕಥೆ, ಕಾದಂಬರಿ, ಮಾರ್ಕೆಟಿಂಗ್, ಡಿಜಿಟಲ್‌ ಸಂಬಂಧಿತ ಪುಸ್ತಕಗಳು, ಮಕ್ಕಳ ಚಾರ್ಟ್ ಗಳು, ಧಾರ್ಮಿಕ ಮತ್ತು ಆರೋಗ್ಯ ಸಂಬಂಧಿತ ಪುಸ್ತಕಗಳು, ವಿಡಂಬನಾತ್ಮಕ ಬರಹಗಳು ಮತ್ತಿತರ ಸುಮಾರು 800 ಪುಸ್ತಕಗಳನ್ನು ಸಂಗ್ರಹಿಸಲಾಗಿದೆ.

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ

You cannot copy content of this page