May 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕ್ರೈಸ್ತ ಸಮುದಾಯದ ದಫನ ಪದ್ಧತಿ ಬಗ್ಗೆ ಜನಾರ್ಧನ ಪೂಜಾರಿಯವರ ಹೇಳಿಕೆಗೆ ಕ್ರೈಸ್ತ ಸಮುದಾಯದ ವ್ಯಾಪಕ ಆಕ್ರೋಶ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ವತಿಯಿಂದ ಖಂಡನೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದವರು ಶಾಂತಿ ಪ್ರೀಯರಾಗಿದ್ದು, ತಮ್ಮ ಧರ್ಮದ ಆಚರಣೆಗಳನ್ನು ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿ ಮಾತ್ರ ನಡೆಸುತ್ತಾ ಬಂದಿದ್ದಾರೆ. ಇತರ ಧರ್ಮಗಳನ್ನು ಗೌರವಿಸುತ್ತಾ, ಸಾಮಾಜಿಕ, ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆಯನ್ನು ನೀಡುತ್ತಿರುವ ಕ್ರೈಸ್ತ ಸಮುದಾಯವು ಇತ್ತೀಚೆಗೆ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಲೋಕಸಭಾ ಸದಸ್ಯರಾದ ಜನಾರ್ಧನ ಪೂಜಾರಿಯವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂಜಾರಿಯವರು ದಕ್ಷಿಣ ಕನ್ನಡದಲ್ಲಿ ನಡೆದ ಘಟನೆಯ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡದೇ, “ಕ್ರೈಸ್ತ ಚರ್ಚುಗಳಲ್ಲಿ ಶವಗಳನ್ನು ಹೂತಿಲ್ಲವಲ್ಲವೇ, ಹೂತಿದ್ದೀರಾ?” ಎಂಬ ಪ್ರಶ್ನೆ ಕೇಳಿರುವುದನ್ನು ಕ್ರೈಸ್ತ ಸಮುದಾಯ ತೀವ್ರವಾಗಿ ಖಂಡಿಸುತ್ತದೆ.

ಸಮುದಾಯದವರು ಸ್ಪಷ್ಟಪಡಿಸಿರುವಂತೆ –

1️⃣ ಕ್ರೈಸ್ತರಲ್ಲಿ ದಫನ ಕ್ರಿಯೆ ಅತ್ಯಂತ ಪಾವಿತ್ರ್ಯದಿಂದ, ಕಾನೂನುಬದ್ಧವಾಗಿ ಹಾಗೂ ಚರ್ಚ್ ಆವರಣದಲ್ಲಿಯೇ ನಡೆಯುತ್ತದೆ.

2️⃣ ಮರಣ ಹೊಂದಿದವರ ದಾಖಲೆಗಳು ಚರ್ಚ್ ಕಚೇರಿಯ ಪುಸ್ತಕದಲ್ಲಿ ನಿಖರವಾಗಿ ಸಂಗ್ರಹವಾಗುತ್ತವೆ.

3️⃣ ಕಳೆದ 50 ವರ್ಷಗಳಿಂದ ನಿಗದಿತ ದಫನ ಭೂಮಿಯಲ್ಲೇ ಶವ ಸಂಸ್ಕಾರ ನಡೆಯುತ್ತಿದ್ದು, ಚರ್ಚ್ ಹೊರಗೆ ಯಾವುದೇ ಅಕ್ರಮ ದಫನ ನಡೆದಿಲ್ಲ.

ಜನಾರ್ಧನ ಪೂಜಾರಿಯವರ ಹೇಳಿಕೆ ಕ್ರೈಸ್ತ ಸಮುದಾಯಕ್ಕೆ ನೋವುಂಟುಮಾಡಿದ್ದು, ಇದನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.)  ಅಧಿಕೃತವಾಗಿ ಖಂಡಿಸುತ್ತದೆ ಎಂದು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಇವರ ನೇತೃತ್ವದಲ್ಲಿ  ಇಂದು ಆಗಸ್ಟ್ 16ರಂದು ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಹಾಗೂ AICU ರಾಜಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಸಂಘಟನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತಾ ಮತ್ತು ಸ್ಟ್ಯಾನಿ ಲೋಬೊ ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ, ಸಹ ಕಾರ್ಯದರ್ಶಿ ಆಲ್ವಿನ್ ರೊಡ್ರಿಗಸ್, ಅಂತರ್ ಧರ್ಮೀಯ ಸಮಿತಿ ಸಂಚಾಲಕ ಅರುಣ್ ಡಿಸೋಜ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

You may also like

News

Mumbai Archbishop Cardinal Oswald Gracias Offers Solace to Residents of Saint Anthony’s Ashram

MANGALURU: His Eminence Cardinal Oswald Gracias, Archbishop of Mumbai and a member of the Pope’s Council of Cardinals, paid a
News

ಸೂರಿಕುಮೇರು – ಮಾಣಿಯಲ್ಲಿ ಅದ್ದೂರಿ ‘ಅನ್ಫಾಲ್ ರೆಸ್ಟೋರೆಂಟ್’ ಮೇ 3ರಂದು ಉದ್ಘಾಟನೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಭಾಗಿ ಉದ್ಘಾಟನಾ ಭವ್ಯ ಸಮಾರಂಭದಲ್ಲಿ ಮೂವರು ಸಾಧಕರಾದ ಚೇತನ್ ರೈ, ನಾಗರಾಜ್ ಶೆಟ್ಟಿ ಹಾಗೂ ಯಾಸೀರ್ ಕಲ್ಲಡ್ಕ

You cannot copy content of this page