August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವನಿತಾ ಪಾರ್ಕ್ ನಲ್ಲಿ ‘ಹಸಿರೇ ಉಸಿರು’ ವನಮಹೋತ್ಸವ

ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠಲ ಕಿಣಿ ವನಿತಾ ಪಾರ್ಕ್ ನಲ್ಲಿ ಗಿಡ ನೆಡುವ ಮೂಲಕ ಲಯನ್ಸ್ ಕ್ಲಬ್ ಪಾಂಡೇಶ್ವರ ಮತ್ತು ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಹಸಿರೇ ಉಸಿರು ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಉಪ ಪೊಲೀಸ್ ಆಯುಕ್ತ ಎಚ್.ಎನ್. ಮಿಥುನ್ ರವರು, ಗಿಡ ಮರಗಳಿಂದ ತುಂಬಿದ ಪರಿಸರವನ್ನು ರಕ್ಷಿಸಿ ಮುಂದಿನ ತಲೆ ಮಾರಿಗೆ ಬಳಸಲು ಅನುವು ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಾಣಿ ಪಕ್ಷಿ ಮನುಷ್ಯರಿಗೆ ಆಸರೆಯಾದ  ಗಿಡ ಮರಗಳ ಸಂರಕ್ಷಣೆಯ ಕಾಳಜಿ ಅಗತ್ಯ ಎಂದರು.

ಪಾಂಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಸುರೇಂದ್ರ ಪಾಂಡೇಶ್ವರ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ನಿಕಟ ಪೂರ್ವ ಕಾರ್ಪೋರೇಟರ್ ಸಂಧ್ಯಾ ಮೋಹನ್ ಆಚಾರ್, ಪತ್ರಕರ್ತ ಪುಷ್ಪರಾಜ್ ಬಿ.ಎನ್. ಎಂಜೆಎಫ್, ಕಾರ್ಯದರ್ಶಿ ಲ. ರೋಷನ್ ಪ್ರಸಾದ್ ಎಂಜೆಎಫ್, ಖಜಾಂಚಿ ಲ. ಬಿ.ಎಸ್. ಕಿಶೋರ್, ಲಯನ್ಸ್ ವಲಯ ಅಧ್ಯಕ್ಷ ಲ. ಬಿ.ಎಸ್. ರವಿಶಂಕರ್ ಪಿ. ಎಂಜೆಎಫ್  ಲ. ಮೋಹನ್ ಆಚಾರ್, ಲ. ಚಂದ್ರಕಾಂತ್, ಲ. ಮೋಹನ್ ಸಾಲಿಯನ್, ಲ. ಗಣೇಶ್ ಸಾಲಿಯನ್ ಎಂಜೆಎಫ್, ಎಲ್.ಎಂ.ಯು.ಎಂ.ಎಫ್. ಕೀರ್ತಿ ಜೈನ್, ಲ. ಸುರೇಶ್ ಅತ್ತಾವರ, ಲ. ಶೈಲೇಶ್ ಕುಮಾರ್ ಮತ್ತು ಲಯನ್ಸ್ ಸದಸ್ಯರು, ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಇದರ ಸದಸ್ಯರು  ಉಪಸ್ಥಿತರಿದ್ದರು.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page