September 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಾನೀರ್ ಚರ್ಚ್ ನಲ್ಲಿ “ಲಾವ್ದಾತೊ ಸಿ” ಪರಿಸರ ದಿನಾಚರಣೆ

“ಒಂದು ಗಿಡ ನೆಡುವುದು ಕೇವಲ ಕೃತ್ಯವಲ್ಲ, ಅದು ಭವಿಷ್ಯದ ಪೀಳಿಗೆಗೆ ಕೊಡುವ ಜೀವದಾನ– ಆಲ್ವಿನ್ ಡಿಸೋಜ ಪಾನೀರ್ AICU ರಾಜ್ಯಾಧ್ಯಕ್ಷ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾನೀರ್ ಮೆರ್ಸಿನ್ ಮಾತೆಯ ಚರ್ಚ್ ವಠಾರದಲ್ಲಿ ಆಗಸ್ಟ್ 24ರಂದು ಭಾನುವಾರ ಬೆಳಿಗ್ಗೆ ಭಾವಪೂರ್ಣವಾಗಿ ಪರಿಸರ ದಿನಾಚರಣೆ – ಲಾವ್ದಾತೊ ಸಿ ಹಾಗೂ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಮಹತ್ವದ ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.), ಪರಿಸರ ಆಯೋಗ ಹಾಗೂ ಕೃಷಿ ಸಮಿತಿ ಸಂಯುಕ್ತವಾಗಿ ಆಯೋಜಿಸಿತ್ತು. ಚರ್ಚ್ ಧರ್ಮಗುರು ವಂದನೀಯ ಫಾದರ್ ವಿಕ್ಟರ್ ಡಿಮೆಲ್ಲೊರವರ ಮಾರ್ಗದರ್ಶನದಲ್ಲಿ ವನಮಹೋತ್ಸವಕ್ಕೆ ಚಾಲನೆ ದೊರೆಯಿತು. ದೇವರ ಆಶೀರ್ವಾದವನ್ನು ಕೋರಿ ಚರ್ಚ್ ಧರ್ಮಗುರುಗಳು ಹಣ್ಣು–ಹಂಪಲು ಗಿಡಗಳನ್ನು ಹಂಚಿ ಪರಿಸರ ಸಂರಕ್ಷಣೆಯ ಸಂದೇಶವನ್ನು ಹರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಥೊಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ಹಾಗೂ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರು, “ಒಂದು ಗಿಡ ನೆಡುವುದು ಕೇವಲ ಕೃತ್ಯವಲ್ಲ, ಅದು ಭವಿಷ್ಯದ ಪೀಳಿಗೆಗೆ ಕೊಡುವ ಜೀವದಾನ” ಎಂದು ಸಾರಿದರು.

ವನಮಹೋತ್ಸವವನ್ನು ವಂದನೀಯ ಫಾದರ್ ವಿಕ್ಟರ್ ಡಿಮೆಲ್ಲೊ ಸ್ವತಃ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸರಿತಾ ಡಿಸೋಜ, ಕಾರ್ಯದರ್ಶಿ ಗ್ರೆಟ್ಟಾ ಡಿಕುನ್ಹಾ, ಆಯೋಗಗಳ ಸಂಯೋಜಕ ರೊನಾಲ್ಡ್ ಡಿಸೋಜ, AICU ರಾಜಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್, ಘಟಕ ಅಧ್ಯಕ್ಷ ಐವನ್ ಮೊಂತೇರೊ, ಮಾಜಿ ಅಧ್ಯಕ್ಷ ನೋಯೆಲ್ ಪಿಂಟೊ, ಕಾರ್ಯದರ್ಶಿ ವೈಲೆಟ್ ಡಿಸೋಜ, ಪರಿಸರ ಆಯೋಗದ ಸಂಚಾಲಕ ನೋರ್ಬಟ್ ಡಿಸೋಜ, ಕೃಷಿ ಸಮಿತಿ ಸಂಚಾಲಕ ಉರ್ಬನ್ ಫೆರಾವೋ, ಎಸ್.ವಿ.ಪಿ. ಅಧ್ಯಕ್ಷ ಫ್ರಾಂಕ್ಲಿನ್ ಕುಟಿನ್ಹಾ ಸೇರಿದಂತೆ ಸುಮಾರು 150 ಮಂದಿ ಭಕ್ತರು ಮತ್ತು ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು. ಕಾರ್ಯಕ್ರಮವನ್ನು ಅಶ್ವಿನ್ ಮೊಂತೆರೋ ನಿರೂಪಿಸಿದರು.

You may also like

News

 ‘ರಾಕ್ಣೊ’ ಸಾಹಿತ್ಯ ಪ್ರಶಸ್ತಿ–2026 ಘೋಷಣೆ

ಸಂಪಾದಕರಾದ ಫಾದರ್ ರೂಪೇಶ್ ಮಾಡ್ತಾ ಅವರಿಂದ ಪ್ರಕಟಣೆ ಮಂಗಳೂರಿನಿಂದ ಪ್ರಕಟವಾಗುತ್ತಿರುವ ಕೊಂಕಣಿ–ಇಂಗ್ಲಿಷ್ ದ್ವಿಭಾಷಾ ವಾರಪತ್ರಿಕೆ ‘ರಾಕ್ಣೊ’ ತನ್ನ ವಾರ್ಷಿಕ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ–2026’ ಅನ್ನು ಸೆಪ್ಟೆಂಬರ್ 1ರಂದು
News

ರಾಷ್ಟ್ರೀಯ ತನಿಖಾಧಿಕಾರಿ ಸೋಗಿನಲ್ಲಿ ಸುಲಿಗೆ – 11 ಹೆಸರುಗಳಿದ್ದ ಖತರ್ನಾಕ್ ವಂಚಕ ಸ್ಯಾಮ್ ಪೀಟರ್ ಮಂಗಳೂರು ಸಿಸಿಬಿ ವಶಕ್ಕೆ!

ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ನಿರ್ದೇಶಕ ಅಥವಾ ಅಧಿಕಾರಿಯೆಂದು ಸುಳ್ಳು ಗುರುತು ಹೇಳಿಕೊಂಡು ಕೋಟಿ ಕೋಟಿ ರೂಪಾಯಿ ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ ಖತರ್ನಾಕ್

You cannot copy content of this page