July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದುಬಾಯಿಯಲ್ಲಿ ಕೊಂಕಣಿ ಹಾಡು ‘ರಗ್ತಾ ವ್ಹಾಳೊ’ ಬಿಡುಗಡೆಯ ಸಂಭ್ರಮ

ಜನಮನ ಗೆದ್ದ ಶಿಲ್ಪಾ ಕುಟಿನ್ಹೊರವರ ಅದ್ಭುತ ಗಾಯನ – ಮತ್ತೆ ಮತ್ತೆ ಕೇಳಲಾಗುತ್ತಿರುವ ಸೂಪರ್ ಹಿಟ್ ಹಾಡು

ದುಬಾಯಿಯಲ್ಲಿ ಮೇರಿ ಮಾತೆಯ ಜನ್ಮದಿನಾಚರಣೆಯ (ಮೊಂತಿ ಫೆಸ್ಟ್) ಸಂದರ್ಭದಲ್ಲಿ ಬಿಡುಗಡೆಯಾದ ಕೊಂಕಣಿ ಹಾಡು ‘ರಗ್ತಾ ವ್ಹಾಳೊ’ ಶ್ರೋತರ ಹೃದಯವನ್ನು ತಟ್ಟಿದೆ. ದುಬೈ ಕರಾಮಾದ ವಿನ್ನೀಸ್ ರೆಸ್ಟೋರೆಂಟ್‌ನಲ್ಲಿ ಮಂಗಳೂರು ಮೂಲದ ಅನೇಕ ಜನರ ಸಮ್ಮುಖದಲ್ಲಿ ನಡೆದ ಲೋಕಾರ್ಪಣಾ ಸಮಾರಂಭ ಅದ್ಧೂರಿಯಾಗಿ ನೆರವೇರಿತು.

👉 ವಿಲ್ಲಿ ಅಲ್ಲಿಪಾದೆರವರ ಮನಸೂರೆಗೊಳ್ಳುವ ಸಾಹಿತ್ಯ,

👉 ಆ್ಯಲನ್ ಫೆರ್ನಾಂಡಿಸ್ ರವರ ಮಧುರ ಸ್ವರ ಸಂಯೋಜನೆ,

👉 ರೋಶನ್ ಆಂಜೆಲೊರ್ ರವರ ನವೀನ ಸಂಗೀತ ನಿರ್ದೇಶನ,

👉 ಹಾಗೂ ಶಿಲ್ಪಾ ಕುಟಿನ್ಹೊರವರ ಸೊಗಸಾದ, ಮಧುರ, ಹೃದಯ ಹಿಂಡುವ ಗಾಯನ – ಈ ನಾಲ್ಕು ಅಂಶಗಳು ಒಂದಾಗಿ ಸೇರಿ ಹಾಡಿಗೆ ಅಸಾಮಾನ್ಯ ಮೆರಗು ತಂದಿವೆ.

👉 ಈ ಹಾಡು ಆರ್.ಡಿ. ಸ್ಟುಡಿಯೊ ಮಂಗಳೂರು ಇಲ್ಲಿ ರೆಕಾರ್ಡಿಂಗ್ ಮಾಡಲಾಗಿದ್ದು, ಇದರ ವಿಡಿಯೋ ಚಿತ್ರೀಕರಣ ಐವನ್ ಪಿರೇರಾರವರ ಪ್ರೊ – ಫಿಕ್ಸ್ ಸ್ಟುಡಿಯೊ ಇದರಲ್ಲಿ ಮಾಡಲಾಗಿದೆ.

🎶 “ಸಾಹಿತ್ಯ ಒಮ್ಮೆ ಕೇಳಿದರೆ ಮನಸಲ್ಲಿ ಮುದ್ರಿತವಾಗುತ್ತದೆ, ಸಂಗೀತ ಹೃದಯ ತಟ್ಟುತ್ತದೆ, ಗಾಯಕಿ ಶಿಲ್ಪಾರವರ ಗಾಯನ ಹೃದಯವನ್ನು ಸೆಳೆಯುತ್ತದೆ” ಎಂದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಾಡು ಇತ್ತೀಚೆಗೆ ಅತ್ಯಂತ ಹೆಚ್ಚು ಕೇಳಲಾಗುತ್ತಿರುವ ಹಿಟ್ ಗೀತೆ ಆಗಿ ಹೊರಹೊಮ್ಮಿದ್ದು, ಜನರು ಮತ್ತೆ ಮತ್ತೆ ಆನಂದದಿಂದ ಕೇಳುತ್ತಿರುವ ಹಾಡು ಎಂದು ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆ ಹರಿದು ಬಂದಿದೆ.

‘ರಗ್ತಾ ವ್ಹಾಳೊ’ – ಸುಂದರ ಸಾಹಿತ್ಯ, ಅದ್ಭುತ ಸಂಗೀತ, ಶ್ರೇಷ್ಠ ಗಾಯನ – ಇವುಗಳ ಸುವರ್ಣಸಂಗಮದಿಂದ ಜನಮನ ಗೆದ್ದ ಹಾಡಾಗಿದೆ.

You may also like

News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು

You cannot copy content of this page