August 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪ್ರತಿಯೊಂದು ಮನೆಗೂ ಸಿಸಿ ಕ್ಯಾಮರಾ – ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಮುಂದಾಳತ್ವ

ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸಿಸಿ ಕ್ಯಾಮರಾಗಳ ಕೊರತೆ ತೀವ್ರವಾಗಿ ಕಂಡುಬರುತ್ತಿತ್ತು. ಇದರಿಂದ ಸ್ವತ್ತಿನ ಅಪರಾಧಗಳ ಪತ್ತೆ ಹಚ್ಚುವಲ್ಲಿ ದೊಡ್ಡ ಮಟ್ಟದ ಹಿನ್ನಡೆ ಉಂಟಾಗುತ್ತಿತ್ತು. ಕಳ್ಳತನ, ದರೋಡೆ, ಸುಲಿಗೆಯಂತಹ ಪ್ರಕರಣಗಳ ತನಿಖೆಗೆ ಸಾಕಷ್ಟು ಅಡ್ಡಿ ಉಂಟಾಗಿ, ಅಪರಾಧಿಗಳನ್ನು ಗುರುತಿಸುವಲ್ಲಿ ಪೊಲೀಸ್ ಇಲಾಖೆಗೆ ತೊಂದರೆಯಾಗುತ್ತಿತ್ತು.

ಪ್ರತಿ ಬೀದಿ ಮತ್ತು ಮನೆಗಳಲ್ಲಿ ಕಣ್ಣಿನಂತೆ ಕೆಲಸ ಮಾಡುವ ಸಿಸಿ ಕ್ಯಾಮರಾಗಳು

ಈ ಹಿನ್ನಲೆಯಲ್ಲಿ, “ಪ್ರತಿ ಮನೆ ಮನೆಗೆ ಸಿಸಿ ಕ್ಯಾಮರಾ” ಎಂಬ ಕಾರ್ಯಕ್ರಮವನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಆಶ್ರಯದಲ್ಲಿ ಪ್ರಾರಂಭಿಸಲಾಗಿದೆ. ಸಿಸಿ ಕ್ಯಾಮರಾಗಳ ಅಳವಡಿಕೆ ಮೂಲಕ ಅಪರಾಧಗಳನ್ನು ತಡೆಯಲು ಹಾಗೂ ನಡೆದ ಅಪರಾಧಗಳ ಪತ್ತೆ ಹಚ್ಚಲು ಹೆಚ್ಚಿನ ನೆರವಾಗಲಿದೆ. ಪ್ರತಿ ಬೀದಿ ಮತ್ತು ಮನೆಗಳಲ್ಲಿ ಕಣ್ಣಿನಂತೆ ಕೆಲಸ ಮಾಡುವ ಸಿಸಿ ಕ್ಯಾಮರಾಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಪರಿಣಾಮಕಾರಿ ಆಯುಧವಾಗಲಿವೆ.

ಪ್ರತಿ ಮನೆ ಮನೆಗೆ ಸಿಸಿ ಕ್ಯಾಮರಾ” ಯೋಜನೆಗೆ ಚಾಲನೆ

ಈ ಕಾರ್ಯಕ್ರಮವನ್ನು ಶ್ರೀ ಚಿತ್ರಾಪುರ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದು, ಅದನ್ನು ಶೈಕ್ಷಣಿಕ ಸಲಹೆಗಾರರಾದ ಡಾ. ರವೀಂದ್ರ ಕಾಯ್ಕಿಣಿ ಹಾಗೂ ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಾದ ಎಂ. ಮಂಜಪ್ಪ ಹಸಿರು ನಿಶಾನೆ ತೋರಿಸುವುದರ ಮೂಲಕ ಉದ್ಘಾಟಿಸಿದರು.

ಪೋಲೀಸರು ಹೇಳುವಂತೆ, ಸಿಸಿ ಕ್ಯಾಮರಾ ಅಳವಡಿಸಿದ ಮನೆಗಳಲ್ಲಿ ಕಳ್ಳತನ ಅಥವಾ ಅಪರಾಧ ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಜೊತೆಗೆ, ತನಿಖೆಯ ಸಂದರ್ಭದಲ್ಲಿ ವಿಡಿಯೋ ಸಾಕ್ಷಿಗಳು ದೊರೆತು ಅಪರಾಧಿಗಳನ್ನು ತಕ್ಷಣ ಪತ್ತೆ ಹಚ್ಚುವಲ್ಲಿ ಸಹಾಯಕವಾಗುತ್ತದೆ.

ಭಟ್ಕಳ ಗ್ರಾಮೀಣ ಪಿ.ಐ. ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಸ್ಥಳೀಯ ನಾಗರಿಕರು ಸಹಕಾರ ನೀಡಿದ್ದು, ಭವಿಷ್ಯದಲ್ಲಿ ಭಟ್ಕಳ ಗ್ರಾಮೀಣ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ವೇಗ ಪಡೆಯುವ ನಿರೀಕ್ಷೆಯಿದೆ.

You may also like

News

ಧರ್ಮಸ್ಥಳದಲ್ಲಿ ‘ಪುನರ್ವಸು’ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಚಾಲನೆ

ಆಯುರ್ವೇದದಿಂದ ಪಂಚೇಂದ್ರಿಯಗಳ ಬಲವರ್ಧನೆ, ಆರೋಗ್ಯಭಾಗ್ಯ ಸಾಧ್ಯ – ವೈದ್ಯ ಮನೀಷಾ ಕೋಟೆಕಾರ್ ಉಜಿರೆ: ಸಾವಿರಾರು ವರ್ಷಗಳ ಪಾರಂಪರಿಕ ಪರಂಪರೆಯನ್ನು ಹೊಂದಿರುವ ಆಯುರ್ವೇದ ಪದ್ಧತಿಯ ಮೂಲಕ ದೇಹದ ಪಂಚೇಂದ್ರಿಯಗಳನ್ನು
News

ಸಿಬ್ಬಂದಿ ಕೊರತೆ ನೀಗಿಸಲು ಮೆಸ್ಕಾಂಗೆ 395 ಪವರ್‌ಮ್ಯಾನ್‌ಗಳು – ಅಧ್ಯಕ್ಷ ಕೆ. ಹರೀಶ್ ಕುಮಾರ್

ಮಂಗಳೂರು: ವಿದ್ಯುತ್ ಸರಬರಾಜು ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮೆಸ್ಕಾಂ ವ್ಯಾಪ್ತಿಗೆ 395 ಹೊಸ ಪವರ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ.

You cannot copy content of this page