August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾಜೂರು ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಮೂರನೇ ಅವಧಿಗೆ ಅಧ್ಯಕ್ಷರಾಗಿ ಕೆ.ಯು. ಇಬ್ರಾಹಿಂ, ಕಾರ್ಯದರ್ಶಿಯಾಗಿ ಜೆ.ಹೆಚ್. ಅಬೂಬಕ್ಕರ್  ಸಿದ್ದೀಕ್

ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ‌ ದರ್ಗಾ ಶರೀಫ್ ಕಾಜೂರು ಇದರ 2025-28 ಸಾಲಿನ ಅದ್ಯಕ್ಷರಾಗಿ ಕೆ.ಯು. ಇಬ್ರಾಹಿಂ, ಉಪಾದ್ಯಕ್ಷರಾಗಿ ಮುಹಮ್ಮದ್ ಬಶೀರ್ ಅಹ್ಸನಿ, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಹೆಚ್. ಅಬೂಬಕ್ಕರ್ ಸಿದ್ದೀಕ್ ಹಾಗೂ ಕೋಶಾಧಿಕಾರಿಯಾಗಿ ಡಿ.ವೈ. ಉಮರ್ ಕುಕ್ಕಾವು ಇವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ನಿರ್ದೇಶಕರುಗಳಾಗಿ ಅಬ್ದುಲ್ ಸಲೀಂ, ಕೆ.ಯು. ಹನೀಫ್, ಬದ್ರುದ್ದೀನ್ ಹೆಚ್., ಅಬ್ದುಲ್ ಹಕೀಂ ಕೆ.ಕೆ., ಕೆ.ಯು. ಮುಹಮ್ಮದ್ ಸಖಾಫಿ, ಶರೀಫ್ ಸ‌ಅದಿ ಮತ್ತು ಯಾಕೂಬ್ ಎನ್. ಎಂ. ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ. ವಕ್ಫ್ ನಿಯಮಾವಳಿಯಂತೆ ಇತ್ತೀಚೆಗೆ ಮತದಾನದ ಮೂಲಕ 11 ಮಂದಿಯ ಆಯ್ಕೆ ನಡೆದಿತ್ತು. ಚುನಾಯಿತ ಪ್ರತಿನಿಧಿಗಳು ಸೆಪ್ಟೆಂಬರ್ 17ರಂದು ಬುಧವಾರ ಸಭೆ ಸೇರಿ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಿದರು. ಅಧ್ಯಕ್ಷತೆಗೆ ನಡೆದ ಗುಪ್ತ ಮತದಾನದಲ್ಲಿ ಬಶೀರ್ ಅಹ್ಸನಿ ಮತ್ತು ಕೆ.ಯು. ಇಬ್ರಾಹಿಂರವರು ಸ್ಪರ್ಧಿಸಿ ಮತದಾನದ ವೇಳೆ ಕೆ.ಯು. ಇಬ್ರಾಹಿಂ ಅವರು 6 ಮತಗಳು ಮತ್ತು ಬಶೀರ್ ಅಹ್ಸನಿ ಅವರು 5 ಮತಗಳನ್ನು ಪಡೆದರು.

ಸಯ್ಯಿದ್ ಕಾಜೂರು ತಂಙಳ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಚುನಾವಣಾ ವೀಕ್ಷಕರಾಗಿ ಮತ್ತು ಚುನಾವಣಾಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಹಾಜಿ ಮಂಗಳೂರು ಸಬೆ ನಡೆಸಿಕೊಟ್ಟರು.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page