ಟ್ರಸ್ಟ್ಗಳಿಗೆ ನವೀಕರಣ ಕಡ್ಡಾಯ: ವಿಳಂಬಕ್ಕೆ ಭಾರೀ ದಂಡ – ನವೀಕರಿಸದಿದ್ದರೆ ತೆರಿಗೆ ಬಾಧ್ಯತೆ
ಸೆಪ್ಟೆಂಬರ್ 30 ಮಂಗಳವಾರ ಕೊನೆಯ ದಿನ
ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ನಡೆಸುತ್ತಿರುವ ಎಲ್ಲಾ ಟ್ರಸ್ಟ್ಗಳು ಮತ್ತು ದತ್ತಿ ಸಂಸ್ಥೆಗಳು ಪ್ರತೀ 5 ವರ್ಷಕ್ಕೊಮ್ಮೆ ತಮ್ಮ ನೋಂದಣಿ ನವೀಕರಿಸಲೇಬೇಕು.
ನವೀಕರಣ ಮಾಡದಿದ್ದರೆ ಏನು?
ನವೀಕರಣ ಮಾಡದ ಟ್ರಸ್ಟ್ಗಳ ಮಾನ್ಯತೆ ರದ್ದಾಗುತ್ತದೆ.
ಆದಾಯ ತೆರಿಗೆ ಇಲಾಖೆಗೆ ಭಾರೀ ತೆರಿಗೆ ಮತ್ತು ಬಡ್ಡಿ ಪಾವತಿಸಬೇಕಾಗುತ್ತದೆ.
ಟ್ರಸ್ಟ್ಗೆ ದಾನ ನೀಡುವವರು ತೆರಿಗೆ ವಿನಾಯಿತಿ ಪ್ರಯೋಜನ ಕಳೆದುಕೊಳ್ಳುತ್ತಾರೆ.

ನವೀಕರಣದ ಅವಧಿ
ಪ್ರಸ್ತುತ ನೋಂದಣಿ 2026ರ ಮಾರ್ಚ್ 31ರವರೆಗೆ ಮಾನ್ಯ. ಮುಂದಿನ ನವೀಕರಣಕ್ಕಾಗಿ ಸೆಪ್ಟೆಂಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು.
ಕಾನೂನು ಪ್ರಕಾರ ನೋಂದಣಿ
ಮುಗಿಯುವ ಕನಿಷ್ಠ 6 ತಿಂಗಳ ಮುಂಚೆಯೇ ನವೀಕರಣ ಮಾಡಬೇಕಾಗಿದೆ.
ಕಾನೂನು ಬದಲಾವಣೆ
ಹಿಂದೆ ಒಮ್ಮೆ ನೋಂದಣಿ ಮಾಡಿದರೆ ಜೀವಿತಾವಧಿಗೆ ಸಾಕಾಗುತ್ತಿತ್ತು. ಆದರೆ 2020ರ ಹಣಕಾಸು ಕಾಯಿದೆ ಪ್ರಕಾರ 2021ರಿಂದ ಪ್ರತೀ 5 ವರ್ಷಕ್ಕೊಮ್ಮೆ ನವೀಕರಣ ಕಡ್ಡಾಯವಾಗಿದೆ.
ಕಂಡೋನೇಷನ್ ಅವಕಾಶ
ನಿಗದಿತ ದಿನಾಂಕಕ್ಕಿಂತ ಮುಂಚೆ ಫಾರ್ಮ್ 10ಎ ಸಲ್ಲಿಸದಿದ್ದರೆ, ಈಗ ಇ-ಫೈಲಿಂಗ್ ಪೋರ್ಟಲ್ನಲ್ಲಿ ಕ್ಷಮಾದಾನ (condonation) ಅರ್ಜಿ ಸಲ್ಲಿಸಬಹುದು. ಪ್ರಧಾನ ಆಯುಕ್ತರು ಅಥವಾ ಆಯುಕ್ತರು ತೀರ್ಮಾನ ಕೈಗೊಳ್ಳುತ್ತಾರೆ. ತಿರಸ್ಕರಿಸಿದರೆ ಟ್ರಿಬ್ಯೂನಲ್ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.


ನವೀಕರಣ ವಿಧಾನ
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ನವೀಕರಿಸಬೇಕು.
ಸಂಸ್ಥೆಯ ಪ್ಯಾನ್ ನಂಬರ್ ಬಳಸಿ ಲಾಗಿನ್ ಮಾಡಬೇಕು.
ಮೊದಲ ನವೀಕರಣಕ್ಕೆ ಫಾರ್ಮ್ 10ಎ ಮತ್ತು ಮುಂದಿನ ನವೀಕರಣಕ್ಕೆ ಫಾರ್ಮ್ 10ಬಿ ಬಳಸಬೇಕು.
ಪ್ಯಾನ್, ನೋಂದಣಿ ಸಂಖ್ಯೆ, ಚಟುವಟಿಕೆಗಳ ವಿವರ ಸೇರಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ಡಿಜಿಟಲ್ ಸಿಗ್ನೆಚರ್ (DSC) ಅಥವಾ ಇವಿಸಿ ಬಳಸಿ ಅರ್ಜಿ ಸಲ್ಲಿಸಬೇಕು.
ಪರಿಶೀಲನೆ ಬಳಿಕ, ಇಲಾಖೆಯು ತೃಪ್ತಿಯಾದರೆ 5 ವರ್ಷದ ಮಾನ್ಯತೆ ಹೊಂದಿದ ನವೀಕೃತ ಪ್ರಮಾಣಪತ್ರ ನೀಡುತ್ತದೆ.


ಪರಿಣಾಮ
ದೇಶದಲ್ಲಿ ಟ್ರಸ್ಟ್ಗಳು, ಸೊಸೈಟಿಗಳು ಮತ್ತು ಎನ್ಜಿಒಗಳಂತಹ ದತ್ತಿ ಮತ್ತು ಲಾಭರಹಿತ ಸಂಸ್ಥೆಗಳು ಆದಾಯ ತೆರಿಗೆ ಕಾಯಿದೆ-1961ರ ಸೆಕ್ಷನ್ 12ಎ ಮತ್ತು 80ಜಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಮತ್ತು ದಾನಿ ಪ್ರಯೋಜನ ಸಿಗಲಿದೆ.
80ಜಿಯಿಂದ ದಾನ ನೀಡುವವರು ಆದಾಯ ವಿನಾಯಿತಿ ಪಡೆಯಬಹುದು. 12ಎಯಿಂದ ಟ್ರಸ್ಟ್ಗಳು ಪಡೆದ ದಾನಗಳಿಗೆ ತೆರಿಗೆ ವಿನಾಯಿತಿ ಲಭಿಸುತ್ತದೆ.
ನವೀಕರಣ ಕಡ್ಡಾಯವಾ ಗುವುದರಿಂದ ಟ್ರಸ್ಟ್ಗಳ ಚಟುವಟಿಕೆ, ಹಣಕಾಸು ದಾಖಲೆಗಳ ಪಾರದರ್ಶಕತೆ ಹೆಚ್ಚಲಿದೆ. ದಾನಿಗಳಲ್ಲಿ ವಿಶ್ವಾಸ ಹೆಚ್ಚಿಸಿ, ಕಾನೂನು ಪಾಲನೆ ಮತ್ತು ಹೊಣೆಗಾರಿಕೆ ಬಲಪಡಲಿದೆ.




