July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶರೀರ ಹಗುರವಾದರೆ ಮನಸ್ಸು ಹಗುರವಾಗುತ್ತದೆ – ಡಾ. ಸುರೇಶ ನೆಗಳಗುಳಿ

ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆ – ವಾಕಥಾನ್

ಸ್ಥಳೀಯ ನಾಟೆಕಲ್ಲಿನ‌ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಆಯುರ್ವೇದ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 24ರಂದು ನಡಿಗೆಯಲ್ಲಿ ಆರೋಗ್ಯ ಬಿಂಬಿಸುವ ವಾಕಥಾನ್ ನಡೆಸಲಾಯಿತು. ಅಂತಾರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿಯವರು ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ಕಣಚೂರು ಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಡಿಗೆಯ ಮಹತ್ವ ಸಾರುವ ಫಲಕ ಸಹಿತವಾಗಿ ರಸ್ತೆಯುದ್ದಕ್ಕೂ ಮೆರವಣಿಗೆ ನಡೆಸಿದರು. ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಶ್ರೀಮಾ ಪ್ರಿಯದರ್ಶಿನಿಯವರು ಕ್ರೀಡೆಯ ಮಹತ್ವ ಮತ್ತು ಹೇಗೆ ಸದಾ ಉಲ್ಲಾಸದಿಂದಿರಲು ಅದು ಸಹಕರಿಸಬಹುದು ಎನ್ನುತ್ತಾ ಸದಾ ಚಲನ ಶೀಲತೆ ಅತ್ಯಗತ್ಯ ಎಂದರು.

ಆಶಯ ಭಾಷಣ ಮಾಡುತ್ತಾ ಸಂಸ್ಥೆಯ ಮಾರ್ಗದರ್ಶಕ ಡಾ. ಸುರೇಶ ನೆಗಳಗುಳಿಯವರು ಶರೀರ ಲಾಘವತ್ವ ಮತ್ತು ನಡಿಗೆಯಿಂದ ರಕ್ತ ಸಂಚಾರದ ಸುಗಮತೆ ಬಗ್ಗೆ ಆಶು ಕವನ ಸಹಿತವಾಗಿ ಜಡ ಭರತನಂತೆ ಬಿದ್ದಿರದೆ ಸದಾ ಚುರುಕುತನ‌ ರೂಢಿಸಿಕೊಳ್ಳಲು ತಿಳಿಸುತ್ತಾ ಶುಭ ಕೋರಿದರು. ಚೇರ್ಮನ್ ಹಾಜಿ ಡಾ. ಕಣಚೂರು ಮೋನುರವರು ಆಯುರ್ವೇದ ವೈದ್ಯ ಪದ್ಧತಿ ಹಾಗೂ ತಮ್ಮ ಸಂಸ್ಥೆಯೂ ಇದಕ್ಕೆ ನೀಡುವ ಮಹತ್ವದ ಸಲುವಾಗಿ ಸ್ಥಾಪಿಸಿದ ಈ ಸಂಸ್ಥೆಯು ಭಾರತೀಯ ವೈದ್ಯ ಪದ್ಧತಿಯ ಅನುಸರಣೆಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.

ಪ್ರಾಚಾರ್ಯೆ ಡಾ. ವಿದ್ಯಾಪ್ರಭಾ ಸ್ವಾಗತಿಸಿ ಡಾ. ಸೌಮ್ಯಾ ಅಶೋಕ್ ಧನ್ಯವಾದ ಹಾಗೂ ಪೂರ್ಣ ನಿರ್ವಹಣೆ ಮಾಡಿದರು. ಡಾ ಕಾರ್ತಿಕೇಯ ಪ್ರಸಾದ್, ಡಾ. ಭವ್ಯಾ ಪ್ರವೀಣ್ ಮತ್ತಿತರರು ಸಕ್ರಿಯರಾಗಿ ಭಾಗವಹಿಸಿದ್ದರು. ಸ್ಥಳೀಯ ಪಿಸಿಯೋಥೆರಪಿ ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಶಿಕ್ಷಕರೂ ದೇರಳಕಟ್ಟೆ ಪರ್ಯಂತ ವಾಕಥಾನ್ ನಡೆಸಿದರು. ಭಾಗವಹಿಸಿದ ಎಲ್ಲರಿಗೂ ಪದಕಹಾರ ಹಾಕಲಾಯಿತು.

You may also like

News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು

You cannot copy content of this page