August 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಿಟ್ಲದ ಫಿಟ್ ನೆಸ್ ಮಲ್ಟಿ ಜಿಮ್ ಮಾಲಕ ಸುನಿಲ್ ಪಾಯ್ಸ್ ಅಮೆರಿಕಾದ ಒಲಿಂಪಿಯಾ ಬಾಡಿ ಬಿಲ್ಡರ್ ಸ್ಪರ್ಧೆಗೆ ಆಯ್ಕೆ

4 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡ ಕೀರ್ತಿ

ವಿಟ್ಲದ ಫಿಟ್ ನೆಸ್ ಮಲ್ಟಿ ಜಿಮ್ ಮಾಲಕ ಸುನಿಲ್ ಪಾಯ್ಸ್ ರವರು ತಮ್ಮ ದೇಹದಾರ್ಢ್ಯ ಕೌಶಲ್ಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಹೆಗ್ಗಳಿಕೆ ಪಡೆದಿದ್ದಾರೆ. ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಐ.ಎನ್.ಬಿ.ಎ. ಏಷ್ಯಾ ನ್ಯಾಚುರಲ್ ಗೇಮ್ಸ್ 2025 ಓಪನ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಅವರು ವಿವಿಧ ವಿಭಾಗಗಳಲ್ಲಿ 4 ಚಿನ್ನದ ಪದಕಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಈ ಸಾಧನೆಯ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ನಡೆಯಲಿರುವ ಪ್ರತಿಷ್ಠಿತ ನ್ಯಾಚುರಲ್ ಒಲಿಂಪಿಯಾ ಬಾಡಿ ಬಿಲ್ಡರ್ ಸ್ಪರ್ಧೆ – 2025ಕ್ಕೆ ಅವರು ಆಯ್ಕೆಯಾಗಿದ್ದಾರೆ. ಸುನಿಲ್ ಪಾಯ್ಸ್ ಹಲವು ವರ್ಷಗಳಿಂದ ವಿಟ್ಲದ ಅರಮನೆ ರಸ್ತೆ ಪ್ರದೇಶದಲ್ಲಿ ಫಿಟ್‌ನೆಸ್ ಜಿಮ್ ನಡೆಸುತ್ತಿದ್ದು, ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಈ ಹಿಂದೆ ದೇಶ-ವಿದೇಶಗಳಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗಳಿಸಿರುವ ಅವರು, ಇದೀಗ ಅಮೆರಿಕಾದ ಒಲಿಂಪಿಯಾ ವೇದಿಕೆಯತ್ತ ಹೆಜ್ಜೆ ಇಟ್ಟಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಹೆಗ್ಗಳಿಕೆ ಪಡೆಯಲು ಸುನಿಲ್ ರವರು ದಿನನಿತ್ಯ ಶಿಸ್ತಿನ ತರಬೇತಿ, ಕಟ್ಟುನಿಟ್ಟಿನ ಆಹಾರ ಪದ್ಧತಿ, ನಿರಂತರ ಅಭ್ಯಾಸ ಹಾಗೂ ಪರಿಶ್ರಮವನ್ನು ಮುಂದುವರಿಸಬೇಕಿದೆ. ಇಂತಹ ನಿರಂತರ ಪರಿಶ್ರಮ ಹಾಗೂ ಕಠಿಣ ಅಭ್ಯಾಸವೇ ಅವರಿಗೆ ಭವಿಷ್ಯದಲ್ಲೂ ಹೆಚ್ಚಿನ ಯಶಸ್ಸು ತಂದುಕೊಡಲಿದೆ ಎಂಬ ನಂಬಿಕೆ ವ್ಯಕ್ತವಾಗಿದೆ. ವಿಟ್ಲದ ಹೆಮ್ಮೆಯಾದ ಸುನಿಲ್ ಪಾಯ್ಸ್ ರವರಿಗೆ ಅಮೆರಿಕಾದ ಒಲಿಂಪಿಯಾ ಬಾಡಿ ಬಿಲ್ಡರ್ ಸ್ಪರ್ಧೆಯಲ್ಲಿ ಭಾರೀ ಯಶಸ್ಸು ದೊರೆಯಲಿ ಎಂಬುದು ಎಲ್ಲಾ ಕ್ರೀಡಾಭಿಮಾನಿಗಳ ಹಾರೈಕೆ.

You may also like

News

ಮೊಬೈಲ್‌ಗಾಗಿ ಜಗಳ ತಂಗಿಯ ಕೊಲೆ – ಸಹೋದರ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾನಿಗೆ 5 ವರ್ಷ ಜೈಲು!

ಮೊಬೈಲ್ ವಿಚಾರವಾಗಿ ನಡೆದ ಜಗಳದ ವೇಳೆ ಸ್ವಂತ ತಂಗಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ.
News

ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ಧರ್ಮಸ್ಥಳದಲ್ಲಿ 28ನೇ ಭಜನಾ ಕಮ್ಮಟ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಮಂಗಳವಾರ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಭಜನಾ ಕಮ್ಮಟದ

You cannot copy content of this page