May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಿಟಿ ವಲಯದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕುಲಶೇಖರದಲ್ಲಿ ಜೀವನ್ ಜ್ಯೋತಿ ಶಿಬಿರ ಆರಂಭ

ಮಂಗಳೂರು ಧರ್ಮಕ್ಷೇತ್ರದ ಸಿಟಿ ವಲಯದ 12 ಚರ್ಚ್‌ಗಳ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಮೂರು ದಿವಸಗಳ ಜೀವನ್ ಜ್ಯೋತಿ ಶಿಬಿರ ಕುಲಶೇಖರ ಚರ್ಚ್‌ನಲ್ಲಿ ಆರಂಭಗೊಂಡಿದೆ. ಉದ್ಘಾಟನಾ ಸಮಾರಂಭದಲ್ಲಿ ಸಿಟಿ ವಲಯದ ಶ್ರೇಷ್ಠ ಗುರು ಹಾಗೂ ವಾಮಂಜೂರು ಚರ್ಚ್‌ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ಜೇಮ್ಸ್ ಡಿಸೋಜ, ಕುಲಶೇಖರ ಕೋರ್ಡೆಲ್ ಚರ್ಚ್‌ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್, ವಂದನೀಯ ಫಾದರ್ ಜೀವನ್ ಶೈಲೇಶ್ ಲೋಬೊ, ಸಿಸ್ಟರ್ಸ್ ಆಫ್ ಚಾರಿಟಿಯ ಭಗಿನಿ ಸ್ಟೆಫಾನಿ ಹಾಗೂ ವಿಯಾನಿ ಪಿಂಟೊ ಉಪಸ್ಥಿತರಿದ್ದರು.

ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಮೂರು ದಿವಸಗಳ ಜೀವನ್ ಜ್ಯೋತಿ ಶಿಬಿರದಲ್ಲಿ ವಿದ್ಯಾಭ್ಯಾಸವನ್ನು ಉತ್ತಮವಾಗಿ ಮುಂದುವರಿಸುವ ಮಾರ್ಗಗಳು, ಭವಿಷ್ಯದ ಉದ್ಯೋಗ ಜೀವನಕ್ಕೆ ಬೇಕಾದ ಸಿದ್ಧತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ವಿಧಾನಗಳು, ಆಧ್ಯಾತ್ಮಿಕತೆಯ ಅರಿವು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು, ಸ್ನೇಹಿತರನ್ನು ಗೆಲ್ಲುವ ಕೌಶಲ್ಯಗಳು ಮತ್ತು ಸಮಾಜದಲ್ಲಿ ಪ್ರಭಾವ ಬೀರುವ ಗುಣಗಳನ್ನು ಬೆಳೆಸಿಕೊಳ್ಳುವ ಪಾಠಗಳನ್ನು ಕಲಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಶಿಸ್ತು, ಆತ್ಮವಿಶ್ವಾಸ, ಜವಾಬ್ದಾರಿತನ ಹಾಗೂ ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು, ತಮ್ಮ ಭವಿಷ್ಯವನ್ನು ದಿಟ್ಟವಾಗಿ ಕಟ್ಟಿಕೊಳ್ಳಲು ಸಹಾಯವಾಗುತ್ತದೆ.

ಕೌಮಾರ ದಶೆಯ (Teenage) ವಿದ್ಯಾರ್ಥಿಗಳು ಉತ್ತಮ ದಾರಿಯತ್ತ ಸಾಗಲು ಸಹಾಯ ಮಾಡುವ ಉದ್ದೇಶದಿಂದ ಈ ಶಿಬಿರವು ವಿವಿಧ ಚಟುವಟಿಕೆಗಳು ಹಾಗೂ ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳಿಗೆ ದಿಕ್ಕು ತೋರಿಸುವ ಕಾರ್ಯ ಮಾಡುತ್ತಿದೆ.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page