July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ವತಿಯಿಂದ ಕಲ್ಲಡ್ಕದ ಪಿಲಿ 2025 ಊದುಪೂಜೆ  ಹಾಗೂ ನಿತ್ಯರಕ್ಷಾ ಆಂಬುಲೆನ್ಸ್ ಸೇವಾರ್ಪಣೆ 

ಒಂದೇ ವೇದಿಕೆಯಲ್ಲಿ ಸಂಗಮವಾದ ಕಲ್ಲಡ್ಕದ ಎಲ್ಲಾ ವೈದ್ಯಾಧಿಕಾರಿಗಳು

ನಾಗರಾಜ್ ಕಲ್ಲಡ್ಕ ನೇತೃತ್ವದ ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ವತಿಯಿಂದ ಹೋಟೆಲ್ ಲಕ್ಷ್ಮಿ ಗಣೇಶ್ ಕಲ್ಲಡ್ಕದ ಸಹಕಾರದೊಂದಿಗೆ ಯಶಸ್ವಿ ಏಳನೇ ವರ್ಷದ ಕಲ್ಲಡ್ಕದ ಪಿಲಿ – 2025  ಸಾಂಪ್ರದಾಯಿಕ ದಸರಾ ಹುಲಿಗಳ ಊದು ಪೂಜೆ ಕಾರ್ಯಕ್ರಮ ಸೆಪ್ಟೆಂಬರ್ 30ರಂದು   ಮಂಗಳವಾರ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರದ ರಾಮಾಂಗಣದಲ್ಲಿ ಕಲ್ಲಡ್ಕ ಲಕ್ಷ್ಮಿ ಗಣೇಶ್ ಕೆ. ಟಿ. ಹೋಟೆಲ್ ಮಾಲಕರಾದ ಎನ್. ರಾಜೇಂದ್ರ ಹೊಳ್ಳರವರ ಅಧ್ಯಕ್ಷತೆಯಲ್ಲಿ  ಜರಗಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾಕ್ಟರ್ ಪ್ರಭಾಕರ ಭಟ್ ರವರು  ಕಲ್ಲಡ್ಕದಲ್ಲಿ  ಸೇವೆ ನೀಡುತ್ತಿರುವ ವೈದ್ಯರುಗಳನ್ನು ಗೌರವಿಸಿ ಮಾತನಾಡಿ, ಕಲ್ಲಡ್ಕ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಎಲ್ಲಾ ವೈದ್ಯಾಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿಸಿ ಅವರ ಸಮ್ಮುಖದಲ್ಲಿ  ಜನರಿಗೆ ತುರ್ತು ಅಗತ್ಯ ಇರುವಂತಹ ತುರ್ತು ಚಿಕಿತ್ಸೆ ವಾಹನ “ನಿತ್ಯರಕ್ಷಾ ಆಂಬುಲೆನ್ಸ್” ಸೇವಾರ್ಪಣೆ ಮಾಡುವಂತ ನಾಗ ಸುಜ್ಞಾನ  ಫ್ರೆಂಡ್ಸ್ ಕಲ್ಪನೆ ಪ್ರಸಂಶನೀಯವಾದದ್ದು, ಧರ್ಮ ಕಾರ್ಯ ನಿರ್ಭಯವಾಗಿ ನಿತ್ಯ ನಿರಂತರ ನಡೆಯಲಿ ಎಂದರು. ನಂತರ ಅಂಬುಲೆನ್ಸ್ ಲೋಕರ್ಪಣೆ ಮಾಡಿ ವಾಹನದ ಜವಾಬ್ದಾರಿಯನ್ನು ವಹಿಸಿಕೊಂಡ ಮಿಥುನ್ ಪೂಜಾರಿಯವರಿಗೆ ವಾಹನದ ಕಿ ಹಸ್ತಾಂತರಿಸಿದರು. ನಂತರ ಸಾಂಪ್ರದಾಯಿಕ ದಸರಾ ಹುಲಿಗಳ ಊದು ಪೂಜೆ  ಕಾರ್ಯಕ್ರಮ ಜರಗಿತು.

ವೇದಿಕೆಯಲ್ಲಿ ಡಾಕ್ಟರ್ ಕಮಲ ಪ್ರಭಾಕರ್ ಭಟ್, ಡಾಕ್ಟರ್ ರೇಷ್ಮಾ ಉಳ್ಳಾಲ್, ಡಾಕ್ಟರ್ ಎಚ್. ರಾಜೀವ ಶೆಟ್ಟಿ, ಡಾಕ್ಟರ್ ಚಂದ್ರಶೇಖರ್, ಡಾಕ್ಟರ್ ಶೈಲೇಂದ್ರ ಎಸ್. ಎಸ್., ಡಾಕ್ಟರ್ ರವಿಕಿರಣ್, ಡಾಕ್ಟರ್ ಮನೋಜ್, ಡಾಕ್ಟರ್ ಕೆ. ಆರ್. ಎಸ್. ಕಿನಿಲಾ, ಡಾ ಸುಕೇಶ್ ಕಲ್ಲಡ್ಕ, ಡಾಕ್ಟರ್ ಪ್ರಶಾಂತ್ ಕುಮಾರ್ ಕಲ್ಲಡ್ಕ, ನ್ಯಾಯವಾದಿ ಅರುಣ್ ಶ್ಯಾಮ್, ಗಣಪತಿ ಸ್ವಾಮೀಜಿ, ಮೊದಲಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಮೊದಲು ಕಲಾಮಯಂ ಉಡುಪಿ ಅವರಿಂದ ಜಾನಪದ ಕಲರವ ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮ, ವೈವಾಹಿಕ ಜೀವನದಲ್ಲಿ ಮೂರು ದಶಕ ಪೂರ್ಣಗೊಳಿಸಿದ ದಂಪತಿಗಳ ಸಂಗಮ “ನಿತ್ಯದಂಪತಿ” ಕಾರ್ಯಕ್ರಮ, 1ರಿಂದ 9 ವರ್ಷದ ಮಕ್ಕಳಿಗೆ “ಬಾಲಭೋಜನ” ಕಾರ್ಯಕ್ರಮ ಜರಗಿತು.

ನಾಗ ಸುಜ್ಞಾನ  ಫ್ರೆಂಡ್ಸ್ ನ ಮುಖ್ಯಸ್ಥರಾದ  ನಾಗರಾಜ್ ಕಲ್ಲಡ್ಕ  ಸ್ವಾಗತಿಸಿ, ಪ್ರದೀಪ್ ಕೆಂಪುಗುಡ್ಡೆ ವಂದಿಸಿದರು. ಕುಮಾರ್ ವಿಟ್ಲ ಹಾಗೂ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.

You may also like

News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು

You cannot copy content of this page