May 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಸಯಾನ್ ಜೋಶ್ವಾ ಪಿರೇರಾ ಆಯ್ಕೆ

ದೆರೆಬೈಲ್ ಚರ್ಚ್ ನ ಯುವಕ ಜಿಲ್ಲಾ ಮಟ್ಟದ ಚುನಾವಣೆಯಲ್ಲಿ ಮೆರೆದ ಸಾಧನೆ

ದಕ್ಷಿಣ ಕನ್ನಡ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳ ಸರ್ವ ಕಾಲೇಜು ವಿದ್ಯಾರ್ಥಿ ಸಂಘ (ರಿ.) ಇದರ ಉಪಾಧ್ಯಕ್ಷರಾಗಿ ಸಯಾನ್ ಜೋಶ್ವಾ ಪಿರೇರಾ ಆಯ್ಕೆಯಾಗಿದ್ದಾರೆ.

ಮಂಗಳೂರು ಸಂತ ಅಲೋಸಿಯಸ್ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿರುವ ಸಯಾನ್ ರವರು ತಮ್ಮ ನಾಯಕತ್ವ ಗುಣ, ವಿನಯಶೀಲತೆ ಹಾಗೂ ಇತರರನ್ನು ಪ್ರೇರೇಪಿಸುವ ಸಾಮರ್ಥ್ಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಂಡಭಾವನೆ, ಜವಾಬ್ದಾರಿತನ ಮತ್ತು ವಿದ್ಯಾರ್ಥಿ ಕಲ್ಯಾಣದ ದೃಷ್ಟಿಕೋನ ಇವರನ್ನು ಈ ಗೌರವಾನ್ವಿತ ಸ್ಥಾನಕ್ಕೆ ತಂದು ನಿಲ್ಲಿಸಿದೆ.

ಆತ್ಮವಿಶ್ವಾಸಿ ಮತ್ತು ಸಹಾನುಭೂತಿಶೀಲ ಯುವ ನಾಯಕನಾದ ಸಯಾನ್ ರವರು ಸೇವಾ ಮನೋಭಾವ ಮತ್ತು ಶ್ರೇಷ್ಠತೆಗಾಗಿ ಮಾಡಿದ ಹೋರಾಟದ ಪ್ರತೀಕವಾಗಿದ್ದಾರೆ. ಈ ಹೊಸ ನಾಯಕತ್ವದ ಅಧ್ಯಾಯದಲ್ಲಿ ದೇವರ ಆಶೀರ್ವಾದದೊಂದಿಗೆ ಯಶಸ್ಸುಗಳು ದೊರಕಲಿ ಎಂದು ಮಂಗಳೂರು ಧರ್ಮಕ್ಷೇತ್ರದ ದೆರೆಬೈಲ್ ಧರ್ಮಕೇಂದ್ರದ ಸಮುದಾಯ ಹಾರೈಸಿದೆ.

ಸಯಾನ್ ಜೋಶ್ವಾರವರಿಗೆ ದೆರೆಬೈಲ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಪಾದರ್ ಜೋಸೆಫ್ ಮಾರ್ಟಿಸ್, ಸಹಾಯಕ ಧರ್ಮಗುರು ವಂದನೀಯ ಪಾದರ್ ಸ್ಟೀವನ್ ನೆಲ್ಸನ್ ಪೆರಿಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಶೀಲಾ ಡಿಸೋಜ, ಕಾರ್ಯದರ್ಶಿ ಡೆನ್ಸಿಲ್ ಪಿಂಟೊ, ಆಯೋಗಗಳ ಸಂಯೋಜಕ ಅನಿಲ್ ಪಾತ್ರಾವೊ, AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಹಾಗೂ ಉದ್ಯಮಿ ಪಿಯೂಸ್ ಎಲ್. ರೊಡ್ರಿಗಸ್, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೆರೆಬೈಲ್, ದೆರೆಬೈಲ್ ಘಟಕ ಅಧ್ಯಕ್ಷ ನೆಲ್ಸನ್ ಕ್ಯಾಸ್ತೆಲಿನೊ, ಕಾರ್ಯದರ್ಶಿ ಶೈಲಾ ನೊರೊನ್ಹಾ ಮತ್ತು ದೆರೆಬೈಲ್ ಧರ್ಮಕೇಂದ್ರದ ಸದಸ್ಯರಿಂದ ಶುಭಾಶಯಗಳು ಮತ್ತು ಆಶೀರ್ವಾದಗಳ ಮಹಾಪೂರವೇ ಹರಿದು ಬಂದಿದೆ.

ಸಯಾನ್ ಜೋಶ್ವಾ ಪಿರೇರಾರವರು ದೆರೆಬೈಲ್ ನ ಜೋಸೆಫ್ ಪಿರೇರಾ ಮತ್ತು ಸೀಮಾ ದಂಪತಿಗಳ ಪುತ್ರ.

You may also like

News

Mumbai Archbishop Cardinal Oswald Gracias Offers Solace to Residents of Saint Anthony’s Ashram

MANGALURU: His Eminence Cardinal Oswald Gracias, Archbishop of Mumbai and a member of the Pope’s Council of Cardinals, paid a
News

ಸೂರಿಕುಮೇರು – ಮಾಣಿಯಲ್ಲಿ ಅದ್ದೂರಿ ‘ಅನ್ಫಾಲ್ ರೆಸ್ಟೋರೆಂಟ್’ ಮೇ 3ರಂದು ಉದ್ಘಾಟನೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಭಾಗಿ ಉದ್ಘಾಟನಾ ಭವ್ಯ ಸಮಾರಂಭದಲ್ಲಿ ಮೂವರು ಸಾಧಕರಾದ ಚೇತನ್ ರೈ, ನಾಗರಾಜ್ ಶೆಟ್ಟಿ ಹಾಗೂ ಯಾಸೀರ್ ಕಲ್ಲಡ್ಕ

You cannot copy content of this page