May 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಹಲ್ಲೆ ಪ್ರಕರಣ – ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ

ಮದುವೆ ಕಾರ್ಯಕ್ರಮದ ವೇಳೆ ವಾಗ್ವಾದದಿಂದ ಉಂಟಾದ ಹಲ್ಲೆಇಬ್ಬರ ಪರಸ್ಪರ ದೂರು

ಶಬೀರ್ ಅಲಿಯಾಸ್‌ ಚಬ್ಬಿ ಅವರ ನಿಖಾಹ (ಮದುವೆ) ಕಾರ್ಯಕ್ರಮದ ವೇಳೆ ನಡೆದ ಹಲ್ಲೆ ಘಟನೆಯ ಹಿನ್ನೆಲೆಯಲ್ಲಿ, ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪಿರ್ಯಾದಿದಾರ ಅಬುಸಾಲಿ ಆದಂ ಕುಂಞರವರು ನೀಡಿದ ದೂರಿನ ಪ್ರಕಾರ, ಅಬ್ದುಲ್ ರಹಿಮಾನ್ ಅವರ ಪ್ರಚೋದನೆಗೆ ರೈಯೀಸ್ ಎಂಬವರು ರಾಡ್‌ನಿಂದ ಹಣೆಗೆ ಹೊಡೆದು ಗಾಯಪಡಿಸಿದ್ದು, ಇತರ ಆರೋಪಿಗಳು ಸೇರಿ ಅವರನ್ನು ನೆಲಕ್ಕೆ ದೂಡಿ ತುಳಿದು, ಕಲ್ಲು ಎಸೆದು ಕಾಲಿಗೆ ಗಾಯಪಡಿಸಿದ್ದಾರೆ ಎಂದು ಹೇಳಲಾಗಿದೆ. ಶಬೀರ್ ರವರ ಮದುವೆಗೆ ಪಿರ್ಯಾದಿದಾರರು ಸಹಕರಿಸಿದ್ದೇ ಘಟನೆಯ ಮೂಲ ಕಾರಣ ವಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 142/2025 ಕಲಂ: 118(1), 115(2), 351(2) r/w 190 BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಯಾದ ಅಹಮದ್ ರೈಯೀಸ್ ರವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದೆ.

ಇದೇ ವೇಳೆ, ಈ ಘಟನೆಯಲ್ಲಿ ಪಿರ್ಯಾದಿದಾರ ಅಹಮದ್ ರೈಯೀಸ್ ರವರು ತಮಗೂ ಹಲ್ಲೆ ನಡೆದಿದೆ ಎಂದು ಪ್ರತಿ ದೂರು ನೀಡಿದ್ದು, ಆ ಆಧಾರದ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 144/2025 ಕಲಂ: 352, 118(1), 115(2), 351(2) r/w 3(5) BNS-2023 ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ ಎರಡೂ ಪರಸ್ಪರ ದೂರುಗಳನ್ನು ನ್ಯಾಯ ಸಮ್ಮತವಾಗಿ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

You may also like

News

ವಾಣಿಜ್ಯ ಸಿಲಿಂಡರ್ ದರ ಏರಿಕೆ – ಕೇಂದ್ರದ ವಿರುದ್ಧ MLC ಐವನ್ ಡಿಸೋಜ ಆಕ್ರೋಶ

ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹991ಕ್ಕೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವು ಜನವಿರೋಧಿಯಾಗಿದ್ದು, ಇದನ್ನು ವಿಧಾನ ಪರಿಷತ್ ಸದಸ್ಯರಾದ ಐವನ್
News

ನೀರುಮಾರ್ಗ ಚರ್ಚ್‌ನಲ್ಲಿ ಸಂಭ್ರಮದ ‘ಸಮುದಾಯ ದಿನಾಚರಣೆ’ – ಇಂದು ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭೋಜನ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ನೀರುಮಾರ್ಗದ ಸೈಂಟ್ ಜೋಸೆಫ್ ದಿ ವರ್ಕರ್ ಚರ್ಚ್‌ನಲ್ಲಿ ಇಂದು ‘ಸಮುದಾಯ ದಿನಾಚರಣೆ’ಯನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಈ ವಿಶೇಷ ದಿನದ ಅಂಗವಾಗಿ ಚರ್ಚ್

You cannot copy content of this page