July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ ಬಿಂದು ಜ್ಯುವೆಲ್ಲರಿ ನೂತನ ಶೋರೂಂ ಉದ್ಘಾಟನೆ

ಗುಣಮಟ್ಟ, ನಂಬಿಕೆ ಹಾಗೂ ಆಧುನಿಕ ವಿನ್ಯಾಸದ ಚಿನ್ನಾಭರಣಗಳ ಮೂಲಕ ಗ್ರಾಹಕರ ಹೃದಯ ಗೆದ್ದ ಬಿಂದು ಜ್ಯುವೆಲ್ಲರಿ – ನಟಿ ಸ್ನೇಹಾ ಪ್ರಶಂಸೆಗಳ ಸುರಿಮಳೆ

ಚಿನ್ನಾಭರಣ ಕ್ಷೇತ್ರದಲ್ಲಿ 40 ವರ್ಷಗಳಿಂದ ಪ್ರಸಿದ್ಧಿ ಪಡೆದಿರುವ, ಕೇರಳದ ಬಿಂದು ಜ್ಯುವೆಲ್ಲರಿ ಸಂಸ್ಥೆಯ ನೂತನ ಶೋರೂಂ ಅನ್ನು ರಾಮಕೃಷ್ಣ ಆಶ್ರಮದ ಸ್ವಾಮಿ ಯುಗೇಶಾನಂದ ಸ್ವಾಮೀಜಿ, ಶಾಸಕ ವೇದವ್ಯಾಸ ಕಾಮತ್, ಯು.ಟಿ. ಇಫ್ತಿಕಾರ್ ಫರೀದ್ ಹಾಗೂ ಕೆನರಾ ಚೇಂಬರ್ ಅಧ್ಯಕ್ಷ ಪಿ.ಬಿ. ಅಹಮದ್ ಮುದಸರ್ ಮತ್ತು ಪಾಲುದಾರ ಶೋಭನ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ದಕ್ಷಿಣ ಭಾರತದ ಖ್ಯಾತ ನಟಿ ಸ್ನೇಹಾ ಪ್ರಸನ್ನರವರು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, “ನಾನು ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ್ದೇನೆ. ಬಿಂದು ಜ್ಯುವೆಲ್ಲರಿ ಸಂಸ್ಥೆ ಮಹಿಳಾ ಉದ್ಯಮಿಗಳಿಗೆ ಸ್ಫೂರ್ತಿ ನೀಡುವ ಮಾದರಿ ಸಂಸ್ಥೆಯಾಗಿದೆ. ಇವರು ಗುಣಮಟ್ಟ, ನಂಬಿಕೆ ಹಾಗೂ ಆಧುನಿಕ ವಿನ್ಯಾಸದ ಚಿನ್ನಾಭರಣಗಳ ಮೂಲಕ ಗ್ರಾಹಕರ ಹೃದಯ ಗೆದ್ದಿದ್ದಾರೆ. ಬಿಂದು ಸಂಸ್ಥೆಯ ಯಶಸ್ಸಿನ ಹಿಂದೆ ನಿಷ್ಠೆ, ಪರಿಶ್ರಮ ಹಾಗೂ ಗ್ರಾಹಕರ ನಂಬಿಕೆಯಿದೆ. ಇಂತಹ ಸಂಸ್ಥೆಗಳು ದಕ್ಷಿಣ ಭಾರತದ ಆಭರಣ ಕ್ಷೇತ್ರಕ್ಕೆ ಹೊಸ ಮೆರುಗು ನೀಡುತ್ತಿವೆ. ಬಿಂದು ಜ್ಯುವೆಲ್ಲರಿ ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳಲಿ ಎಂಬುದು ನನ್ನ ಹಾರೈಕೆ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಟಿ ಸ್ನೇಹಾ ಪ್ರಸನ್ನರವರು ‘ಮೈ ಬ್ಲೂ ಡೈಮಂಡ್’ ಹಾಗೂ ‘ಸ್ವರ್ಣ ಬಿಂದು CSR’ ಎಂಬ ಲೋಗೋಗಳನ್ನು ಬಿಡುಗಡೆ ಮಾಡಿದರು. ಸಂಸ್ಥೆಯ ಮಾಲಕರು ಅಭಿಲಾಷ್ ಕೆ.ವಿ. ಹಾಗೂ ಡಾ. ಅಜಿತೇಶ್ ಕೆ.ವಿ. ಕುಟುಂಬ ಸಮೇತರಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಟರಾದ ಶೋಧನ್ ಶೆಟ್ಟಿ, ಅನೀಶ್, ಶಾಸಕ ಡಾ. ಭರತ್ ಶೆಟ್ಟಿ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿ ಶುಭಾಶಯ ಕೋರಿದರು. ಹೊಸ ಶೋರೂಂನಲ್ಲಿ ‘ಲೈಟ್ ವೈಟ್ ಜ್ಯುವೆಲ್ಲರಿ’ ಎಂಬ ವಿಶಿಷ್ಟ ಬ್ರಾಂಡ್ ಜೊತೆಗೆ ಅತ್ಯಾಧುನಿಕ ಡೈಮಂಡ್ ಸಂಗ್ರಹ ಕೂಡ ಗ್ರಾಹಕರಿಗೆ ಲಭ್ಯವಾಗಿದೆ.

You may also like

News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು

You cannot copy content of this page