August 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಾಮದಪದವು ಚರ್ಚ್ ನಲ್ಲಿ ಕಥೊಲಿಕ್ ಸಭಾ ಘಟಕದ ಪುನರ್ ಸ್ಥಾಪನೆ

ಅಧ್ಯಕ್ಷರಾಗಿ ಗ್ರೇಶಿಯನ್ ಸಲ್ಡಾನ್ಹಾ ಮತ್ತು ಕಾರ್ಯದರ್ಶಿಯಾಗಿ ವಲೇರಿಯನ್ ಡಿಸೋಜ ಆಯ್ಕೆ

ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಹಾಗೂ PRO ರೋಲ್ಫಿ ಡಿಕೋಸ್ತ ಮುಂದಾಳತ್ವ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ವಾಮದಪದವು ಘಟಕದ ಪುನರ್ ಸ್ಥಾಪನೆಯು ವಾಮದಪದವು ಚರ್ಚ್ ನಲ್ಲಿ ಚರ್ಚ್ ಧರ್ಮಗುರು ವಂದನೀಯ ಫಾದರ್ ಕಿರಣ್ ಮ್ಯಾಕ್ಸಿಂ ಪಿಂಟೊ ಇವರ ಮಾರ್ಗದರ್ಶನದಲ್ಲಿ ಅಕ್ಟೋಬರ್ 19ರಂದು ಭಾನುವಾರ ನಡೆಯಿತು. ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, PRO ಪಾವ್ಲ್ ರೋಲ್ಫಿ ಡಿಕೋಸ್ತ, ಉಪಾಧ್ಯಕ್ಷ ಹಾಗೂ ಘಟಕ ಪುನರ್ ಸ್ಥಾಪನೆ ಸಂಚಾಲಕ ಲಿಯೋ ರೊಡ್ರಿಗಸ್ ಮಡಂತ್ಯಾರ್, ಮೂಡಬಿದ್ರೆ ವಲಯ ಅಧ್ಯಕ್ಷ ಆಲ್ವಿನ್ ರೊಡ್ರಿಗಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮೂಡಬಿದ್ರೆ ವಲಯದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಘಟಕದ ಸದಸ್ಯರಿಗೆ ಉದ್ದೇಶಿಸಿ ಮಾತನಾಡಿದ ಸಂತೋಷ್ ಡಿಸೋಜ ಬಜ್ಪೆ ಇವರು “ಕಥೊಲಿಕ್ ಸಭಾದ ಮುಖ್ಯ ಗುರಿ ನಮ್ಮ ಸಹೋದರ ಸಹೋದರಿಯರ ಸೇವೆ ಮಾಡುವುದಾಗಿದೆ. ಸಹಾಯದ ಮನೋಭಾವ ಮತ್ತು ಏಕತೆ ನಮ್ಮ ಧರ್ಮದ ನಿಜವಾದ ಬಲವಾಗಿವೆ. ಪ್ರತಿಯೊಬ್ಬ ಕಥೊಲಿಕ್ ತನ್ನ ಸಮಯ, ಪ್ರತಿಭೆ ಮತ್ತು ಸಂಪತ್ತನ್ನು ಸಮಾಜದ ಹಿತಕ್ಕಾಗಿ ಬಳಕೆ ಮಾಡಿದಾಗ ದೇವರ ಪ್ರೀತಿಯನ್ನು ತೋರಿಸುತ್ತಾನೆ ಎಂದು ಹೇಳಿದರು.

ಪುನರ್ ಸ್ಥಾಪನೆಗೊಂಡ ಘಟಕದಿಂದ ನಮ್ಮ ಸಮುದಾಯವನ್ನು ಇನ್ನಷ್ಟು ಸಂಘಟಿತ, ಶಕ್ತಿಶಾಲಿ ಮತ್ತು ಸೇವಾಭಾವಯುತ ವಾಗಿಸೋಣ. ದೇವರ ಆಶೀರ್ವಾದದಿಂದ ನಾವು ಎಲ್ಲರೂ ಒಂದಾಗಿ ನಡೆದು, ಸಮಾಜದಲ್ಲಿ ನಿಜವಾದ ಕ್ರೈಸ್ತ ಸಾನ್ನಿಧ್ಯವನ್ನು ತೋರಿಸೋಣ ಎಂದು ಹೇಳಿ ಪುನರ್ ಸ್ಥಾಪನೆಗೊಂಡ ಘಟಕದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಕಥೊಲಿಕ್ ಸಭಾದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ ಶುಭ ಹಾರೈಸಿದರು.

ಇಂದು ವಾಮದಪದವು ಚರ್ಚ್ ನಲ್ಲಿ ಒಂದು ಹೊಸ ಪ್ರೇರಣೆಯ ದಿನವಾಗಿದೆ. ಪರಸ್ಪರ ಸಹಾಯ ಮಾಡುವುದಕ್ಕೂ, ಸಮಾಜದಲ್ಲಿ ಬೆಳಕಾಗುವುದಕ್ಕೆ ನಮ್ಮ ಕಥೊಲಿಕ್ ಸಭಾ ಘಟಕದ ಪುನರ್ ಸ್ಥಾಪನೆ ಇಲ್ಲಿ ನಡೆದಿದೆ. ದೇವರು ನಮ್ಮನ್ನು ಒಂದಾಗಿಸಿದ್ದಾರೆ. ನೆರವಿಗೆ ಹಾತೊರೆಯುವವರ ಕೈಹಿಡಿಯುವಾಗ ನಾವು ದೇವರ ಸೇವೆ ಮಾಡಿದಂತಾಗುತ್ತದೆ ಎಂದು ಕೇಂದ್ರೀಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್ ಮಡಂತ್ಯಾರ್ ತನ್ನ ಮಾತಿನಲ್ಲಿ ನೂತನ ಪದಾಧಿಕಾರಿಗಳಿಗೆ ಹೇಳಿದರು.

ಏಕತೆ ನಮ್ಮ ಶಕ್ತಿ, ಸೇವೆ ನಮ್ಮ ಧ್ಯೇಯ. ನಾವು ಎಲ್ಲರೂ ಒಂದೇ ಮನಸ್ಸಿನಿಂದ ನಡೆದುಕೊಂಡರೆ, ವಾಮದಪದವು ಘಟಕವು ನಮ್ಮ ಸಮುದಾಯಕ್ಕೆ ಮಾದರಿ ಘಟಕವಾಗಲಿದೆ. ದೇವರ ಕೃಪೆಯಿಂದ ಈ ಘಟಕ ಪ್ರೀತಿಯ, ಸಹಕಾರದ ಮತ್ತು ಸೇವೆಯ ಘಟಕವಾಗಲಿ ಎಂದು ವಲಯ ಅಧ್ಯಕ್ಷ ಆಲ್ವಿನ್ ರೊಡ್ರಿಗಸ್ ಕರೆ ನೀಡಿದರು.

ಕಥೊಲಿಕ್ ಸಭಾದ ಘಟಕದಿಂದ ಏಕತೆ ಮತ್ತು ಸಮುದಾಯದ ನಿರ್ಮಾಣ ಉತ್ತೇಜಿಸುವಂತಹ ಸಭೆಗಳು, ಕಾರ್ಯಕ್ರಮಗಳು ಮತ್ತು ಸಾಮಾಜಿಕ ಚಟುವಟಿಕೆಗಳು ನಡೆಯಲಿ. ಅವರು ಅಗತ್ಯವಿರುವವರಿಗೆ ಸಾಮಾಜಿಕ ಸೇವೆಯ ಬೆಂಬಲವನ್ನು ಒದಗಿಸುವ ಮತ್ತು ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯನ್ನು ಉತ್ತೇಜಿಸಲಿ ಎಂದು ಚರ್ಚ್ ಧರ್ಮಗುರು ವಂದನೀಯ ಫಾದರ್ ಕಿರಣ್ ಮ್ಯಾಕ್ಸಿಂ ಪಿಂಟೊ ಹೇಳಿ ಘಟಕದ ಪದಾಧಿಕಾರಿಗಳಿಗೆ ಹಾಗೂ ಎಲ್ಲಾ ಸದಸ್ಯರಿಗೆ ಆಶೀರ್ವದಿಸಿದರು.

ನೂತನ ಪದಾಧಿಕಾರಿಗಳ ಚುನಾವಣೆ ನಡೆಯಿತು. ಅಧ್ಯಕ್ಷ – ಗ್ರೇಶಿಯನ್ ಸಲ್ಡಾನ್ಹಾ, ಉಪಾಧ್ಯಕ್ಷ – ಪಾವ್ಲ್ ಡಿಸೋಜ, ಕಾರ್ಯದರ್ಶಿ – ವಲೇರಿಯನ್ ಡಿಸೋಜ, ಸಹ ಕಾರ್ಯದರ್ಶಿ – ಗ್ಲ್ಯಾಡ್ಸನ್ ಲಸ್ರಾದೊ, ಖಜಾಂಚಿ – ಲೆತೀಶಿಯ ಸೆರಾವೊ, ಆಮ್ಚೊ ಸಂದೇಶ್ ಪ್ರತಿನಿದಿ – ಜೋನ್ ಕಿರಣ್ ಲೋಬೊ, ಸ್ತ್ರೀ ಹಿತಾ ಸಂಚಾಲಕಿ – ಕ್ರಿಸ್ತಿನ್ ಸಿಕ್ವೇರಾ, ರಾಜಕೀಯ ಸಂಚಾಲಕ – ಲಾಜರತ್ ಮಿನೇಜಸ್, ಸಮುದಾಯ ಅಭಿವೃದ್ಧಿ ಸಂಚಾಲಕ – ಆಲ್ಬರ್ಟ್ ಡಿಸೋಜ ಮತ್ತು ಯುವ ಹಿತಾ ಸಂಚಾಲಕ – ರಿಚ್ಚರ್ಡ್ ಡಿಸೋಜ ಆಯ್ಕೆಗೊಂಡರು. ಚುನಾವಣಾ ಅಧಿಕಾರಿಯಾಗಿ ಪಾವ್ಲ್ ರೋಲ್ಫಿ ಡಿಕೋಸ್ತ ಮತ್ತು ಚುನಾವಣಾ ವೀಕ್ಷಕರಾಗಿ ಲಿಯೋ ರೊಡ್ರಿಗಸ್ ಚುನಾವಣೆಯನ್ನು ನಡೆಸಿಕೊಟ್ಟರು.

 

You may also like

News

ಓಣಂ ಸಂಭ್ರಮದ ನಡುವೆ ದುರಂತ – ತೆರೆದ ಬಾವಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು

ಓಣಂ ಆಚರಣೆಯ ಸಂಭ್ರಮದ ನಡುವೆ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಕನ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ನಡೆದಿದೆ. ಮೃತ
News

National Library Day Celebrated at Father Muller Charitable Institutions Mangaluru

The National Library Day was celebrated at Father Muller Charitable Institutions Central Library on 29th August 2026 at 3.00p.m. in

You cannot copy content of this page