July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪುತ್ತಿಲ ಕೈಯಲ್ಲಿ ಕತ್ತಿ – ಪೊಲೀಸ್ ಇಲಾಖೆ ಸ್ಪಷ್ಟನೆ

ತಪ್ಪು ಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ – ಪೊಲೀಸ್ ವರಿಷ್ಠಾಧಿಕಾರಿಗಳು

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಅಕ್ಟೋಬರ್ 22ರಂದು ಬುಧವಾರ ಮುಂಜಾನೆ ಜಾನುವಾರುಗಳ ರಕ್ಷಣೆಗಾಗಿ ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಿದ ಘಟನೆ ನಡೆದಿದೆ. ಒಟ್ಟು 12 ಜಾನುವಾರಗಳಲ್ಲಿ ಒಂದೇ ಜಾನುವಾರು ಸತ್ತಿದ್ದು, ಇತರ ಪ್ರತಿ ಜಾನುವಾರಿನ ಸಾವು ತಪ್ಪಿಸಲು ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳು ಕೈಜೋಡಿಸಿದ್ದಾರೆ.

ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಬಂದು ಪೊಲೀಸರು ಜಾನುವಾರಗಳನ್ನು ಸುರಕ್ಷಿತವಾಗಿ ವಾಹನದಿಂದ ಇಳಿಸಲು ಮಾಹಿತಿ ನೀಡಿ ಅನುಮತಿ ಕೋರಿರುತ್ತಾರೆ. ಈ ದೃಶ್ಯವು ವಿಡಿಯೋದಲ್ಲಿ ದಾಖಲಾಗಿದ್ದು, ಜನರಲ್ಲಿ ಸಹಕಾರದ ಮಹತ್ವವನ್ನು ತೋರಿಸುತ್ತದೆ.

ಸ್ಥಳೀಯರ ಸಹಕಾರದಿಂದ ಕತ್ತಿ ತಂದು ಹಗ್ಗಗಳನ್ನು ಕತ್ತರಿಸಿದ ಕ್ರಮ:

ಅರುಣ್ ಕುಮಾರ್ ಪುತ್ತಿಲ ಸ್ಥಳೀಯರ ನೆರವಿನಿಂದ ಹತ್ತಿರದ ಮುಸ್ಲಿಂ ಮನೆಯೊಂದರಿಂದ ತರಿಸಿದ ಕತ್ತಿಯನ್ನು ಬಳಸಿ ಜಾನುವಾರುಗಳನ್ನು ಕಟ್ಟಿದ್ದ ಹಗ್ಗಗಳನ್ನು ಸುರಕ್ಷಿತವಾಗಿ ಕತ್ತರಿಸಿದರು.

ಸ್ಥಳೀಯರ ಸಹಕಾರ – ಅಗತ್ಯದ ಸಮಯದಲ್ಲಿ ಮಹತ್ವ:

ಪೊಲೀಸರು ಅನೇಕ ಸಂದರ್ಭಗಳಲ್ಲಿ ಸ್ಥಳೀಯರ ಸಹಕಾರವನ್ನು ಪಡೆಯುತ್ತಾರೆ. ಉದಾಹರಣೆಗೆ ರೋಗಿಗಳನ್ನು ಸ್ಥಳಾಂತರಿಸುವುದು, ಶವಗಳನ್ನು ಸಾಗಿಸುವುದು, ರಸ್ತೆಗಳಿಂದ ವಾಹನಗಳನ್ನು ತೆರವುಗೊಳಿಸುವುದು, ಜಾನುವಾರುಗಳನ್ನು ಸುರಕ್ಷಿತವಾಗಿ ಇಳಿಸುವುದು‌ ಹೀಗೆ ಸ್ಥಳೀಯರ ಸಹಕಾರದಿಂದ ಅಪಾಯಗಳನ್ನು ತಡೆಯುವ ಮತ್ತು ಜನರ ಬದುಕನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಅಪರಾಧಿಗಳ ವಿಚಾರದಲ್ಲಿ ಧರ್ಮವು ಮುಖ್ಯವಲ್ಲ:

ಅರೋಪಿತರು ಯಾವ ಧರ್ಮಕ್ಕೆ ಸೇರಿದರೂ ಕಾನೂನಿನ ದೃಷ್ಟಿಯಿಂದ ಕೇವಲ ಅಪರಾಧಿಗಳೆಂದು ಪರಿಗಣಿಸಬೇಕು. ಜಾನುವಾರು ಸಾಗಣೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಗಳಲ್ಲಿ ಭಾಗವಹಿಸಿದ ಆರೋಪಿಗಳು ವಿವಿಧ ಧರ್ಮದವರಾಗಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ.

ಸಾಮಾಜಿಕ ಜವಾಬ್ದಾರಿ ಮತ್ತು ಎಚ್ಚರಿಕೆ:

ಯಾವುದೇ ಸಂಘಟನೆ ಅಥವಾ ವ್ಯಕ್ತಿಯು, ಆರೋಪಿಯು ಬೇರೆ ಧರ್ಮದವರಿದ್ದರಿಂದ ವಿಷಯವನ್ನು ಬೇರೆಯಾಗಿ ಮಂಡಿಸುತ್ತಿದ್ದರೆ, ಸಾರ್ವಜನಿಕರು ಎಚ್ಚರ ವಹಿಸಬೇಕು. ತಪ್ಪು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾನುವಾರು ರಕ್ಷಣೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸ್ಥಳೀಯರ ಸಹಕಾರ ಮಹತ್ವವನ್ನು ಪುನರ್ ದೃಢಪಡಿಸಿದೆ. ಜನರು ಯಾವುದೇ ತಪ್ಪು ಪ್ರಚಾರಕ್ಕೆ ಒಳಗಾಗದೇ, ಸತ್ಯದ ಬಗ್ಗೆ ಶ್ರದ್ಧೆ ಇರಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಿಂದ ತಪ್ಪು ಮಾಹಿತಿ ಸಾರ್ವಜನಿಕರಿಗೆ ನೀಡಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

You may also like

News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು
News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at

You cannot copy content of this page