ಚಿಕಿತ್ಸೆಗೆ ಬಂದ ಯುವತಿಗೆ ಲೈಂಗಿಕ ಕಿರುಕುಳ – ಚರ್ಮರೋಗ ತಜ್ಞ ಪ್ರವೀಣ್ ರೊಡ್ರಿಗಸ್ ಬಂಧನ
ಚಿಕಿತ್ಸೆ ಪಡೆಯಲು ಬಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚರ್ಮರೋಗ ತಜ್ಞನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಖಾಸಗಿ ಕ್ಲಿನಿಕ್‌ನಲ್ಲಿ ನಡೆದಿದೆ. ಬಂಧಿತ ವೈದ್ಯರನ್ನು ಪ್ರವೀಣ್ ರೊಡ್ರಿಗಸ್ ಎಂದು ಗುರುತಿಸಲಾಗಿದ್ದು, ಅವರು ಖಾಸಗಿ ಚರ್ಮರೋಗ ತಜ್ಞರಾಗಿದ್ದಾರೆ ಎಂದು ತಿಳಿದುಬಂದಿದೆ.





ಈ ಕುರಿತು 21 ವರ್ಷದ ಯುವತಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, “ನಾನು ಅಕ್ಟೋಬರ್ 18 ರಂದು ಚರ್ಮದ ಸೋಂಕು ಸಂಬಂಧ ಚಿಕಿತ್ಸೆ ಪಡೆಯಲು ಖಾಸಗಿ ಕ್ಲಿನಿಕ್‌ಗೆ ಹೋದೆ. ಚಿಕಿತ್ಸೆ ನೀಡುವ ಸಂದರ್ಭ ವೈದ್ಯರು ಅನಗತ್ಯವಾಗಿ ನನ್ನ ದೇಹದ ವಿವಿಧ ಭಾಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದರು.

ಸುಮಾರು 30 ನಿಮಿಷಗಳ ಕಾಲ ಮಾತನಾಡಿ, ಎರಡು ಬಾರಿ ನನ್ನನ್ನು ತಬ್ಬಿಕೊಂಡು ಎದೆಯ ಭಾಗ ಮುಟ್ಟಿದರು,” ಎಂದು ದೂರು ನೀಡಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.





