August 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸುರತ್ಕಲ್‌ನಲ್ಲಿ ಯುವಕರ ಮೇಲೆ ಚೂರಿಯಿಂದ ಇರಿದ ಪ್ರಕರಣ – ಆರೋಪಿಗಳಿಗೆ ಆಶ್ರಯ ನೀಡಿದ ಅರುಣ್ ಶೆಟ್ಟಿ ಸಹಿತ ನಾಲ್ವರ ಬಂಧನ

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಾದ ಬಳಿಯಲ್ಲಿ ಯುವಕರಿಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ಅಕ್ಟೋಬರ್ 23ರಂದು ರಾತ್ರಿ ಸುಮಾರು 10.30 ಗಂಟೆಗೆ ಸುರತ್ಕಲ್ ಕಾನಾ ಬಳಿಯ ದೀಪಕ್ ಬಾರ್ ಹತ್ತಿರ ನಡೆದಿದೆ. ಕ್ಷುಲಕ ಕಾರಣಕ್ಕಾಗಿ ಹಸನ್ ಮುಕ್ಷಿತ್ ಮತ್ತು ನಿಝಾಂ ಎಂಬ ಯುವಕರ ಮೇಲೆ ಗುರುರಾಜ್ ಆಚಾರಿ, ಅಲೆಕ್ಸ್ ಸಂತೋಷ್, ನಿತಿನ್ ಮತ್ತು ಸುಶಾಂತ್ ಸೇರಿಕೊಂಡು ಚೂರಿಯಿಂದ ಇರಿದು ದಾಳಿ ನಡೆಸಿದ್ದಾರೆ.

ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಹೀಗೆ ಗುರುತಿಸಿದ್ದಾರೆ:

  1. ಸುಶಾಂತ್ @ ಕಡವಿ (29) — ತಂದೆ ಆನಂದ, ವಾಸ: ಕಟ್ಲ ಮನೆ, ಕಾನಾ, ಸುರತ್ಕಲ್
  2. ಕೆ.ವಿ. ಅಲೆಕ್ಸ್ (27) — ತಂದೆ ವರ್ಗೀಸ್, ವಾಸ: ಬೈಕಲ ಮನೆ, ಕಾನಾ ಕಟ್ಲ, ಇಡ್ಯಾ ಗ್ರಾಮ, ಸುರತ್ಕಲ್
  3. ನಿತಿನ್ (26) — ತಂದೆ ಮಂಕು ಕುಲಾಲ್, ವಾಸ: ಶಿವಕೃಪಾ, ಇಂದಿರಾ ಕಟ್ಟೆ, ಸುರತ್ಕಲ್
  4. ಆರುಣ್ ಶೆಟ್ಟಿ (56) — ತಂದೆ ದಿ. ಡಿ. ಸುರೇಂದ್ರನಾಥ, ವಾಸ: ವಿದ್ಯಾನಗರ ರಸ್ತೆ, ಕುಳಾಯಿಗುಡ್ಡೆ, ಹೊನ್ನಕಟ್ಟೆ, ಸುರತ್ಕಲ್ (ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ)

ಈ ಪ್ರಕರಣದ ಪ್ರಮುಖ ಆರೋಪಿ ಗುರುರಾಜ್ ಆಚಾರಿ ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ ಅಶೋಕ್ ಎಂಬಾತರು ಇನ್ನೂ ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.

ಪ್ರಕರಣದ ಪತ್ತೆ ಮತ್ತು ತನಿಖೆ ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ರವಿಶಂಕರ್ ರವರ ನಿರ್ದೇಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪ ವಿಭಾಗ) ಶ್ರೀಕಾಂತ್ ಕೆ.ರವರ ಮಾರ್ಗದರ್ಶನದಲ್ಲಿ, ಸುರತ್ಕಲ್ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಮೋದ್ ಕುಮಾರ್ ಪಿ.ರವರ ನೇತೃತ್ವದಲ್ಲಿ ನಡೆದಿದೆ.

ಈ ಕಾರ್ಯಾಚರಣೆಯಲ್ಲಿ ಪಿಎಸ್ಐಗಳು ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್‌ಐಗಳು ರಾಜೇಶ್ ಆಳ್ವ, ತಾರನಾಥ, ರಾಧಾಕೃಷ್ಣ, ಸಿಬ್ಬಂದಿ ಅಣ್ಣಪ್ಪ, ಉಮೇಶ್ ಕುಮಾರ್, ತಿರುಪತಿ, ಅಜಿತ್ ಮ್ಯಾಥ್ಯೂ, ರಾಮು ಕೆ., ಕಾರ್ತಿಕ್, ವಿನೋದ್, ಸಿಸಿಬಿ ಘಟಕದ ಅಧಿಕಾರಿಗಳು, ಎಸ್‌ಎಎಫ್ ಹಾಗೂ ಶ್ವಾನ ದಳದವರು ಭಾಗವಹಿಸಿದ್ದರು.

You may also like

News

ಓಣಂ ಸಂಭ್ರಮದ ನಡುವೆ ದುರಂತ – ತೆರೆದ ಬಾವಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು

ಓಣಂ ಆಚರಣೆಯ ಸಂಭ್ರಮದ ನಡುವೆ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಕನ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ನಡೆದಿದೆ. ಮೃತ
News

National Library Day Celebrated at Father Muller Charitable Institutions Mangaluru

The National Library Day was celebrated at Father Muller Charitable Institutions Central Library on 29th August 2026 at 3.00p.m. in

You cannot copy content of this page