August 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೌಹಾರ್ದ ಸಾಹಿತ್ಯ ವೇದಿಕೆ ವತಿಯಿಂದ ವಿಶಿಷ್ಟ ಕವಿಗೋಷ್ಠಿ

ಸೌಹಾರ್ದ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಇದರ ಮಂಗಳೂರು ಘಟಕ ವತಿಯಿಂದ “ಕನ್ನಡವೇ ಸತ್ಯ ಕನ್ನಡವೇ ನಿತ್ಯ” ಸ್ವರಚಿತ ಕವನ ವಾಚನ ಹಾಗೂ ಸಾರಾಂಶ ಎಂಬ ವಿಶಿಷ್ಟ ಕವಿತಾ ಗೋಷ್ಠಿ ಯು ಸಾಂಗವಾಗಿ ಅಕ್ಟೋಬರ್ 25ರ ಇಳಿಹಗಲು ಮೂರು ಗಂಟೆಗೆ ಸಂಪನ್ನವಾಯಿತು.

 

ಇಂದಿರಾ ಪ್ರಿಯದರ್ಶಿನಿ ಪಾರ್ಕ್, ಆಯುಷ್ ಆಸ್ಪತ್ರೆ ಹತ್ತಿರ ಲಾಲ್ ಭಾಗ್, ಪಬ್ಬಾಸ್ ಎದುರು ಮಂಗಳೂರು. ಇಲ್ಲಿ ನಡೆದ ಈ ಗೋಷ್ಠಿಯಲ್ಲಿ ಉಮೇಶ್ ಕಾರಂತ್,  ಸುಲೋಚನ ನವೀನ,  ಡಾ. ಸುರೇಶ್ ನೆಗಳಗುಳಿ, ರೇಖಾ ಸುದೇಶ್ ರಾವ್, ಅಶ್ವಿಜ ಶ್ರೀಧರ್, ಅರುಣಾ ನಾಗರಾಜ, ಪರಿಮಳ ಮಹೇಶ್, ಕಸ್ತೂರಿ ಜಯರಾಂ, ಗಿರೀಶ್ ಪೆರಿಯಡ್ಕ, ಆಕೃತಿ ಭಟ್, ವಿನ್ಯಾಸ, ಡಾ| ಪ್ರತಿಭಾ ಸಾಲಿಯಾನ್, ಅನಿತಾ ಶೆಣೈ, ಆರ್. ಎಂ. ಗೊಗೇರಿ ಸಹಿತ ಹಲವರು ಪರಸ್ಪರ ಇತರರ ಕವನ ವಾಚನ ಮಾಡಿದರು ಮತ್ತು ಸದ್ರಿ ಕವಿಗಳು ಅದರ ಭಾವ ವಿಶ್ಲೇಷಣೆ ಮಾಡಿದರು. ಮೋಹನ್ ಅತ್ತಾವರ ಉಪಸ್ಥಿತರಿದ್ದರು. ಗೊಗೆರಿಯವರ ತೀರ್ಥರೂಪರು ಬರೆದಿದ್ದ ಕವನವನ್ನು ವಾಚಿಸಿದ್ದು ವಿಶೇಷವಾಗಿತ್ತು. ಸರ್ವರಿಗೂ ಹಾರ್ದಿಕ ಸ್ವಾಗತ ಮಾಡಿದ ಆರ್.ಎಂ. ಗೋಗೇರಿಯವರು ಪೂರ್ಣ ನಿರ್ವಹಣೆ ಮಾಡಿದರು. ಅನಿತಾ ಶೆಣೈಯವರು ಸಹಕರಿಸಿದ್ದರು.

You may also like

News

ಓಣಂ ಸಂಭ್ರಮದ ನಡುವೆ ದುರಂತ – ತೆರೆದ ಬಾವಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು

ಓಣಂ ಆಚರಣೆಯ ಸಂಭ್ರಮದ ನಡುವೆ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಕನ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ನಡೆದಿದೆ. ಮೃತ
News

National Library Day Celebrated at Father Muller Charitable Institutions Mangaluru

The National Library Day was celebrated at Father Muller Charitable Institutions Central Library on 29th August 2026 at 3.00p.m. in

You cannot copy content of this page