May 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರೋಸಾ ಮಿಸ್ಟಿಕಾ ಪಿಯು ಕಾಲೇಜಿನಲ್ಲಿ ಪ್ರಸಿದ್ದ ಗಾಯಕ ರೋನಿ ಕ್ರಾಸ್ತಾರವರಿಗೆ ಸನ್ಮಾನ

ಸಂಗೀತದ ನಾದದಲ್ಲಿ ಮೂಡಿದ ಸಾಂಸ್ಕೃತಿಕ ವೈಭವ

ಪ್ರಸಿದ್ಧ ಹಾಗೂ ಪ್ರತಿಭಾವಂತ ಗಾಯಕ ರೋನಿ ಕ್ರಾಸ್ತಾರವರನ್ನು ರೋಸಾ ಮಿಸ್ಟಿಕಾ ಪಿಯು ಕಾಲೇಜು ತನ್ನ ಸಾಂಸ್ಕೃತಿಕ ಹಬ್ಬದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಿ, ಸಂಗೀತ ಕ್ಷೇತ್ರದಲ್ಲಿ ನೀಡಿರುವ ಅವರ ಅಮೂಲ್ಯ ಕೊಡುಗೆಗಾಗಿ ಗೌರವಿಸಿ ಸನ್ಮಾನಿಸಿತು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕಿ ಸಿಸ್ಟರ್ ರೋಸ್ಲಿಟಾ ಬಿ.ಎಸ್., ಪ್ರಾಚಾರ್ಯೆ ಸಿಸ್ಟರ್ ಅನಿತಾ, ಪಿ.ಟಿ.ಎ. ಉಪಾಧ್ಯಕ್ಷ ದೀಪಕ್ ಕೋಟ್ಯಾನ್ ಹಾಗೂ ಕಾರ್ಯಕ್ರಮ ಸಂಯೋಜಕ ಉಪನ್ಯಾಸಕ ಅವಿಲ್, ಇತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗೌರವ ಸ್ವೀಕರಿಸಿದ ನಂತರ ರೋನಿ ಕ್ರಾಸ್ತಾರವರು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಹಾಗೂ ಕಲಾತ್ಮಕ ಪ್ರತಿಭೆಯನ್ನು ಉತ್ತೇಜಿಸಲು ಸಂಸ್ಥೆ ಕೈಗೊಂಡಿರುವ ಪ್ರಯತ್ನಗಳನ್ನು ಮೆಚ್ಚಿದರು. ತಮ್ಮ ಯಶಸ್ಸಿಗೆ ಭಗವಂತನ ಕೃಪೆ, ಹಿರಿಯರು ಹಾಗೂ ಗುರುಗಳ ಆಶೀರ್ವಾದ ಮತ್ತು ಜನರ ಪ್ರೋತ್ಸಾಹ ಕಾರಣವೆಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬುವ ಕಿವಿಮಾತು ನೀಡಿದ ಅವರು, “ಜೀವನದಲ್ಲಿ ಸಾಧನೆ ಮಾಡಲು ಛಲ ಬಿಡಬೇಡಿ, ಗುರುಗಳು, ತಂದೆ-ತಾಯಿಗಳ ಮಾರ್ಗದರ್ಶನದಲ್ಲಿ ಮುಂದುವರಿಯಿರಿ” ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ರೋನಿ ಕ್ರಾಸ್ತಾ ಅವರು ತಮ್ಮ ಮಧುರ ಗಾಯನದ ಮೂಲಕ ಜನಪ್ರಿಯ ಚಲನಚಿತ್ರ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನ ಗೆದ್ದರು. ಸಾಂಸ್ಕೃತಿಕ ವೈಭವದ ಮಧ್ಯೆ, ಸಂಗೀತದ ಸ್ಪಂದನದೊಂದಿಗೆ ಕಾಲೇಜು ಆವರಣವೇ ಉಲ್ಲಾಸದಿಂದ ತುಂಬಿತ್ತು.

You may also like

News

Mumbai Archbishop Cardinal Oswald Gracias Offers Solace to Residents of Saint Anthony’s Ashram

MANGALURU: His Eminence Cardinal Oswald Gracias, Archbishop of Mumbai and a member of the Pope’s Council of Cardinals, paid a
News

ಸೂರಿಕುಮೇರು – ಮಾಣಿಯಲ್ಲಿ ಅದ್ದೂರಿ ‘ಅನ್ಫಾಲ್ ರೆಸ್ಟೋರೆಂಟ್’ ಮೇ 3ರಂದು ಉದ್ಘಾಟನೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಭಾಗಿ ಉದ್ಘಾಟನಾ ಭವ್ಯ ಸಮಾರಂಭದಲ್ಲಿ ಮೂವರು ಸಾಧಕರಾದ ಚೇತನ್ ರೈ, ನಾಗರಾಜ್ ಶೆಟ್ಟಿ ಹಾಗೂ ಯಾಸೀರ್ ಕಲ್ಲಡ್ಕ

You cannot copy content of this page