August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಣಿ ಕರ್ನಾಟಕ ಪ್ರೌಢ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ರಚನಾ ಕಮ್ಮಟ, ಕವಿಗೋಷ್ಠಿ

ಕರ್ನಾಟಕ ರಾಜ್ಯ ಬರಹಗಾರರ ವೇದಿಕೆ (ರಿ.)ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕು ಘಟಕ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಹುಬ್ಬಳ್ಳಿ – ತಾಲೂಕು ಸಮಿತಿ ಬಂಟ್ವಾಳ ಹಾಗೂ ಕರ್ನಾಟಕ ಪ್ರೌಢಶಾಲೆ ಮಾಣಿ ಇವುಗಳ ಸಹಭಾಗಿತ್ವದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಹಿತ್ಯ ರಚನಾ ಕಮ್ಮಟ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ನಿವೃತ್ತ ಸಂಸ್ಕೃತ ಶಿಕ್ಷಕ ಶಿರಂಕಲ್ಲು ಕೃಷ್ಣ ಭಟ್ ಉದ್ಘಾಟಿಸಿದರು. ‘ಸಾಹಿತ್ಯದ ಅಭಿರುಚಿ ಮನೆಯಿಂದ ಆರಂಭವಾಗಿ ಶಾಲೆಯಲ್ಲಿ ಉನ್ನತಿ ಹೊಂದಿ ಸಮಾಜದಲ್ಲಿ ಪ್ರಸ್ತುತಿಗೊಳ್ಳಬೇಕು. ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಚಿಗುರುವುದು ಖಂಡಿತ ಎಂದರು.

 


ಸಂಪನ್ಮೂಲ ವ್ಯಕ್ತಿಯಾಗಿ ಕ.ಚು.ಸಾ.ಪ. ಮತ್ತು ಕ.ರಾ.ಬ.ಸಂ. ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಧ್ಯಕ್ಷ ಜಯಾನಂದ ಪೆರಾಜೆ ತರಬೇತಿ ನೀಡಿದರು. ಕನ್ನಡ – ನಾಡು ನುಡಿ – ಸಂಸ್ಕೃತಿಯ ವೈಭವ, ಕನ್ನಡ ಸಾಹಿತ್ಯ ಲೋಕದಲ್ಲಿ ದಕ್ಷಿಣ ಕನ್ನಡದ ಕೊಡುಗೆ ಮತ್ತು ಭವಿಷ್ಯದ ಸಾಹಿತಿಗಳು ಹೇಗೆ ತಯಾರಿಗೊಳ್ಳಬೇಕೆಂದು ಸವಿವರವಾಗಿ ತಿಳಿಸಿದರು. ಇದೇ ಸಂದರ್ಭ ಕಳೆದ SSLC ಪರೀಕ್ಷೆಯಲ್ಲಿ 625/603 ಅಂಕಗಳನ್ನು ಗಳಿಸಿದ ಮರ್ಯಂ ಸ್ವಾಬಿರಾರವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕಿರಣ್ ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಹಾಜಿ ಕೆ. ಇಬ್ರಾಹಿಂ ಮಾಣಿ, ಮುಖ್ಯ ಶಿಕ್ಷಕ ಎಸ್. ಚೆನ್ನಪ್ಪ ಗೌಡ ಉಪಸ್ಥಿತರಿದ್ದರು.

ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಅಶೋಕ ಎನ್. ಕಡೇಶಿವಾಲಯ ವಹಿಸಿದ್ದರು. ವಿದ್ಯಾರ್ಥಿಗಳಾದ ಶ್ರುತಿಜ, ರಕ್ಷಿತಾ, ನಮೃತ, ಕ.ಚು.ಸಾ.ಪ. ರಾಜ್ಯ ಮಹಿಳಾ ಪ್ರತಿನಿಧಿ ಶಾಂತಾ ಪುತ್ತೂರು, ಕ.ಚು.ಸಾ.ಪ. ಬಂಟ್ವಾಳದ ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಪುತ್ತೂರು ವಿವೇಕಾನಂದ ತಾಂತ್ರಿಕ ಕಾಲೇಜಿನ ಸಹ ಪ್ರಾಧ್ಯಾಪಕಿ ಮಾನಸ ಕೈಂತಜೆ, ಬಿ.ಎ. ವಿದ್ಯಾ ಸಂಸ್ಥೆ ತುಂಬೆಯ ಸಹ ಶಿಕ್ಷಕ ರಮೇಶ್ ಮೆಲ್ಕಾರ್, ಪದ್ಮನಾಭ ಪೂಜಾರಿ ಬಂಟ್ವಾಳ, ಪ್ರವೀಣ್ ಜಯ ವಿಟ್ಲ ಕವನ ವಾಚಿಸಿದರು. ಹಿಂದಿ ಶಿಕ್ಷಕ ಜಯರಾಮ ಕಾಂಚನ ಕಾರ್ಯಕ್ರಮ ಆಯೋಜಿಸಿ, ಕವನ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಮೈತ್ರಿ ಮತ್ತು ತಂಡ ಪ್ರಾರ್ಥಿಸಿ, ಜೀವಿತ್ ಮತ್ತು ತಂಡ ಸಹಕರಿಸಿದರು.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page