August 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಿಟ್ಲ ಠಾಣೆಗೆ ನೂತನ ಪೊಲೀಸ್ ನಿರೀಕ್ಷಕರಾಗಿ ಜನರ ವಿಶ್ವಾಸ ಗೆದ್ದ ಅಧಿಕಾರಿ ಪ್ರಕಾಶ್ ದೇವಾಡಿಗ ನೇಮಕ

ಗಂಭೀರ ಪ್ರಕರಣಗಳನ್ನು ಸಲೀಸಾಗಿ ಬಗೆಹರಿಸುವ ಇನ್ಸ್ ಪೆಕ್ಟರ್ ಪ್ರಕಾಶ್

ವಿಟ್ಲ ಠಾಣೆಯ ಪೊಲೀಸ್‌ ನಿರೀಕ್ಷಕರಾಗಿದ್ದ ನಾಗರಾಜ್ ಹೆಚ್.ಇ. ಇವರನ್ನು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ವಿಟ್ಲ ಪೊಲೀಸ್‌ ಠಾಣೆಗೆ ನೂತನ ಪೊಲೀಸ್‌ ನಿರೀಕ್ಷಕರಾಗಿ ಪ್ರಕಾಶ್ ದೇವಾಡಿಗರವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉಪ್ಪಿನಂಗಡಿ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರಾದ ರವಿ ಬಿ.ಎಸ್. ರವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ವಿಟ್ಲ ಠಾಣೆಗೆ ನೂತನ ಪೊಲೀಸ್‌ ನಿರೀಕ್ಷಕರಾಗಿ ಪ್ರಕಾಶ್ ದೇವಾಡಿಗರವರು ನಾಳೆ ನವಂಬರ್ 7ರಂದು ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಇವರು ತಮ್ಮ ಪ್ರಾಮಾಣಿಕತೆ, ಪರಿಶ್ರಮ ಮತ್ತು ಕಾರ್ಯನಿಷ್ಠೆಯಿಂದ ಜನರ ವಿಶ್ವಾಸ ಗೆದ್ದ ಅಧಿಕಾರಿಯಾಗಿದ್ದಾರೆ. ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದ ವೇಳೆ ಅವರು ಅನೇಕ ಗಂಭೀರ ಪ್ರಕರಣಗಳನ್ನು ಬಗೆಹರಿಸುವ ಮೂಲಕ ತನ್ನ ಪ್ರತಿಭೆ ಮತ್ತು ಕಾರ್ಯನಿಷ್ಠೆಯನ್ನು ತೋರಿದ್ದಾರೆ. ಜನಸಂಪರ್ಕದ ದೃಷ್ಟಿಯಿಂದ ಜನಮೈತ್ರಿ ಪೊಲೀಸ್‌ತನದ ಮಾದರಿಯಾಗಿರುವ ದೇವಾಡಿಗರವರು ವಿಟ್ಲ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಪ್ರಕಾಶ್ ದೇವಾಡಿಗರವರ ಬುದ್ಧಿವಂತಿಕೆ ಮತ್ತು ತನಿಖಾ ಕೌಶಲ್ಯವು ಅನೇಕ ಪ್ರಕರಣಗಳನ್ನು ಶೀಘ್ರ ಬಗೆಹರಿಸಲು ಸಹಾಯ ಮಾಡಿದ್ದು, ಇಲಾಖೆಯ ಒಳಗೂ ಹೊರಗೂ ಪ್ರಶಂಸೆ ಗಳಿಸಿದೆ. ವಿಟ್ಲ ಠಾಣೆಯಲ್ಲಿ ಅವರು ಪಾರದರ್ಶಕತೆ, ಶಿಸ್ತು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಅಪರಾಧ ಮುಕ್ತ ವಾತಾವರಣ ನಿರ್ಮಿಸಲು ಮುಂದಾಗಿದ್ದಾರೆ.

You may also like

News

ಮೊಬೈಲ್‌ಗಾಗಿ ಜಗಳ ತಂಗಿಯ ಕೊಲೆ – ಸಹೋದರ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾನಿಗೆ 5 ವರ್ಷ ಜೈಲು!

ಮೊಬೈಲ್ ವಿಚಾರವಾಗಿ ನಡೆದ ಜಗಳದ ವೇಳೆ ಸ್ವಂತ ತಂಗಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ.
News

ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ಧರ್ಮಸ್ಥಳದಲ್ಲಿ 28ನೇ ಭಜನಾ ಕಮ್ಮಟ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ ಮಂಗಳವಾರ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಭಜನಾ ಕಮ್ಮಟದ

You cannot copy content of this page