August 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೈಂಟ್ ತೆರೆಸಾ ಆಫ್ ಲಿಶುಕ್ಸ್ ರವರ ಸಂತ ಪದವಿಯ ಶತಮಾನೋತ್ಸವ

ನಾಳೆ ನವೆಂಬರ್ 9ರಂದು ಬೆಂದೂರ್ ಚರ್ಚ್ ಇಲ್ಲಿ ದಿವ್ಯ ಬಲಿಪೂಜೆ

 

ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರ ನೇತೃತ್ವ

ಸೈಂಟ್ ತೆರೆಸಾ ಆಫ್ ಲಿಶುಕ್ಸ್ ರವರಿಗೆ ಸಂತ ಪದವಿ ಪ್ರಾಪ್ತವಾಗಿ ನೂರು ವರ್ಷಗಳಾಗಿದ್ದು ಶತಮಾನೋತ್ಸವ ಸಂಭ್ರಮದ ಬಲಿ ಪೂಜೆಯು ನಾಳೆ ನವೆಂಬರ್ 9ರಂದು ಭಾನುವಾರ ಅಪರಾಹ್ನ 3.30 ಕ್ಕೆ ಮಂಗಳೂರಿನ ಬೆಂದೂರು ಸೈಂಟ್ ಸೆಬಾಸ್ಟಿಯನ್ ಚರ್ಚ್ ಇಲ್ಲಿ ನಡೆಯಲಿದೆ. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರು ದಿವ್ಯ ಬಲಿ ಪೂಜೆಯ ನೇತೃತ್ವ ವಹಿಸಲಿರುವರು. ಕಾರ್ಮೆಲ್ ಸಂಸ್ಥೆಯ ಧರ್ಮಗುರುಗಳು ಮತ್ತು ಧರ್ಮ ಭಗಿನಿಯರು, ಆಪೊಸ್ತಲಿಕ್ ಕಾರ್ಮೆಲ್, ಬೆಥನಿ ಮತ್ತು ಸಿ.ಎಸ್.ಎಸ್.ಟಿ. ಸಂಸ್ಥೆಯ ಹಾಗೂ ಕ್ರೈಸ್ತ ವಿಶ್ವಾಸಿಗಳ ಸಂಘ ಸಂಸ್ಥೆಗಳು ಸೇರಿಕೊಂಡು ಸಂಯುಕ್ತವಾಗಿ ಈ ಬಲಿ ಪೂಜೆಯ ಆಯೋಜನೆ ಮಾಡಿವೆ.

ಬಲಿ ಪೂಜೆಯ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ, ಕಾರ್ಮೆಲ್ ಸಂಸ್ಥೆಯ ಕರ್ನಾಟಕ – ಗೋವಾ ಪ್ರಾಂತ್ಯದ ಪ್ರೊವಿನ್ಶಿಯಲ್ ಅತೀ ವಂದನೀಯ ಫಾದರ್ ಸಿಲ್ವೆಸ್ಟರ್ ಡಿಸೋಜ, ಬೆಥನಿ ಸಂಸ್ಥೆಯ ಸುಪೀರಿಯರ್ ಜನರಲ್ ಅತೀ ವಂದನೀಯ ಸಿಸ್ಟರ್ ರೋಸ್ ಸೆಲಿನ್, ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಪ್ರೊವಿನ್ಶಿಯಲ್ ಅತೀ ವಂದನೀಯ ಸಿಸ್ಟರ್ ಮರಿಯಾ ನವೀನಾ, ಸಿಸ್ಟರ್ ಲಿಲ್ಲಿ ಪಿರೇರಾ, ಮಾಜಿ ಶಾಸಕ ಜೆ.ಆರ್. ಲೋಬೊ, ಎಪಿಸ್ಕೋಪಲ್ ವಿಕಾರ್ ಅತೀ ವಂದನೀಯ ಫಾದರ್ ಡೇನಿಯಲ್ ವೇಗಸ್, ಕಾರ್ಯಕ್ರಮದ ಸಂಚಾಲಕ ಕಾರ್ಮೆಲ್ ಸಂಸ್ಥೆಯ ಗುರು ವಂದನೀಯ ಫಾದರ್ ಡೊಮಿನಿಕ್ ವಾಸ್ ರವರು ಅತಿಥಿಗಳಾಗಿ ಭಾಗವಹಿಸುವರು.

ಸಭಾ ಕಾರ್ಯಕ್ರಮದ ಬಳಿಕ ಕಾರ್ಮೆಲ್ ಸಂಸ್ಥೆಯ ಗುರು ವಂದನೀಯ ಫಾದರ್ ನೆಲ್ಸನ್ ಪಿಂಟೊ ವಿರಚಿತ ಮಾಂಡ್ ಸೊಭಾಣ್ ಪ್ರಸ್ತುತ ಪಡಿಸುವ ಸೈಂಟ್ ತೆರೆಸಾ ಆಫ್ ಚೈಲ್ಡ್ ಜೀಸಸ್ ರವರ ಜೀವನ ಮತ್ತು ಆಧ್ಯಾತ್ಮಿಕತೆ ಕುರಿತ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ.

You may also like

News

ಧರ್ಮಸ್ಥಳದಲ್ಲಿ ‘ಪುನರ್ವಸು’ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಚಾಲನೆ

ಆಯುರ್ವೇದದಿಂದ ಪಂಚೇಂದ್ರಿಯಗಳ ಬಲವರ್ಧನೆ, ಆರೋಗ್ಯಭಾಗ್ಯ ಸಾಧ್ಯ – ವೈದ್ಯ ಮನೀಷಾ ಕೋಟೆಕಾರ್ ಉಜಿರೆ: ಸಾವಿರಾರು ವರ್ಷಗಳ ಪಾರಂಪರಿಕ ಪರಂಪರೆಯನ್ನು ಹೊಂದಿರುವ ಆಯುರ್ವೇದ ಪದ್ಧತಿಯ ಮೂಲಕ ದೇಹದ ಪಂಚೇಂದ್ರಿಯಗಳನ್ನು
News

ಸಿಬ್ಬಂದಿ ಕೊರತೆ ನೀಗಿಸಲು ಮೆಸ್ಕಾಂಗೆ 395 ಪವರ್‌ಮ್ಯಾನ್‌ಗಳು – ಅಧ್ಯಕ್ಷ ಕೆ. ಹರೀಶ್ ಕುಮಾರ್

ಮಂಗಳೂರು: ವಿದ್ಯುತ್ ಸರಬರಾಜು ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮೆಸ್ಕಾಂ ವ್ಯಾಪ್ತಿಗೆ 395 ಹೊಸ ಪವರ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ.

You cannot copy content of this page