May 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಭಾರತದ ಮೊದಲ ಸ್ಟಾರ್ಟ್‌ಅಪ್ ಡಿಸ್ಟ್ರಿಕ್ಟ್ ಮತ್ತು ಸಿಲಿಕಾನ್ ಬೀಚ್ ಆಗಿ ಹೊರಹೊಮ್ಮಲಿದೆ

ಕರ್ನಾಟಕ ಸ್ಟಾರ್ಟ್ಅಪ್ ಪಾಲಿಸಿ 2025–2030 ರಾಜ್ಯದಾದ್ಯಂತ ಉದ್ಯಮಶೀಲ ಅಭಿವೃದ್ಧಿ ಪ್ರಕ್ರಿಯೆಯನ್ನು ವೇಗಗೊಳಿಸಲು ಕೆಡಿಇಎಂನ ಮ್ಯಾಂಡೇಟ್ ಅನ್ನು ಬಲಪಡಿಸುತ್ತದೆ. ಈ ಪಾಲಿಸಿಯು ಶೀಘ್ರವೇ ಜಾರಿಗೆ ಬಂದರೆ ಅನುಕೂಲವಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ನಾಯಕತ್ವ ವಹಿಸಿರುವುದು ತಿಳಿಯುತ್ತದೆ ಹಾಗೂ ಕರ್ನಾಟಕದ ಹೊಸ ಆವಿಷ್ಕಾರ ಉದ್ದೇಶಕ್ಕೆ ಪೂರಕವಾಗಿ ಉದ್ಯಮದ ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ.

ಮಂಗಳೂರು ಭಾರತದ ಮೊದಲ ಸ್ಟಾರ್ಟ್‌ಅಪ್ ಡಿಸ್ಟ್ರಿಕ್ಟ್ ಮತ್ತು ಸಿಲಿಕಾನ್ ಬೀಚ್ ಆಗಿ ಹೊರಹೊಮ್ಮಿದ್ದು, ಗೇಮಿಂಗ್ ಮತ್ತು ಎಐಗೆ ಹಬ್ ಆಗಿ ತ್ವರಿತವಾಗಿ ಉದಯಿಸುತ್ತಿದೆ. ಈ ನಿಟ್ಟಿನಲ್ಲಿ ಬಹಳಷ್ಟು ಜಿಸಿಸಿ ಹೂಡಿಕೆಗಳು ಹರಿದು ಬಂದಿದೆ. ಚಾಮರಾಜನಗರದಲ್ಲಿ ಉದ್ಯಮಗಳು 450ಕ್ಕೂ ಹೆಚ್ಚು ಐಟಿ/ ಐಟಿಇಎಸ್ ಉದ್ಯೋಗಗಳನ್ನು ಸೃಷ್ಟಿಸಿವೆ. ಶೇ.70 ಮಹಿಳಾ ಪ್ರಾತಿನಿಧ್ಯ ವಿಶೇಷವಾಗಿದೆ. ಕೆಎಎನ್ ಮತ್ತು ಎಲಿವೇಟ್ ನಂತಹ ಯೋಜನೆಗಳು ರಾಜ್ಯದ ₹600 ಕೋಟಿ ಡೀಪ್‌ ಟೆಕ್ ಫಂಡ್ ಒದಗಿಸಿದ್ದು, 30 ದೇಶಗಳಾದ್ಯಂತ ಜಾಗತಿಕ ಪಾಲುದಾರಿಕೆಗಳು ಸಾಧ್ಯವಾಗಿದೆ. ಈ ಪಾಲಿಸಿ ಕರ್ನಾಟಕವನ್ನು ಜಾಗತಿಕವಾಗಿ ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಲಿದೆ.”

 

You may also like

News

ದ್ವಿತೀಯ ಪಿಯುಸಿ ಫಲಿತಾಂಶ – ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿಗೆ ಶೇ. 98.05 ಯಶಸ್ಸು

ರಾಜ್ಯ ಮಟ್ಟದಲ್ಲಿ ಮಿಂಚಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ ಪ್ರಾಂಶುಪಾಲರಾದ ಭಗಿನಿ ನೊರಿನ್ ಡಿಸೋಜ 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮಂಗಳೂರು ನಗರದ ಪ್ರತಿಷ್ಠಿತ ಸೈಂಟ್
News

ಧರ್ಮಸ್ಥಳದಲ್ಲಿ 54ನೇ ವರ್ಷದ ಸಾಮೂಹಿಕ ವಿವಾಹ – 106 ಜೋಡಿಗಳ ದಾಂಪತ್ಯ ಆರಂಭ

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಏಪ್ರಿಲ್ 29ರಂದು ಬುಧವಾರ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ

You cannot copy content of this page