July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಎಕ್ಸ್‌ಪ್ಲೋರಾ 2025 – ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಅಂತರರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ

ಫಾದರ್ ಮಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ (FMHMC) ಮತ್ತು ಗ್ಲೋಬಲ್ ಹೋಮಿಯೋಪಥಿ ಫೌಂಡೇಶನ್ (GHF) ಹಾಗೂ ನವದೆಹಲಿಯ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಹೋಮಿಯೋಪಥಿ (CCRH)ಯ ಸಹಯೋಗದಲ್ಲಿ, ಎಕ್ಸ್‌ಪ್ಲೋರಾ 2025ಹೋಮಿಯೋಪಥಿಕ್ ಶಿಕ್ಷಣ, ಅಭ್ಯಾಸ ಮತ್ತು ಸಂಶೋಧನೆಗಳ ಏಕೀಕರಣ ಎಂಬ ಅಂತರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವು 2025 ನವೆಂಬರ್ 14ರಂದು ಬೆಳಿಗ್ಗೆ 11.30ಕ್ಕೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಿತು.

ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಕಮಲಾ ಬಾಯಿ ಬಿ., KAS ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದಕ್ಷಿಣ ಆಫ್ರಿಕಾದ ಡರ್ಬನ್ ತಂತ್ರಜ್ಞಾನ ವಿಶ್ವವಿದ್ಯಾಲಯದ ಹೋಮಿಯೋಪತಿ ವಿಭಾಗದ ಮುಖ್ಯಸ್ಥ ಡಾ. ಆಶ್ಲೇ ರಾಸ್ ಮತ್ತು UK ಯ ಫಂಕ್ಷನಲ್ ಶಿಫ್ಟ್ ಕನ್ಸಲ್ಟಿಂಗ್ ಲಿಮಿಟೆಡ್ ನಿರ್ದೇಶಕರು ಮತ್ತು ವೈಧ್ಯಕೀಯ ಸಲಹೆಗಾರರಾದ ಡಾ. ಕಿಮ್ ಆಂಥೋನಿ ಜಾಬ್ಸ್ಟ್ ರವರು ಗೌರವ ಅತಿಥಿಗಳಾಗಿದ್ದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ (FMCI) ನಿರ್ದೇಶಕರಾದ ವಂದನೀಯ ಫಾದರ್ ಫಾವುಸ್ಟಿನ್ ಲುಕಾಸ್ ಲೋಬೊರವರು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಔಪಚಾರಿಕ ಉದ್ಘಾಟನಾ ಕಾರ್ಯಕ್ರಮವು ದೇವರ ಆಶೀರ್ವಾದದೊಂದಿಗೆ ಪ್ರಾರ್ಥನಾ ಹಾಡಿನ ರೂಪದಲ್ಲಿ ಆರಂಭವಾಯಿತು. ಆಯೋಜನಾ ಕಾರ್ಯದರ್ಶಿಯಾದ ಡಾ. ಶೀನಾ ಕೆ.ಎನ್. ರವರು ಗಣ್ಯರನ್ನು ವೇದಿಕೆಗೆ ಬರಮಾಡಿಕೊಂಡರು. FMHMC&H ಸಂಸ್ಥೆಯ ಆಡಳಿತಾಧಿಕಾರಿ ವಂದನೀಯ ಫಾದರ್ ಡೊನಾಲ್ಡ್ ನಿಲೇಶ್ ಕ್ರಾಸ್ತಾರವರು ಸ್ವಾಗತ ಭಾಷಣವನ್ನು ಮಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿ ಡಾ. ಆಶ್ಲೇ ರಾಸ್ ರವರು ಸಂಶೋಧನಾ ಬುಲೆಟಿನ್ (Research Bulletin) 2025 ಅನ್ನು ಮತ್ತು ಡಾ. ಕಿಮ್ ಆಂಥೋನಿ ಜಾಬ್ಸ್ಟ್ ರವರು ಪಯೋನಿಯರ್ (Pioneer) 2025 ಅನ್ನು ಬಿಡುಗಡೆ ಮಾಡಿದರು. ಪಯೋನಿಯರ್ 2025 ರ ಸಿಬ್ಬಂದಿ ಸಂಪಾದಕಿಯಾದ ಡಾ. ಡಿನಾ ಎಂ. ಮೊಂತೆರೊ, ಸಂಶೋಧನಾ ಬುಲೆಟಿನ್ 2025ರ ಸಂಪಾದಕರಾದ ಡಾ. ಸಿದ್ಧೇಶ ಮತ್ತು ವಿದ್ಯಾರ್ಥಿ ಸಂಶೋಧನಾ ಕ್ಲಬ್‌ನ ಕಾರ್ಯದರ್ಶಿ ಚೇತನಾರವರು ಬಿಡುಗಡೆ ಸಮಾರಂಭದಲ್ಲಿ ಗಣ್ಯರೊಂದಿಗೆ ಉಪಸ್ಥಿರರಿದ್ದರು.

ಗ್ಲೋಬಲ್ ಹೋಮಿಯೋಪಥಿ ಫೌಂಡೇಶನ್‌ನ ಅಧ್ಯಕ್ಷರಾದ ಡಾ. ಜಯೇಶ್ ಸಾಂಘವಿಯವರು ಜಿಎಚ್‌ಎಫ್(GHF) ಮತ್ತು ಫಾದರ್ ಮಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ (FMHMC&H) ಯಶಸ್ವಿ ಸಹಯೋಗದಿಂದ ಈ ಅಂತರಾಷ್ಟ್ರೀಯ ಸಮ್ಮೇಳನವನ್ನು ಸಾಕಾರಗೊಳಿಸಿದ ಬಗ್ಗೆ ಸಭಿಕರನ್ನು ಅಭಿನಂದಿಸಿದರು. ಹೋಮಿಯೋಪಥಿಯಲ್ಲಿ ಸಂಶೋಧನೆ ನಡೆಸುವುದು ಇಂದಿನ ಕಾಲದ ಅವಶ್ಯಕತೆಯಾಗಿದ್ದು, ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು ಅತ್ಯಂತ ಮುಖ್ಯ ಎಂದು ಅವರು ಹೇಳಿದರು.

FMCI ನಿರ್ದೇಶಕರಾದ ವಂದನೀಯ ಫಾದರ್ ಫಾವುಸ್ಟಿನ್ ಲುಕಾಸ್ ಲೋಬೊರವರು ವೇದಿಕೆಯ ಮೇಲಿರುವ ಗಣ್ಯರೊಂದಿಗೆ ಗ್ಲೋಬಲ್ ಹೋಮಿಯೋಪತಿ ಫೌಂಡೇಶನ್‌ನ ಟ್ರಸ್ಟಿ ಮತ್ತು ಪೋಷಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಮತ್ತು ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ಮಾಜಿ ಸಲಹೆಗಾರ (ಹೋಮಿಯೋಪಥಿ)ರಾದ ಡಾ. ಈಶ್ವರದಾಸ್ ರವರ ಹೋಮಿಯೋಪತಿ ಕ್ಷೇತ್ರದಲ್ಲಿ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಮಲಾ ಬಾಯಿ ಬಿ. ಯವರು ಕ್ರೇನಿಯಂ ಸಾಫ್ಟ್‌ವೇರ್ ಅನ್ನು ಬಿಡುಗಡೆ ಮಾಡಿ, “ಔಷಧಿಗಳಲ್ಲಿಯೂ ಸಹ ಎಲ್ಲಾ ಅಂಶಗಳಲ್ಲಿ ಕಲಬೆರಕೆಯಿಂದ ಸೇರಿಸಲ್ಪಟ್ಟ ಜೀವನಶೈಲಿಯ ಅಸ್ವಸ್ಥತೆಗಳನ್ನು ಎಲ್ಲರೂ ಹೇಗೆ ಬೆನ್ನಟ್ಟುತ್ತಿದ್ದಾರೆ ಎಂಬುದನ್ನು ನೆನಪಿಸಿಕೊಂಡು, ಈ ಹೋಮಿಯೋಪಥಿಯಂತಹ ಪರ್ಯಾಯ ಚಿಕಿತ್ಸಾ ವಿಧಾನಗಳ ಉತ್ತೇಜನವು ಸಮಾಜದ ಆರೋಗ್ಯಮುಖಿ ಭವಿಷ್ಯಕ್ಕೆ ಮಹತ್ವದ್ದು” ಎಂದು ಶ್ಲಾಘಿಸಿದರು.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ (FMCI) ನಿರ್ದೇಶಕರಾದ ವಂದನೀಯ ಫಾದರ್ ಫಾವುಸ್ಟಿನ್ ಲುಕಾಸ್ ಲೋಬೊರವರು ಮುಖ್ಯ ಅತಿಥಿ ಹಾಗೂ ಗೌರವಾನ್ವಿತ ಅತಿಥಿಗಳಿಗೆ ಕೃತಜ್ಞತೆ ಮತ್ತು ಸ್ನೇಹದ ಸಂಕೇತವಾಗಿ ಸ್ಮರಣಿಕೆಗಳನ್ನು ಪ್ರದಾನ ಮಾಡಿದರು. ತಮ್ಮ ಅಧ್ಯಕ್ಷೀಯ ಬಾಷಣದಲ್ಲಿ ವಂದನೀಯ ಫಾದರ್ ಆಗಸ್ಟಸ್ ಮುಲ್ಲರ್ ರವರು ಹೋಮಿಯೋಪಥಿ ಮೂಲಕ  FMCI ಯಲ್ಲಿ ಬೀಜಗಳನ್ನು ಬಿತ್ತಿದ ರೀತಿಯನ್ನೂ, ಇಂದು ಅದು ಎಷ್ಟು ದೂರ ಬೆಳೆಯಲು ಸಾಧ್ಯವಾಗಿದೆ ಎಂಬುದನ್ನೂ ಸ್ಮರಿಸಿದರು. ಮಾನಸಿಕ, ದೈಹಿಕ ಮತ್ತು ಆತ್ಮೀಯ ಮಟ್ಟದಲ್ಲಿ ಗುಣಪಡಿಸುವುದು ಮತ್ತು ಆರೈಕೆ ನೀಡುವುದು ನಮ್ಮ FMCI ಯ ಮಂತ್ರವಾಗಿದೆ. ಈ ಅಂತರಾಷ್ಟ್ರೀಯ ಸಮ್ಮೇಳನವು ಹೋಮಿಯೋಪಥಿಯ ಸಂಶೋಧನಾ ಪ್ರಗತಿಗೆ ಮೂಲ ಕಾರಣವಾಗಿ ಹೊರಹೊಮ್ಮಿದೆ ಎಂದು ಹೇಳಿದರು ಮತ್ತು ಎಲ್ಲಾ ಪ್ರತಿನಿಧಿಗಳನ್ನು “ಪೂರ್ವದ ರೋಮ್” ಎಂದು ಕರೆಯಲಾಗುವ ಮಂಗಳೂರು ನಗರಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು.

ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. .ಎಸ್.ಜೆ. ಪ್ರಭು ಕಿರಣ್ ರವರು ಧನ್ಯವಾದ ಸಮರ್ಪಣೆ ಮಾಡಿದರು. ಡಾ. ರೆಶೆಲ್ ನೊರೊನ್ಹಾ ಮತ್ತು ಡಾ. ನಂದನ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.

ಫಾದರ್ ಮುಲ್ಲರ್ ಫಾರ್ಮಾಸ್ಯುಟಿಕಲ್ ವಿಭಾಗದ ಆಡಳಿತಾಧಿಕಾರಿ ವಂದನೀಯ ಫಾದರ್ ನೆಲ್ಸನ್ ಡಿ. ಪಾಯಸ್, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂದನೀಯ ಫಾದರ್ ಅಶ್ವಿನ್ ಎಲ್. ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ವಿಲ್ಮಾ ಎಂ. ಡಿಸೋಜ, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಡಾ. ಗಿರೀಶ್ ನಾವಡ ಯು.ಕೆ., ಮತ್ತು ಡಾ. ಶೀನಾ ಕೆ.ಎನ್. ಸಂಘಟನಾ ಕಾರ್ಯದರ್ಶಿ ಎಕ್ಸ್‌ಪ್ಲೋರಾ 2025 ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ಕಿಮ್ ಜಾಬ್ಸ್‌ಟ್ (ಯುನೈಟೆಡ್ ಕಿಂಗ್‌ಡಮ್), ಡಾ. ಅಶ್ಲಿ ರಾಸ್‌ (ದಕ್ಷಿಣ ಆಫ್ರಿಕಾ), ಡಾ. ಆಶಾ ಕಿರಣ್ (ಆಸ್ಟ್ರೇಲಿಯಾ), ಡಾ. ನಿಕೋಲಾ ಕುಟಿನ್ಹೋ (ಜರ್ಮನಿ) ಹಾಗೂ ಭಾರತದೆಲ್ಲೆಡೆಗಿನ ಇನ್ನೂ 24 ಮಂದಿ ತಜ್ಞರು ಉಪಸ್ಥಿತರಿದ್ದರು. ಇವರು ಸಂಶೋಧನೆ, ಶೈಕ್ಷಣಿಕ ವಿಧಾನ ಮತ್ತು ಹೋಮಿಯೋಪತಿಯಲ್ಲಿನ ಇತ್ತೀಚಿನ ಪ್ರಗತಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ಚರ್ಚಿಸಲಿರುವರು. ಭಾರತದಾದ್ಯಂತ 1500 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page