October 17, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೈಂಟ್ ಅಲೋಶಿಯಸ್ ವಿವಿಯಲ್ಲಿ ‘ಸ್ವರಾಂಜಲಿ’ ಸಂಗೀತ ಕಚೇರಿ

ಫೆಬ್ರವರಿ 1ರಂದು ಆಧ್ಯಾತ್ಮಿಕ–ಸಮಕಾಲೀನ ಸಂಗೀತ ಸಂಭ್ರಮ

ಮಂಗಳೂರಿನ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಫೆಬ್ರವರಿ 1ರಂದು ಭಾನುವಾರ ಸಂಜೆ 5 ಗಂಟೆಗೆ ವಿಶ್ವವಿದ್ಯಾಲಯದ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ‘ಸ್ವರಾಂಜಲಿ’ — ಆಧ್ಯಾತ್ಮಿಕ ಮತ್ತು ಸಮಕಾಲೀನ ಸಂಗೀತದ ಗಾಯನ ಹಾಗೂ ವಾದ್ಯವೃಂದದ ಭವ್ಯ ಸಂಗೀತ ಕಚೇರಿ ಆಯೋಜಿಸಲಾಗುತ್ತಿದೆ.

ಕಾರ್ಯಕ್ರಮದ ಪೋಷಕರಾಗಿ ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ. ಫಾ. ಮೆಲ್ವಿನ್ ಜೋಸೆಫ್ ಪಿಂಟೊ, ಎಸ್.ಜೆ. ಹಾಗೂ ಅಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಉಪಸ್ಥಿತಲಿರುವರು. ವಿವಿಧ ಬ್ಲಾಕ್‌ಗಳ ನಿರ್ದೇಶಕರು, ಡೀನ್‌ಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಂಗೀತಾಸಕ್ತ ಸಾರ್ವಜನಿಕರು ಈ ಸಂಗೀತ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಪ್ರಮುಖ ಗಾಯಕವೃಂದಗಳು ಹಾಗೂ ಆರ್ಕೆಸ್ಟ್ರಾಗಳಾದ ಬಲ್ಮಟ ಮ್ಯೂಸಿಕಲ್ ಅಸೋಸಿಯೇಷನ್, ಸೈಂಟ್ ಜೋಸೆಫ್ಸ್ ಸೆಮಿನರಿ, ಸಿಎಸ್‌ಐ ಯಂಗ್ ವಾಯ್ಸಸ್, ಆಶಾ ಕಿರಣ್, NEPAM, ಸೈಂಟ್ ಅಲೋಶಿಯಸ್ ಪಿಯು ಕಾಲೇಜು ತಂಡ ಹಾಗೂ ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯ ತಂಡಗಳು ಭಾಗವಹಿಸಲಿವೆ. ಜೊತೆಗೆ ರಾಚೆಲ್ ಪ್ರಿಯಾಂಕಾ ಫುರ್ಟಾಡೊ ಮತ್ತು ಅನನ್ಯಾ ಅಭಿಗೈಲ್ ಡಿಸಿಲ್ವಾ ಅವರ ವಿಶೇಷ ಗಾಯನ ಪ್ರಸ್ತುತಿ ಸಂಗೀತಾಸಕ್ತರನ್ನು ಮನಸೂರೆಗೊಳಿಸಲಿದೆ.

You may also like

News

ಮಹಿಳೆ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣ – ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ

ಜಾಗದ ವಿಚಾರಕ್ಕೆ ಸಂಬಂಧಿಸಿದ ವಿವಾದದಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಪುತ್ತೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ
News

ಕೋಮುದ್ವೇಷದ ಭಾಷಣ ಆರೋಪ – ಜಗದೀಶ್ ಕಾರಂತ್ ಹಾಗೂ ಶ್ರೀಕಾಂತ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು

ಪುತ್ತೂರಿನ ವಕೀಲರಾದ ಮಹೇಶ್ ಕಜೆ ಅವರು ಮಂಡಿಸಿದ ವಾದ ಕೋಮುದ್ವೇಷದ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಿಂದೂ ಸಂಘಟನೆಗಳ ಮುಖಂಡರಾದ ಜಗದೀಶ್ ಕಾರಂತ್

You cannot copy content of this page