ಉಳ್ಳಾಲ ಠಾಣೆಯ ಎನ್‌ಡಿಪಿಎಸ್ ಪ್ರಕರಣ
14 ವರ್ಷಗಳ ಬಳಿಕ ತಲೆಮಾರಿಕೊಂಡಿದ್ದ ಆರೋಪಿ ದಸ್ತಗಿರಿ

ಉಳ್ಳಾಲ ಪೊಲೀಸ್ ಠಾಣೆಯ ಮೊ.ನಂ. 312/2011, ಕಲಂ 8(c)(ii) ಓದುಗ 20(b) ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಹಾಗೂ ಮಾನ್ಯ ಜೆಎಂಎಫ್‌ಸಿ–II ನ್ಯಾಯಾಲಯದ ಸಿಸಿ ನಂ. 1757/2013 ಪ್ರಕರಣದಲ್ಲಿ ತಲೆಮಾರಿಕೊಂಡಿದ್ದ ಆರೋಪಿ ಮಂಗಳೂರಿನ ಉಳ್ಳಾಲದ ಮುಕ್ಕಚೇರಿ, ತೋಯಿಬ್ ಮಸೀದಿ ಎದುರುಗಡೆಯ ಶಾಜ್ಮೀನ್ ಅಪಾರ್ಟ್ಮೆಂಟ್ ರೂಂ ನಂ. 07, ರ ನಿವಾಸಿ ಮೊಹಮ್ಮದ್ ಸಂಶೀರ್ ನನ್ನು ಪೊಲೀಸರು ಪತ್ತೆಹಚ್ಚಿ ಈ ದಿನ ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿತನು ದೀರ್ಘಕಾಲದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಾನ್ಯ ಜೆಎಂಎಫ್‌ಸಿ–II ನ್ಯಾಯಾಲಯವು ಆರೋಪಿತನ ವಿರುದ್ಧ ಎಲ್‌ಪಿಸಿ ವಾರಂಟ್ ಹೊರಡಿಸಿತ್ತು. ಅದನ್ವಯ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು 14 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




