October 18, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಥೊಲಿಕ್ ಸಭಾ ಸುರತ್ಕಲ್ ವಲಯದ ದಶಮಾನೋತ್ಸವ ಸಂಭ್ರಮ

ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ – ವೆಲೆಂಟೈನ್ ಡಿಸೋಜ ನಿವೃತ್ತ DSP  

ಸುರತ್ಕಲ್ ಇಲ್ಲಿನ ಸೆಕ್ರೆಡ್ ಹಾರ್ಟ್ ಚರ್ಚ್ ಸಭಾಂಗಣದಲ್ಲಿ ಫೆಬ್ರವರಿ 8ರಂದು ಭಾನುವಾರ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಮದರ್ ತೆರೆಜಾ ವಲಯ ಸುರತ್ಕಲ್ ಇದರ ದಶಮಾನೋತ್ಸವ ಸಮಾರಂಭವು ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು.

ಕಾರ್ಯಕ್ರಮದ ಮುಖ್ಯಾಂಶಗಳು:

ಕಥೊಲಿಕ್ ಸಭೆಯ ಧ್ಯೇಯಗೀತೆ ಹಾಗೂ ಪ್ರಾರ್ಥನಾ ನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದಶಮಾನೋತ್ಸವದ ಸಂಚಾಲಕ ಜೋರ್ಜ್ ಲಿಗೋರಿ ಡಿಸೋಜ ಎಲ್ಲರನ್ನು ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಆಶಾ ರೊಡ್ರಿಗಸ್ ಅವರು ವಲಯದ ಕಳೆದ ಹತ್ತು ವರ್ಷಗಳ ಸಾಧನೆಯ ವರದಿಯನ್ನು ವಾಚಿಸಿದರು.

ಗೌರವ ಸನ್ಮಾನ:

ಕಳೆದ ಹತ್ತು ವರ್ಷಗಳಲ್ಲಿ ವಲಯದ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಅಲ್ಲದೆ, ದಶಮಾನೋತ್ಸವದ ಯಶಸ್ವಿಗಾಗಿ ಶ್ರಮಿಸಿದ ಸಂಚಾಲಕ ಜೋರ್ಜ್ ಲಿಗೋರಿ ಡಿಸೋಜ, ಸಹ ಸಂಚಾಲಕ ಫ್ರೆಡ್ರಿಕ್ ಡಿಸೋಜ ಹಾಗೂ ವಲಯ ಅಧ್ಯಕ್ಷ ಓಲ್ವಿನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

ಗಣ್ಯರ ಸಂದೇಶ:

* ವಂದನೀಯ ಫಾದರ್ ಆ್ಯಂಟನಿ ಶೆರಾ: ಕಥೊಲಿಕ್ ಸಭೆಯ ಸದಸ್ಯರು ಸಮಾಜಕ್ಕೆ ನೀಡುತ್ತಿರುವ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.

* ಅತೀ ವಂದನೀಯ ಫಾದರ್ ಆಸ್ಟಿನ್ ಪೀಟರ್ ಪೆರಿಸ್: ಸಮಾಜದ ಪ್ರತಿಯೊಂದು ಸನ್ನಿವೇಶದಲ್ಲಿ ಕ್ರೈಸ್ತ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ರಾಜಕೀಯ, ಸರ್ಕಾರಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಜಾಗರೂಕರಾಗಿ ಮತ್ತು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

* ವೆಲೆಂಟೈನ್ ಡಿಸೋಜ ನಿವೃತ್ತ ಡಿಎಸ್‌ಪಿ : “ನಮ್ಮ ಯುವಜನರು ವಿದೇಶಕ್ಕೆ ಹೋಗುವ ಬದಲು ನಮ್ಮಲ್ಲೇ ಲಭ್ಯವಿರುವ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಶ್ರಮಿಸಬೇಕು. ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಮತ್ತು ಆರೋಗ್ಯ ಜಾಗೃತಿಗಾಗಿ ಕಥೊಲಿಕ್ ಸಭೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೆರೆಬೈಲ್, PRO ಹಾಗೂ ಮಾಜಿ ಅಧ್ಯಕ್ಷ ಪಾವ್ಲ್ ರೊಲ್ಫಿ ಡಿಕೊಸ್ತಾ, ಯುವ ಮುಂದಾಳು ಡೆನಿಸ್ ಡಿಸಿಲ್ವಾ, ವಂದನೀಯ ಫಾದರ್ ಸ್ಟ್ಯಾನಿ ಪಿಂಟೋ, ವಂದನೀಯ ಫಾದರ್ ಅನಿಲ್ ಜೋಯಲ್ ಡಿಸೋಜ, ವಂದನೀಯ ಫಾದರ್ ಜೋನ್ಸನ್ ಡೆನ್ಜಿಲ್ ಪಿರೇರಾ ಹಾಗೂ ಮತ್ತಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುರತ್ಕಲ್ ವಲಯ ಅಧ್ಯಕ್ಷ ಲೋರೆನ್ಸ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿದ್ ಮತ್ತು ಸೋನಿಯಾ ಕಾರ್ಯಕ್ರಮ ನಿರೂಪಿಸಿದರು. ಫ್ರೆಡ್ರಿಕ್ ಡಿಸೋಜ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ನೆಲ್ಲು ಪೆರ್ಮನ್ನೂರ್ ತಂಡದ ‘SBG ಟ್ರಾವೆಲ್ಸ್’ ಹಾಸ್ಯಮಯ ನಾಟಕವು ಪ್ರೇಕ್ಷಕರನ್ನು ರಂಜಿಸಿತು.

You may also like

News

ಪುತ್ತೂರು ರಸ್ತೆ ಅಪಘಾತದಲ್ಲಿ ಅಂಚೆ ಇಲಾಖೆ ಸಿಬ್ಬಂದಿ ಮಮತಾ ದುರ್ಮರಣ

ಪುತ್ತೂರು ಮುಕ್ರಂಪಾಡಿಯಲ್ಲಿ ಸ್ಕೂಟರ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪುತ್ತೂರು ಅಂಚೆ ಇಲಾಖೆಯ ಪೋಸ್ಟಲ್ ಅಸಿಸ್ಟೆಂಟ್ ಮಮತಾ ಅವರು ಚಿಕಿತ್ಸೆ
News

Inauguration of RGUHS Mangaluru Zone Throwball (M&W) Tournament 2026-27 at Father Muller Homoeopathic Medical College Deralakatte

RGUHS Mangaluru Zone Throwball (M&W) Tournament 2026-27 was hosted by Father Muller Homoeopathic Medical College, Deralakatte on 17th October 2026.

You cannot copy content of this page