July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಫೆಬ್ರವರಿ 27ಕ್ಕೆ ರಾಜ್ಯಾದ್ಯಂತ ‘ಬಿರ್ದ್‌ದ ಕಂಬುಲ’ ಹಾಗೂ ‘ವೀರಕಂಬಳ’ ಸಿನಿಮಾ ಬಿಡುಗಡೆ

ನಿರ್ಮಾಣ : ಅರುಣ್ ರೈ ತೋಡಾರ್ ಮತ್ತು ಡಾ. ವಿನಿತಾ ವಿಜಯ್ ಕುಮಾರ್ ರೆಡ್ಡಿ

ತುಳುನಾಡಿನ ಸಾಂಸ್ಕೃತಿಕ ಹಿರಿಮೆ ಹಾಗೂ ಜನಪದ ಕ್ರೀಡೆಯಾದ ಕಂಬಳದ ಕಥಾಹಂದರ ಹೊಂದಿರುವ ‘ಬಿರ್ದ್‌ದ ಕಂಬುಲ’ ಮತ್ತು ‘ವೀರಕಂಬಳ’ ಚಲನಚಿತ್ರಗಳು ಫೆಬ್ರವರಿ 27ರಂದು ಶನಿವಾರ ರಾಜ್ಯಾದ್ಯಂತ ಏಕಕಾಲಕ್ಕೆ ತೆರೆಕಾಣಲಿವೆ ಎಂದು ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್ ಅವರು ಫೆಬ್ರವರಿ 21ರಂದು ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಂಬಳದ ಹಿರಿಮೆ ಸಾರುವ ಪ್ರಯತ್ನ:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರುಣ್ ರೈ ತೋಡಾರ್, “ತುಳುನಾಡಿನ ಹೆಮ್ಮೆಯ ಕಂಬಳವನ್ನು ದೇಶ-ವಿದೇಶಗಳಲ್ಲಿ ಪಸರಿಸುವ ಉದ್ದೇಶದಿಂದ ಈ ಸಿನಿಮಾ ಮಾಡಲಾಗಿದೆ. ಕಂಬಳ ಕ್ಷೇತ್ರದ ಅನೇಕ ಸಾಧಕರು ಮತ್ತು ಪ್ರೇಮಿಗಳು ಈ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ನಮ್ಮ ತಂಡವನ್ನು ಪ್ರೋತ್ಸಾಹಿಸಬೇಕು,” ಎಂದು ಮನವಿ ಮಾಡಿದರು.

ಚಿತ್ರದ ಜರ್ನಿ ಬಗ್ಗೆ ನಿರ್ದೇಶಕರ ಮಾತು

ಖ್ಯಾತ ನಿರ್ದೇಶಕ ಡಾ. ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮಾತನಾಡಿ, “ಸುಮಾರು 50 ಸಿನಿಮಾಗಳನ್ನು ಮಾಡಿರುವ ನನಗೆ ಪುತ್ತೂರು ಕಂಬಳಕ್ಕೆ ಭೇಟಿ ನೀಡಿದಾಗ ಈ ಕ್ರೀಡೆಯನ್ನು ಆಧರಿಸಿ ಸಿನಿಮಾ ಮಾಡುವ ಆಲೋಚನೆ ಬಂತು. ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರ ಸಂಭಾಷಣೆ ಮತ್ತು ಅದ್ಭುತ ಹಾಡುಗಳು ಸಿನಿಮಾದ ಶಕ್ತಿಯನ್ನು ಹೆಚ್ಚಿಸಿವೆ,” ಎಂದರು.

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರು ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕಾರಿ ನಿರ್ಮಾಪಕ ರಾಜೇಶ್ ಕುಡ್ಲ, ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್, ಗುಣಪಾಲ ಕಡಂಬ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು.

ಚಿತ್ರದ ಮಾಹಿತಿ ಮತ್ತು ತಾರಾಗಣ:

* ನಿರ್ದೇಶನ: ಡಾ. ಎಸ್.ವಿ. ರಾಜೇಂದ್ರ ಸಿಂಗ್ ಬಾಬು

* ನಿರ್ಮಾಣ: ಡಾ. ವಿನಿತಾ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೋಡಾರ್

* ತಾರಾಗಣ: ಆದಿತ್ಯ, ರಾಧಿಕಾ ಚೇತನ್, ಪ್ರಕಾಶ್ ರೈ, ರವಿಶಂಕರ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಶ್ರೀನಿವಾಸ್ ಗೌಡ ಮತ್ತಿತರರು.

* ಸಂಭಾಷಣೆ: ವಿಜಯ್ ಕುಮಾರ್ ಕೊಡಿಯಾಲ್ ಬೈಲ್

* ಸಂಗೀತ: ಕದ್ರಿ ಮಣಿಕಾಂತ್

* ಛಾಯಾಗ್ರಹಣ: ಆರ್. ಗಿರಿ

ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಸಾಹಿತ್ಯ ಹೊಂದಿರುವ ಈ ಚಿತ್ರವು ಕಂಬಳದ ರೋಚಕತೆಯನ್ನು ಬೆಳ್ಳಿತೆರೆಯ ಮೇಲೆ ತರಲು ಸಜ್ಜಾಗಿದೆ.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page