May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರದ ಸಿಟಿ ವಲಯಕ್ಕೆ ನೂತನ ಕಾರ್ಯದರ್ಶಿ ಹಾಗೂ ಪ್ರತಿನಿಧಿಗಳ ಆಯ್ಕೆ

ಮಂಗಳೂರು ಧರ್ಮಕ್ಷೇತದ ವ್ಯಾಪ್ತಿಯ ಸಿಟಿ ವಲಯಕ್ಕೆ ನೂತನ ಪದಾಧಿಕಾರಿಗಳನ್ನು ಆರಿಸುವ ಚುನಾವಣೆ ಪ್ರಕ್ರಿಯೆಯು ಇಂದು ಫೆಬ್ರವರಿ 22ರಂದು ಭಾನುವಾರ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಈ ಚುನಾವಣೆಯಲ್ಲಿ ವಲಯದ ಕಾರ್ಯದರ್ಶಿ ಮತ್ತು ಇಬ್ಬರು ಪ್ರಮುಖ ಪ್ರತಿನಿಧಿಗಳನ್ನು ಸರ್ವಾನುಮತದಿಂದ ಆರಿಸಲಾಗಿದೆ.

ನೂತನ ಪದಾಧಿಕಾರಿಗಳ ವಿವರ:

ಚುನಾವಣಾ ಫಲಿತಾಂಶದ ಅನ್ವಯ ಈ ಕೆಳಗಿನವರು ಆಯ್ಕೆಯಾಗಿದ್ದಾರೆ:

* ಕಾರ್ಯದರ್ಶಿ: ಉಷಾ ಫೆರ್ನಾಂಡಿಸ್ (ಉಪಾಧ್ಯಕ್ಷೆ, ನೀರುಮಾರ್ಗ ಚರ್ಚ್)

* ಪ್ರತಿನಿಧಿ 1: ರೂತ್ ಲೋಬೊ (ಉಪಾಧ್ಯಕ್ಷೆ, ಕುಲಶೇಖರ ಚರ್ಚ್)

* ಪ್ರತಿನಿಧಿ 2: ಸಂತೋಷ್ ಡಿಕೋಸ್ತಾ (ಪ್ರತಿನಿಧಿ, ಕೆಲರಾಯ್ ಚರ್ಚ್)

ಚುನಾವಣಾ ಪ್ರಕ್ರಿಯೆ ಮತ್ತು ಭಾಗಿಗಳು:

ಸಿಟಿ ವಲಯದ ಶ್ರೇಷ್ಠ ಗುರು ಹಾಗೂ ವಾಮಂಜೂರು ಚರ್ಚ್‌ನ ಧರ್ಮಗುರುಗಳಾದ ವಂದನೀಯ ಡಾ. ಜೇಮ್ಸ್ ಡಿಸೋಜ ಅವರು ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಪ್ರಮುಖರಾದ:

* ವಂದನೀಯ ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್ (ಧರ್ಮಗುರುಗಳು, ಕುಲಶೇಖರ ಚರ್ಚ್)

* ವಂದನೀಯ ಫಾದರ್ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ (ಧರ್ಮಗುರುಗಳು, ಪಾಲ್ದನೆ ಚರ್ಚ್)

ಅವರು ಉಪಸ್ಥಿತರಿದ್ದು, ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ವಲಯದ ವ್ಯಾಪ್ತಿ:

ಮಂಗಳೂರು ಸಿಟಿ ವಲಯವು ಕುಲಶೇಖರ, ಬೋಂದೆಲ್, ಶಕ್ತಿನಗರ, ಪಾಲ್ದನೆ, ನೀರುಮಾರ್ಗ, ಕೆಲರಾಯ್, ಬಜ್ಜೋಡಿ, ಬಜಾಲ್, ಆಂಜೆಲೋರ್, ದೇರೆಬೈಲ್, ವಾಮಂಜೂರು ಹಾಗೂ ಫೆರ್ಮಾಯ್ ಒಟ್ಟು 12 ಚರ್ಚ್ ಗಳನ್ನು ಒಳಗೊಂಡಿದೆ.

You may also like

News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು
News

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ MLC ಐವನ್ ಡಿಸೋಜ

ಕರಾವಳಿ ಕರ್ನಾಟಕದ ಜನರ ದಶಕಗಳ ಬೇಡಿಕೆಯಾಗಿರುವ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ, ಹೋರಾಟ ಸಮಿತಿಯ ಸಂಚಾಲಕ ಹಾಗೂ ಶಾಸಕ MLC

You cannot copy content of this page