August 28, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪ್ರಾರ್ಥನೆ ವೇಳೆ ಅತಿಕ್ರಮಣ – 20 ಜನರ ಮೇಲೆ ಸುಳ್ಳು FIR ದಾಖಲಿಸಿ ಜೀವ ಬೆದರಿಕೆ  

ಕರ್ನಾಟಕ ಕ್ರೈಸ್ತ ಸಂಘಟನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಕ್ಕಳ ರಕ್ಷಣಾ ವೇದಿಕೆ ಜಂಟಿಯಾಗಿ ಗೃಹ ಸಚಿವರಿಗೆ ಮನವಿ

ಮುಖ್ಯಸ್ಥರಾದ ಸ್ಟ್ಯಾನಿ ಪಿಂಟೊ ಮತ್ತು ಗೀತಾ ಬೆಂಗಳೂರು ಇವರ ಮುಂದಾಳತ್ವ

ಹಾವೇರಿ: ಕಳೆದ ಹತ್ತು ವರ್ಷಗಳಿಂದ ಶಾಂತಿಯುತವಾಗಿ ಪ್ರಾರ್ಥನೆ ನಡೆಸುತ್ತಿದ್ದ ಸ್ಥಳಕ್ಕೆ ಅಕ್ರಮವಾಗಿ ನುಗ್ಗಿ, ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ, 20 ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಘಟನೆಯನ್ನು ಖಂಡಿಸಿ ಕರ್ನಾಟಕ ಕ್ರೈಸ್ತ ಸಂಘಟನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ ಜಂಟಿಯಾಗಿ ಮುಖ್ಯಸ್ಥರಾದ ಸ್ಟ್ಯಾನಿ ಪಿಂಟೊ ಮತ್ತು ಗೀತಾ ಬೆಂಗಳೂರು ಇವರ ಮುಂದಾಳತ್ವದಲ್ಲಿ  ಗೃಹ ಸಚಿವರಿಗೆ ಮನವಿ ಸಲ್ಲಿಸಿವೆ.

ಘಟನೆಯ ಹಿನ್ನೆಲೆ:

2026 ಮಾರ್ಚ್ 1ರಂದು ಹಾವೇರಿಯ ಇಜಾರಿ ಲಕ್ಮಾಪುರ ಮಾರುತಿ ನಗರದ ಬಾಡಿಗೆ ಮನೆಯೊಂದರಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ, ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಹನುಮಪ್ಪ, ಶಿವರಾಜು, ಶಶಿಕುಮಾರ್, ಶಿವಕುಮಾರ್, ವೆಂಕಟೇಶ್ ಮತ್ತು ಕುಮಾರ್ ಎಂಬುವವರ ನೇತೃತ್ವದ ಗುಂಪು ಏಕಾಏಕಿ ನುಗ್ಗಿದೆ. ಪ್ರಾರ್ಥನೆ ಮಾಡುತ್ತಿದ್ದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, “ಮತಾಂತರ ಮಾಡುತ್ತಿದ್ದೀರಾ?” ಎಂದು ಪ್ರಶ್ನಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಪ್ರಮುಖ ಆರೋಪಗಳು:

* ಸುಳ್ಳು ಪ್ರಕರಣ: ಸ್ಥಳದಲ್ಲಿ ಇಲ್ಲದಿದ್ದರೂ ಸಹ 15 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 20 ಜನರ ಮೇಲೆ ಸುಳ್ಳು FIR (0025/2026) ದಾಖಲಿಸಲಾಗಿದೆ.

* ಮಹಿಳೆಯರ ಮೇಲೆ ದೌರ್ಜನ್ಯ: ಪ್ರಾರ್ಥನಾ ಸ್ಥಳದಲ್ಲಿದ್ದ ಮಹಿಳೆಯರ ಮೇಲೆ ಅಶ್ಲೀಲ ಪದಬಳಕೆ ಮಾಡಿ, ಮಾನಸಿಕ ಹಿಂಸೆ ನೀಡಲಾಗಿದೆ.

* ಜೀವ ಬೆದರಿಕೆ: “ಮತ್ತೊಮ್ಮೆ ಈ ಭಾಗದಲ್ಲಿ ಕಂಡುಬಂದರೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಜೀವಂತವಾಗಿ ಬಿಡುವುದಿಲ್ಲ” ಎಂದು ಕಿಡಿಗೇಡಿಗಳು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.

* ಪೊಲೀಸ್ ನಿರ್ಲಕ್ಷ್ಯ: ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸೂಕ್ತ ರಕ್ಷಣೆ ಸಿಕ್ಕಿಲ್ಲ ಮತ್ತು ಪೊಲೀಸರು ಕಿಡಿಗೇಡಿಗಳ ಜೊತೆ ಕೈಜೋಡಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನ್ಯಾಯಕ್ಕಾಗಿ ಒತ್ತಾಯ:

ಕಿಡಿಗೇಡಿಗಳ ವಿರುದ್ಧ ಈಗಾಗಲೇ ಎದುರು FIR (0026/2026) ದಾಖಲಾಗಿದ್ದರೂ, ಇನ್ನೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಸುಳ್ಳು FIR ನಿಂದ ಅಮಾಯಕರನ್ನು ಮುಕ್ತಗೊಳಿಸಬೇಕು ಮತ್ತು ಅತಿಕ್ರಮಣ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.

ಹಾವೇರಿ ಎಸ್‌ಪಿ ಅವರಿಗೆ “ಮರುತನಿಖೆ ನಡೆಸಿ (Re-examine)” ಎಂದು ಉನ್ನತ ಮಟ್ಟದ ಸೂಚನೆ ದೊರೆತಿದ್ದು, ಸಂತ್ರಸ್ತರು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.

You may also like

News

CODP ಮಂಗಳೂರು ಹಾಗೂ ಕ್ರಾಸ್ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕತ್ವಕ್ಕೆ ತರಬೇತಿ

ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ನಾಯಕತ್ವವನ್ನು ಬಲಪಡಿಸುವ ಉದ್ದೇಶದಿಂದ ಸಿಓಡಿಪಿ ಮಂಗಳೂರು ಹಾಗೂ ಕ್ರಾಸ್ ಸಂಸ್ಥೆ, ಬೆಂಗಳೂರು ಇವರ ಸಹಯೋಗದಲ್ಲಿ ಮಹಿಳಾ ಸಬಲೀಕರಣ ಯೋಜನೆಯಡಿ “ಸ್ಥಳೀಯ ಆಡಳಿತದಲ್ಲಿ ನಾಯಕತ್ವ”
News

ಮಿಲಾಗ್ರಿಸ್ ಸೊಸೈಟಿಯಿಂದ ಪಾನೀರ್ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ನೆರವು

ಆಶ್ರಮಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ – ಜೆ. ಆರ್. ಲೋಬೊ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ ಉರ್ವಾ ಶಾಖೆಯ ಆಶ್ರಯದಲ್ಲಿ

You cannot copy content of this page