October 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾರ್ಚ್ 31 ರಿಂದ ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದ ವಾರ್ಷಿಕ ನಡ್ವಾಲ್ ಸಿರಿ ಜಾತ್ರೆ

ತುಳುನಾಡಿನ ಪವಿತ್ರ ಆಲಡೆ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದ ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಈ ವರ್ಷದ ವಾರ್ಷಿಕ ನಡ್ವಾಲ್ ಸಿರಿ ಜಾತ್ರೆಯು ಮಾರ್ಚ್ 31 ರಿಂದ ಏಪ್ರಿಲ್ 4ರವರೆಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ಎಂ. ನಾಗೇಶ್ ಕುಮಾರ್ ಅವರು ತಿಳಿಸಿದರು.

ಮಾರ್ಚ್ 24 ರಂದು ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಗ್ಗಿ ಹುಣ್ಣಿಮೆಯ ವಿಶೇಷ ಸಂದರ್ಭದಲ್ಲಿ ನಡೆಯುವ ಈ ಜಾತ್ರೋತ್ಸವಕ್ಕೆ ನಾಡಿನಾದ್ಯಂತ ಸಾವಿರಾರು ಭಕ್ತರು ಆಗಮಿಸಲಿದ್ದಾರೆ ಎಂದರು.

ಧಾರ್ಮಿಕ ಕಾರ್ಯಕ್ರಮಗಳ ವಿವರ:

ನೇತ್ರಾವತಿ ನದಿಯ ದಡದಲ್ಲಿರುವ ಈ ಪುಣ್ಯಕ್ಷೇತ್ರದಲ್ಲಿ ಜಾತ್ರೆಯ ಅಂಗವಾಗಿ ವೈವಿಧ್ಯಮಯ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ:

* ಮಾರ್ಚ್ 31: ಬೆಳಿಗ್ಗೆಯಿಂದ ದೇವತಾ ಕಾರ್ಯಗಳು ಹಾಗೂ ರಾತ್ರಿ ದೈವಗಳ ನೇಮೋತ್ಸವ.

* ಏಪ್ರಿಲ್ 1: ಬೆಳಿಗ್ಗೆ ಶ್ರೀ ದೇವರ ಉತ್ಸವ ಮತ್ತು ಭಜನಾ ಸಂಕೀರ್ತನೆ. ರಾತ್ರಿ ಅಬ್ಬಕ್ಕ-ದಾರಗರ ಚೆನ್ನೆಮಣೆ ಆಟ ಹಾಗೂ ಕ್ಷೇತ್ರದ ಪ್ರಧಾನ ದೈವ ಸೇಮಕಲ್ಲ ಪಂಜುರ್ಲಿಗೆ ನೇಮೋತ್ಸವ.

* ಏಪ್ರಿಲ್ 2: ಬೆಳಿಗ್ಗೆ ನಾಗದರ್ಶನ ಸೇವೆ ಮತ್ತು ದೇವರ ಉತ್ಸವ. ರಾತ್ರಿ 7 ಗಂಟೆಯಿಂದ ಪ್ರಸಿದ್ಧ ‘ವಾರ್ಷಿಕ ನಡ್ವಾಲ್ ಸಿರಿ ಜಾತ್ರೆ’ ಆರಂಭವಾಗಲಿದ್ದು, ರಾತ್ರಿ 8ಕ್ಕೆ ಧಾರ್ಮಿಕ ಸಭೆ ಹಾಗೂ ರಾತ್ರಿ 10ಕ್ಕೆ ‘ರಾಘು ಮಾಸ್ಟ್ರು’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಕ್ಷೇತ್ರದ ವಿಶೇಷತೆ:

ಈ ಕ್ಷೇತ್ರದಲ್ಲಿ ಸ್ವಯಂಭೂ ಲಿಂಗ ಶ್ರೀ ಲೋಕನಾಥೇಶ್ವರ (ಬೆರ್ಮರು) ಪ್ರಧಾನ ದೇವರಾಗಿದ್ದು, ಎಡಭಾಗದಲ್ಲಿ ಸತ್ಯದ ಸಿರಿ ಹಾಗೂ ಬಲಭಾಗದಲ್ಲಿ ಕುಮಾರ (ಸುಬ್ರಹ್ಮಣ್ಯ) ಮತ್ತು ಗಣಪತಿ, ದುರ್ಗಾದೇವಿಯ ಸನ್ನಿಧಿಗಳಿವೆ. ಭಕ್ತರು ಹರಕೆಯ ರೂಪದಲ್ಲಿ ಹುರುಳಿ, ಅಕ್ಕಿ, ತೆಂಗಿನಕಾಯಿ, ಹಿಂಗಾರ ಮತ್ತು ಪುಂಡಿ ಪಣವನ್ನು ಅರ್ಪಿಸುವುದು ಇಲ್ಲಿನ ವಿಶೇಷ ಪದ್ಧತಿಯಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ, ಸದಸ್ಯರಾದ ಪ್ರಸಾದ್ ಕುಮಾರ್ ಏಣಿಂಜೆ ಮತ್ತು ಸಂತೋಷ್ ಗೌಡ ಉಪಸ್ಥಿತರಿದ್ದರು.

You may also like

News

ಕಳ್ಳತನ ಪ್ರಕರಣ – ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವಿಟ್ಲ ಪೊಲೀಸರಿಂದ ಬಂಧನ

ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಕೇರಳದ ಮಲಪ್ಪುರಂ ನಿವಾಸಿ ರಂಶೀದ್‌ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ
News

Father Muller Medical College Hospital Showcases Green Healthcare Initiatives at NABH National Patient Safety Conference in Delhi

Selected for a national-level presentation, FMMCH highlights sustainable environmental practices, responsible resource management and resilience in healthcare delivery Father Muller

You cannot copy content of this page