October 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಗುರುಪುರದಲ್ಲಿ ಸಂಭ್ರಮದ ‘ಮೂಳೂರು-ಅಡೂರು ಜೋಡುಕರೆ ಕಂಬಳ’

ಏಪ್ರಿಲ್ 4 ರಂದು ಕೋಣಗಳ ಹಬ್ಬ!

ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಮತ್ತೊಮ್ಮೆ ಸಜ್ಜಾಗುತ್ತಿದೆ ಗುರುಪುರ. ಮಣಿಬೆಟ್ಟುಗುತ್ತು ಎದುರಿನ ಗದ್ದೆಯಲ್ಲಿ ಏಪ್ರಿಲ್ 4ರಂದು ಶನಿವಾರ ತೃತೀಯ ವರ್ಷದ ಹೊನಲು ಬೆಳಕಿನ ‘ಮೂಳೂರು-ಅಡೂರು ಜೋಡುಕರೆ ಗುರುಪುರ ಕಂಬಳ’ ಅತ್ಯಂತ ವೈಭವದಿಂದ ನಡೆಯಲಿದೆ.

ಕಾರ್ಯಕ್ರಮದ ಮುಖ್ಯಾಂಶಗಳು:

* ಉದ್ಘಾಟನೆ: ಅಂದು ಬೆಳಿಗ್ಗೆ 8:30ಕ್ಕೆ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಅವರು ಕಂಬಳವನ್ನು ಉದ್ಘಾಟಿಸಲಿದ್ದಾರೆ.

* ಸಭಾ ಕಾರ್ಯಕ್ರಮ: ಸಂಜೆ 6:30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್ ಫರೀದ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

* ವಿಶೇಷ ಆಕರ್ಷಣೆ: ಕಂಬಳದ ನಡುವೆ ತುಳುನಾಡಿನ ಕಲೆಗೆ ಮನ್ನಣೆ ನೀಡುವಂತೆ ರಾತ್ರಿ 9:30ಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದೊಂದಿಗೆ ‘ಮಣಿಮೇಧ ಮಂತ್ರದೇವತೆ’ ಎಂಬ ಪುರಾಣಾಧಾರಿತ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಕೋಣಗಳ ಓಟದ ಸಮಯ:

ಕಂಬಳದ ಸ್ಪರ್ಧೆಗಳು ವಿವಿಧ ವಿಭಾಗಗಳಲ್ಲಿ ನಡೆಯಲಿದ್ದು, ಸಮಯ ಈ ಕೆಳಗಿನಂತಿದೆ:

* ಬೆಳಿಗ್ಗೆ 9:30: ನೇಗಿಲು ಕಿರಿಯ ವಿಭಾಗ.

* ಬೆಳಿಗ್ಗೆ 11:30: ನೇಗಿಲು ಹಿರಿಯ ವಿಭಾಗ.

* ಮಧ್ಯಾಹ್ನ 3:00: ಹಗ್ಗ ಹಿರಿಯ ಮತ್ತು ಕಿರಿಯ ವಿಭಾಗ.

* ಸಂಜೆ 5:00: ಕನೆ ಹಲಗೆ ಮತ್ತು ಅಡ್ಡ ಹಲಗೆ ಸ್ಪರ್ಧೆ.

ಬಹುಮಾನಗಳ ಮಳೆ:

ಗೆದ್ದ ಕೋಣಗಳ ಮಾಲೀಕರಿಗೆ ಚಿನ್ನದ ಪವನ್, ಬೆಳ್ಳಿ ನಾಣ್ಯಗಳು ಹಾಗೂ ನಗದು ಬಹುಮಾನಗಳನ್ನು ನೀಡಲಾಗುವುದು. ವಿಶೇಷವಾಗಿ ಕನೆ ಹಲಗೆ ವಿಭಾಗದಲ್ಲಿ ನೀರು ಹಾಯಿಸಿದ ಎಲ್ಲಾ ಕೋಣಗಳಿಗೆ 1 ಗ್ರಾಂ ಚಿನ್ನದ ಪದಕ ನೀಡುವ ಮೂಲಕ ಕಂಬಳ ಅಭಿಮಾನಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಮೂಳೂರು-ಅಡೂರು ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರಾದ ಇನಾಯತ್ ಅಲಿ ಮತ್ತು ಪದಾಧಿಕಾರಿಗಳು ಈ ಅದ್ಧೂರಿ ಜಾನಪದ ಕ್ರೀಡಾಕೂಟಕ್ಕೆ ಸರ್ವರನ್ನು ಪ್ರೀತಿಯಿಂದ ಆಹ್ವಾನಿಸಿದ್ದಾರೆ.

ಇಂದು ಮಾರ್ಚ್ 26ರಂದು ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಪದ್ಮನಾಭ ಕೋಟ್ಯಾನ್, ಸ್ಥಾಪಕಾಧ್ಯಕ್ಷರಾದ ರಾಜ್ ಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷರಾದ ಜಗದೀಶ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಯಶವಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

You may also like

News

ಕಳ್ಳತನ ಪ್ರಕರಣ – ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವಿಟ್ಲ ಪೊಲೀಸರಿಂದ ಬಂಧನ

ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಕೇರಳದ ಮಲಪ್ಪುರಂ ನಿವಾಸಿ ರಂಶೀದ್‌ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ
News

Father Muller Medical College Hospital Showcases Green Healthcare Initiatives at NABH National Patient Safety Conference in Delhi

Selected for a national-level presentation, FMMCH highlights sustainable environmental practices, responsible resource management and resilience in healthcare delivery Father Muller

You cannot copy content of this page