July 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳದಲ್ಲಿ ಭರ್ಜರಿ ಬೇಟೆ – 7.64 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ದ್ರವ್ಯ ಸಹಿತ ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ!

ಕಾರಿನಲ್ಲಿ ಅಕ್ರಮವಾಗಿ ಎಂಡಿಎಂಎ (MDMA) ಮಾದಕ ದ್ರವ್ಯವನ್ನು ಸಾಗಾಟ ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಬರೋಬ್ಬರಿ 7,64,000 ರೂಪಾಯಿ ಮೌಲ್ಯದ ನಿಷೇಧಿತ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಪುದು ನಿವಾಸಿ 39 ವರ್ಷ ಪ್ರಾಯದ ಎ. ಜುಬೈರ್, ಸಜಿಪ ಮುನ್ನೂರು ನಿವಾಸಿ 36 ವರ್ಷ ಪ್ರಾಯದ ಮೊಹಮ್ಮದ್ ಸವಾದ್ ಹಾಗೂ ಬಿ. ಮೂಡ ನಿವಾಸಿ ಬಿ.ಎಮ್. ರಶೀದ್ ಯಾನೆ ಮಾರಿಮುತ್ತು ಬಂಧಿತ ಆರೋಪಿಗಳಾಗಿದ್ದಾರೆ.

ನಡೆದಿದ್ದೇನು?:

ಜೂನ್ 4ರಂದು ಗುರುವಾರ ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಸಂದೀಪ್‌ ಕುಮಾರ್‌ ಶೆಟ್ಟಿ ಹಾಗೂ ಸಿಬ್ಬಂದಿಗಳ ತಂಡ ಮೆಲ್ಕಾರ್ ಫ್ಲೈಒವರ್ ಬಳಿ ವಾಹನ ತಪಾಸಣೆ ನಡೆಸುತ್ತಿತ್ತು. ಈ ವೇಳೆ ಸಂಶಯಾಸ್ಪದವಾಗಿ ಬಂದ KA 19 MR 1997 ನೋಂದಣಿಯ ಕಾರನ್ನು ತಡೆದು ನಿಲ್ಲಿಸಿ ಪೊಲೀಸರು ಪರಿಶೀಲಿಸಿದ್ದಾರೆ.

ಕಾರನ್ನು ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಡ್ರಗ್ಸ್ ಸೇವನೆಗೆ ಬಳಸುವ ವಿಶಿಷ್ಟ ಸಾಧನ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡು ಕಾರಿನಲ್ಲಿದ್ದ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಮಾದಕ ದ್ರವ್ಯ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳು:

* 76 ಗ್ರಾಂ 40 ಮಿಲಿಗ್ರಾಂ ಎಂಡಿಎಂಎ (ಮೌಲ್ಯ ಸುಮಾರು ₹7,64,000/-)

* ಕೃತ್ಯಕ್ಕೆ ಬಳಸಿದ ಕಾರು

* ಆರೋಪಿಗಳ ಬಳಿಯಿದ್ದ 3 ಮೊಬೈಲ್ ಫೋನ್‌ಗಳು ಮತ್ತು ಡ್ರಗ್ಸ್ ಸೇವನೆಯ ಉಪಕರಣಗಳು.

ಬಂಧಿತ ಆರೋಪಿಗಳ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಜಾಲದ ಹಿಂದಿರುವ ಇತರರ ಪತ್ತೆಗಾಗಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

You may also like

News

₹82 ಕೋಟಿ ಮೌಲ್ಯದ ಮಾದಕ ವಸ್ತು ಬೆಂಕಿಗಾಹುತಿ ಮಾಡಿದ ಮಂಗಳೂರು ಪೊಲೀಸರು!

ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದತ್ತ ದೃಢ ಹೆಜ್ಜೆಯಿಟ್ಟಿರುವ ಮಂಗಳೂರು ನಗರ ಪೊಲೀಸರು, ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ ಸುಮಾರು ₹82 ಕೋಟಿ ಮೌಲ್ಯದ ಅಪಾರ ಪ್ರಮಾಣದ
News

ಶಾಸಕ ಯಶ್‌ಪಾಲ್ ಸುವರ್ಣ ದ್ವೇಷಪೂರಿತ ಹೇಳಿಕೆಗೆ ಆಕ್ರೋಶ

ಕ್ಷಮೆಯಾಚಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೊಹಮ್ಮದ್ ಆಥಿಫ್ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ

You cannot copy content of this page