July 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೊಬೈಲ್ ಮಾತಿನ ಜಗಳಕ್ಕೆ ರಕ್ತದ ಅಂತ್ಯ – ಕೊಡಲಿಯಿಂದ ತಮ್ಮನ ಹತ್ಯೆ ಮಾಡಿದ ಅಣ್ಣ

ಮೊಬೈಲ್‌ನಲ್ಲಿ ಯುವತಿಯೊಬ್ಬಳೊಂದಿಗೆ ಮಾತನಾಡಿದ್ದ ವಿಚಾರವಾಗಿ ಆರಂಭವಾದ ಸಹೋದರರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮಂಗಳೂರು ತಾಲೂಕಿನ ಕಾಟಿಪಳ್ಳ ಗ್ರಾಮದ ಚೊಕ್ಕಬೆಟ್ಟು, ಕೃಷ್ಣಮಠ ರಸ್ತೆ ಸಮೀಪ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.  ಚೊಕ್ಕಬೆಟ್ಟಿನ ರೇಖಾ ಅವರ ಬಾಡಿಗೆ ಮನೆಯಲ್ಲಿ ಕಳೆದ ಐದು ವರ್ಷಗಳಿಂದ ಶಿವಲೀಲಾ ಹಾಗೂ ಆಕೆಯ ಇಬ್ಬರು ಪುತ್ರರಾದ ಸೋಮನಾಥ ಮತ್ತು ಮಲ್ಲಿಕಾರ್ಜುನ ವಾಸವಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು.

ಜುಲೈ 19ರಂದು ಭಾನುವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಮಲ್ಲಿಕಾರ್ಜುನ ಮೊಬೈಲ್‌ನಲ್ಲಿ ಯುವತಿಯೊಬ್ಬಳೊಂದಿಗೆ ಮಾತನಾಡುತ್ತಿದ್ದುದನ್ನು ಅಣ್ಣ ಸೋಮನಾಥ ವಿರೋಧಿಸಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಮಲ್ಲಿಕಾರ್ಜುನ ಅಣ್ಣನಿಗೆ ಬೈದಿದ್ದಾನೆ ಎನ್ನಲಾಗಿದೆ.

ಇದರಿಂದ ತೀವ್ರ ಆಕ್ರೋಶಗೊಂಡ ಸೋಮನಾಥ, ತಮ್ಮ ಮಲಗಿದ ಬಳಿಕ ಮನೆಯಲ್ಲಿದ್ದ ಕೊಡಲಿಯಿಂದ ತಲೆ ಮತ್ತು ಮುಖಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದಾನೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ BNS ಕಲಂ 103(1)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಕೃಷ್ಣಾಪುರ ಮಠ ರಸ್ತೆ ಸಮೀಪದ ಪೊದೆಯಲ್ಲಿ ಅವಿತುಕೊಂಡಿದ್ದ ಆರೋಪಿಯನ್ನು ಬಂಧಿಸಿದರು. ವಿಚಾರಣೆ ವೇಳೆ ಆರೋಪಿಯು ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

You may also like

News

ದಕ್ಷಿಣ ಕನ್ನಡ ರಸ್ತೆ ಅಪಘಾತ ತಡೆಗೆ ಹೈಟೆಕ್ ಕಣ್ಣು – ಸಂಚಾರ ನಿಯಮ ಉಲ್ಲಂಘಿಸಿದರೆ ನೇರ ಮನೆಗೆ ನೋಟೀಸ್!

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ಹಾಗೂ ಸಂಚಾರ ನಿಯಮಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಪೊಲೀಸ್ ಇಲಾಖೆಯು ಮಹತ್ವದ
News

ಕ್ರೈಸ್ತ ಸಮುದಾಯದ ಐಕ್ಯತೆಗೆ ದಾವಣಗೆರೆ ಸಾಕ್ಷಿ – ಕರ್ನಾಟಕ ಕ್ರೈಸ್ತ ಸಂಘಟನೆಯಿಂದ ಐಕ್ಯತಾ ಕೂಟ

ಅನ್ಯಾಯದ ವಿರುದ್ಧ ಯುವಕರು ಧ್ವನಿಯೆತ್ತಲು ಸಹೋದರ ಸ್ಟ್ಯಾನಿ ಪಿಂಟೋ ಬೆಂಗಳೂರು ಕರೆ ಜಿಲ್ಲಾ ನೂತನ ಸಮಿತಿ ರಚನೆ!   ದಾವಣಗೆರೆ ಇಲ್ಲಿನ ನಗರದಲ್ಲಿ ಜುಲೈ 22ರಂದು ಬುಧವಾರ

You cannot copy content of this page