October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮುಹಮ್ಮದ್ ರಿಯಾಝ್ ಕಾರ್ಕಳ ಅವರ ‘ತುಳುನಾಡಿನ ಕೋಮುಸಾಮರಸ್ಯ ಪರಂಪರೆ’ ಕೃತಿಗೆ ಇಂಗ್ಲಿಷ್ ರೂಪ

ತುಳುನಾಡಿನ ಬಹುಸಂಸ್ಕೃತಿ, ಸೌಹಾರ್ದ ಹಾಗೂ ಸಹಬಾಳ್ವೆಯ ಪರಂಪರೆಯನ್ನು ಐತಿಹಾಸಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಪರಿಚಯಿಸುವ ಮುಹಮ್ಮದ್ ರಿಯಾಝ್ ಕಾರ್ಕಳ ಅವರ ಚೊಚ್ಚಲ ಕೃತಿ ‘ತುಳುನಾಡಿನ ಕೋಮುಸಾಮರಸ್ಯ ಪರಂಪರೆ’ ಇದೀಗ ಇಂಗ್ಲಿಷ್ ಭಾಷೆಗೆ ಭಾಷಾಂತರಗೊಂಡಿದ್ದು, ‘Tulunadu: The Legacy of Communal Harmony’ ಎಂಬ ಶೀರ್ಷಿಕೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

2025ರಲ್ಲಿ ಪ್ರಕಟಗೊಂಡ ಮೂಲ ಕೃತಿಯನ್ನು ಡಾ. ಗಣನಾಥ ಎಕ್ಕಾರ್ ಹಾಗೂ ಡಾ. ಎಂ. ಮೋಹನ್ ಆಳ್ವ ಬಿಡುಗಡೆಗೊಳಿಸಿದ್ದರು. ತುಳುನಾಡಿನ ಸೌಹಾರ್ದ ಪರಂಪರೆಯ ವಿವಿಧ ಆಯಾಮಗಳನ್ನು ಪರಿಚಯಿಸುವ ಕೃತಿಯಲ್ಲಿ ಇಲ್ಲಿನ ಪ್ರಭುತ್ವಗಳು, ದೈವಾರಾಧನೆ, ಹಬ್ಬಹರಿದಿನಗಳು, ಧಾರ್ಮಿಕ ಕೇಂದ್ರಗಳು ಹಾಗೂ ಸ್ವಾತಂತ್ರ್ಯ ಹೋರಾಟ ಸೇರಿದಂತೆ ಹಲವು ಸಾಮಾಜಿಕ-ಐತಿಹಾಸಿಕ ಅಂಶಗಳು ಕೋಮುಸಾಮರಸ್ಯದ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ವಿಶ್ಲೇಷಿಸಲಾಗಿದೆ.

ಇದರೊಂದಿಗೆ, ವರ್ತಮಾನದ ತುಳುನಾಡಿನಲ್ಲಿ ಕೋಮುಸಾಮರಸ್ಯಕ್ಕೆ ಎದುರಾಗಿರುವ ಸವಾಲುಗಳು ಹಾಗೂ ಸೌಹಾರ್ದವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಗಳ ಬಗ್ಗೆಯೂ ಕೃತಿ ಬೆಳಕು ಚೆಲ್ಲುತ್ತದೆ.

ಕೃತಿಯ ವಿಷಯ ಸಂಗ್ರಹಣೆಯ ಸಂದರ್ಭದಲ್ಲಿ ಲೇಖಕರು ಡಾ. ಮೋಹನ್ ಆಳ್ವ, ಮುಷ್ತಾಕ್ ಹೆನ್ನಬೈಲು, ಅರವಿಂದ ಚೊಕ್ಕಾಡಿ, ಇಸ್ಮತ್ ಪಜೀರ್, ಡಾ. ಚಿನ್ನಪ್ಪ ಗೌಡ, ಫಾದರ್ ಅಲ್ಬನ್ ಹಾಗೂ ಮುನಿರಾಜ ರೆಂಜಾಳ ಸೇರಿದಂತೆ ಹಲವು ಗಣ್ಯರನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಅಂದಿನ ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಹಾಗೂ ಪ್ರಸ್ತುತ ಆರೋಗ್ಯ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಯು.ಟಿ. ಖಾದರ್ ಅವರು ಕೃತಿಗೆ ಸಂದೇಶ ಬರೆದಿದ್ದು, ಇತಿಹಾಸಕಾರ ಡಾ. ಸುರೇಶ್ ರೈ ಮುನ್ನುಡಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಬೆನ್ನುಡಿ ಬರೆದಿದ್ದಾರೆ.

ಸಮಾಜದಲ್ಲಿ ಕೋಮು ಧ್ರುವೀಕರಣದ ಚರ್ಚೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ತುಳುನಾಡಿನ ಸಹಬಾಳ್ವೆ, ಸೌಹಾರ್ದ ಮತ್ತು ಸಾಮರಸ್ಯದ ಪರಂಪರೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ರಚಿಸಲಾದ ಕೃತಿಯನ್ನು ಇದೀಗ ಇಂಗ್ಲಿಷ್‌ಗೆ ಭಾಷಾಂತರಿಸುವ ಮೂಲಕ ವಿಶಾಲ ಓದುಗವರ್ಗಕ್ಕೆ ತಲುಪಿಸುವ ಪ್ರಯತ್ನ ಮಾಡಲಾಗಿದೆ.

Bookspot Publishing House ಇಂಗ್ಲಿಷ್ ಆವೃತ್ತಿಯನ್ನು ಪ್ರಕಟಿಸುತ್ತಿದ್ದು, ಕೃತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಬಿಡುಗಡೆಯ ಬಳಿಕ Amazon, Flipkart ಸೇರಿದಂತೆ ಪ್ರಮುಖ ಆನ್‌ಲೈನ್ ವೇದಿಕೆಗಳಲ್ಲಿ ಕೃತಿ ಲಭ್ಯವಾಗಲಿದೆ.

You may also like

News

ಬೆಳ್ತಂಗಡಿಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು–2026

ಯುವ ಸಮುದಾಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು–2026 ಕಾರ್ಯಕ್ರಮ ಅಕ್ಟೋಬರ್ 8ರಂದು
News

Father Muller Thumbay Campus welcomes Nursing & Allied Health Students

The Course Inauguration Ceremony of the 5th batch of B.Sc. Nursing of Father Muller Nursing College Thumbay (FMNCT) and the

You cannot copy content of this page