October 22, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದಲ್ಲಿ ಶರನ್ನವರಾತ್ರಿ ವೈಭವ ಸಂಪನ್ನ – ಒಂಬತ್ತು ದಿನಗಳ ವಿಶೇಷ ಪೂಜೆ, ಧಾರ್ಮಿಕ ಉತ್ಸವ ಹಾಗೂ ಸಂಗೀತಾರಾಧನೆಗೆ ತೆರೆ

ಸಹಸ್ರಾರು ಮುತ್ತೈದೆಯರಿಗೆ ವಸ್ತ್ರ ಪ್ರಸಾದ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಒಂಬತ್ತು ದಿನಗಳ ಕಾಲ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ನಡೆದ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್ 19ರಂದು ಮಹಾನವಮಿಯಂದು ಸಂಪನ್ನಗೊಂಡಿತು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಸಂಗೀತ ಕಾರ್ಯಕ್ರಮಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು.

ಅಕ್ಟೋಬರ್ 11ರಿಂದ 19ರವರೆಗೆ ಪ್ರತಿದಿನ ರಾತ್ರಿ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಉತ್ಸವ, ಕನ್ನಿಕಾ ಪೂಜೆ ಹಾಗೂ ಅಷ್ಟಾವಧಾನ ಸೇವೆಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಅಕ್ಟೋಬರ್ 17ರಂದು ವಿಶೇಷ ಚಂಡಿಕಾ ಹವನವನ್ನು ನಡೆಸಲಾಯಿತು.

ಮಹಾನವಮಿಯಂದು ವಸ್ತ್ರ ಪ್ರಸಾದ ವಿತರಣೆ:

ಮಹಾನವಮಿಯ ಪ್ರಯುಕ್ತ ಅಕ್ಟೋಬರ್ 19ರಂದು ರಾತ್ರಿ ಶರನ್ನವರಾತ್ರಿಯ ವಿಶೇಷ ಉತ್ಸವಗಳು ಸಮಾಪನಗೊಂಡವು. ಈ ಸಂದರ್ಭದಲ್ಲಿ ಸಹಸ್ರಾರು ಮುತ್ತೈದೆಯರಿಗೆ ವಸ್ತ್ರ ಪ್ರಸಾದ ವಿತರಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮುತ್ತೈದೆಯರು ಸರತಿ ಸಾಲಿನಲ್ಲಿ ಶಿಸ್ತುಬದ್ಧವಾಗಿ ಬಂದು ಭಕ್ತಿಭಾವದಿಂದ ವಸ್ತ್ರ ಪ್ರಸಾದ ಸ್ವೀಕರಿಸಿದರು.

ಭಕ್ತಿಗೀತೆ, ಶಾಸ್ತ್ರೀಯ ಸಂಗೀತದ ಸೊಬಗು:

ನವರಾತ್ರಿ ಉತ್ಸವದ ಅಂಗವಾಗಿ ಕ್ಷೇತ್ರದ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ 6ರಿಂದ ರಾತ್ರಿ 8ರವರೆಗೆ ವಿವಿಧ ಸಂಗೀತ ಕಲಾವಿದರಿಂದ ಭಕ್ತಿಗೀತೆ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆದವು. ಕಲಾವಿದರ ಭಕ್ತಿಪೂರ್ಣ ಗಾಯನವು ಉತ್ಸವದ ಧಾರ್ಮಿಕ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿತು.

ಅಕ್ಟೋಬರ್ 19ರಂದು ರಾತ್ರಿ ಸಂಗೀತ ಕಾರ್ಯಕ್ರಮಗಳೂ ಸಮಾಪನಗೊಂಡವು. ವಿಶೇಷ ಪೂಜೆಗಳು, ಧಾರ್ಮಿಕ ವಿಧಿವಿಧಾನಗಳು, ಉತ್ಸವಗಳು, ಮುತ್ತೈದೆಯರಿಗೆ ವಸ್ತ್ರ ಪ್ರಸಾದ ವಿತರಣೆ ಹಾಗೂ ಸಂಗೀತಾರಾಧನೆಯೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶರನ್ನವರಾತ್ರಿ ಮಹೋತ್ಸವವು ಭಕ್ತಿಪೂರ್ಣವಾಗಿ ಸಂಪನ್ನಗೊಂಡಿತು.

You may also like

News

ಮೂಡುಬಿದಿರೆಯಲ್ಲಿ ವಿದ್ಯುತ್ ಅವಘಡ: ಮಗ ಶೋನ್‌ನ ರಕ್ಷಣೆಗೆ ಧಾವಿಸಿದ ತಾಯಿ ಮರ್ಸಿ ಮಸ್ಕರೇನಸ್‌ಗೂ ವಿದ್ಯುತ್ ಶಾಕ್‌ – ಇಬ್ಬರೂ ದುರ್ಮರಣ!

ಮಗನನ್ನು ರಕ್ಷಿಸಲು ಧಾವಿಸಿದ ತಾಯಿಯೂ ವಿದ್ಯುತ್ ಪ್ರವಹಿಸಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಮೂಡುಬಿದಿರೆಯ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಸಂಭವಿಸಿದೆ. ಘಟನೆಯಲ್ಲಿ 45 ವರ್ಷ ಪ್ರಾಯದ
News

ಮದುವೆ ಸಮಾರಂಭದಲ್ಲಿ 3 ವರ್ಷದ ಬಾಲಕಿಯ ಚಿನ್ನದ ಸರ ಕಳವು – 24 ಗಂಟೆಯೊಳಗೆ ಬರ್ಕೆ ಪೊಲೀಸರಿಂದ ಆರೋಪಿ ಬಂಧನ!

ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಮೂರೂವರೆ ವರ್ಷದ ಬಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬರ್ಕೆ ಠಾಣೆಯ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಪತ್ತೆಹಚ್ಚಿ

You cannot copy content of this page