October 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದೇರಳಕಟ್ಟೆಯ ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ಅಕ್ಟೋಬರ್ 27 ಹಾಗೂ 28ರಂದು ‘ಪ್ರೇರಣಾ ವಿಜ್ಞಾನೋತ್ಸವ 2026’

4,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ – ₹1.80 ಲಕ್ಷ ಮೌಲ್ಯದ ಬಹುಮಾನ!

ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ “ಕುತೂಹಲ ಮತ್ತು ಆವಿಷ್ಕಾರದ ಸಂಗಮ” (Where Curiosity Meets Discovery) ಎಂಬ ಧ್ಯೇಯವಾಕ್ಯದೊಂದಿಗೆ ಪ್ರೇರಣಾ ವಿಜ್ಞಾನೋತ್ಸವ 2026 ಅನ್ನು ಅಕ್ಟೋಬರ್ 27 ಮತ್ತು 28ರಂದು ದೇರಳಕಟ್ಟೆಯ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ. ಎರಡು ದಿನಗಳ ಈ ವಿಜ್ಞಾನೋತ್ಸವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ, ಸೃಜನಶೀಲತೆ, ನಾವೀನ್ಯತೆ, ತಂಡದ ಸಹಕಾರ ಹಾಗೂ ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.

ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸಸ್ ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯೂಟಿಕಲ್ ವಿಭಾಗಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗುತ್ತಿರುವ ಪ್ರೇರಣಾ ವಿಜ್ಞಾನೋತ್ಸವ 2026ರಲ್ಲಿ 50ಕ್ಕೂ ಹೆಚ್ಚು ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಂದ 4,000ಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಈ ಉತ್ಸವವು ಯುವ ಮನಸ್ಸುಗಳಿಗೆ ವಿಜ್ಞಾನವನ್ನು ಅನ್ವೇಷಿಸಲು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ಸೃಜನಶೀಲ ಮತ್ತು ನವೀನ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಮಹತ್ವದ ವೇದಿಕೆಯಾಗಲಿದೆ.

ಉದ್ಘಾಟನಾ ಸಮಾರಂಭ:

ಉದ್ಘಾಟನಾ ಸಮಾರಂಭವು 2026ರ ಅಕ್ಟೋಬರ್ 27ರಂದು ಬೆಳಿಗ್ಗೆ 10:00 ಗಂಟೆಗೆ ಮಂಗಳೂರಿನ ದೇರಳಕಟ್ಟೆಯ ಫಾದರ್ ಮುಲ್ಲರ್ ಕ್ಯಾಂಪಸ್‌ನ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ಫಾಸ್ಟಿನ್ ಲೂಕಾಸ್ ಲೋಬೋರವರು ವಹಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಕ್ಫ್ ಮತ್ತು ಹಜ್ ಸಚಿವರಾದ ಮಾನ್ಯ ಯು. ಟಿ. ಖಾದರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಂಗಳೂರಿನ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್‌ನ ಕಾರ್ಯದರ್ಶಿಗಳಾದ ವಂದನೀಯ ಡಾ. ಪ್ರವೀಣ್ ಲಿಯೋ ಲಸ್ರಾದೊ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪ್ರೇರಣಾ ವಿಜ್ಞಾನೋತ್ಸವವು 28ನೇ ಅಕ್ಟೋಬರ್ 2026ರಂದು ಸಂಜೆ 4:00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಸಮಾರಂಭದಲ್ಲಿ ಫಾದರ್ ಎಲ್. ಎಂ. ಪಿಂಟೋ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ಫಾದರ್ ರೋಷನ್ ಕ್ರಾಸ್ತಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಜ್ಞಾನ ವಸ್ತುಪ್ರದರ್ಶನ:

ವಿದ್ಯಾರ್ಥಿಗಳಿಗೆ ಈ ವಿಜ್ಞಾನ ವಸ್ತುಪ್ರದರ್ಶನವು ತರಗತಿಯ ಕಲಿಕೆಯನ್ನು ಮೀರಿದ ವೈಜ್ಞಾನಿಕ ಪರಿಕಲ್ಪನೆಗಳು, ನವೀನ ಆಲೋಚನೆಗಳು, ಮಾದರಿಗಳು ಹಾಗೂ ಅವುಗಳ ಪ್ರಾಯೋಗಿಕ ಅನ್ವಯಿಕೆಗಳನ್ನು ಅನ್ವೇಷಿಸಲು ಅವಕಾಶ ಕಲ್ಪಿಸುತ್ತದೆ. ಈ ವಸ್ತುಪ್ರದರ್ಶನ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು ವೀಕ್ಷಣೆ, ಪ್ರಯೋಗ, ಪ್ರಶ್ನಿಸುವಿಕೆ ಹಾಗೂ ಹೊಸ ವಿಷಯಗಳ ಅನ್ವೇಷಣೆಯನ್ನು ಪ್ರೋತ್ಸಾಹಿಸುತ್ತವೆ. ನವೀನ ಮಾದರಿಗಳು ಮತ್ತು ವೈಜ್ಞಾನಿಕ ಪರಿಕಲ್ಪನೆಗಳನ್ನು ವೀಕ್ಷಿಸಲು ಎಲ್ಲಾ ವಿದ್ಯಾರ್ಥಿಗಳಿಗೆ ಈ ವಸ್ತುಪ್ರದರ್ಶನವು ಉಚಿತವಾಗಿದ್ದು, ಯಾವುದೇ ನೋಂದಣಿ ಶುಲ್ಕ ಅಥವಾ ಪ್ರವೇಶ ಶುಲ್ಕ ಇರುವುದಿಲ್ಲ.

ಸ್ಪರ್ಧೆಗಳು:

ಪ್ರೇರಣಾ ವಿಜ್ಞಾನೋತ್ಸವ 2026, ಪ್ರೌಢಶಾಲಾ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ವೈಜ್ಞಾನಿಕ ಚಿಂತನೆ, ಸೃಜನಶೀಲತೆ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹಾಗೂ ಪರಿಣಾಮಕಾರಿ ಸಂವಹನ ಕೌಶಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಪ್ರಮುಖ ಸ್ಪರ್ಧೆಗಳಲ್ಲಿ ಶೆರ್ಲಾಕ್ ಚಾಲೆಂಜ್: ಅಪರಾಧ ಸ್ಥಳದ ತನಿಖೆ, ವಿಜ್ಞಾನ ರಸಪ್ರಶ್ನೆ, ವಿಜ್ಞಾನ ಚರ್ಚಾಸ್ಪರ್ಧೆ, ಒಂದು ನಿಮಿಷದ ವಿಜ್ಞಾನಿ, ವಿಜ್ಞಾನ ಎಸ್ಕೇಪ್ ರೂಮ್, ಕೃತಕ ಬುದ್ಧಿಮತ್ತೆ (AI) ಆಧಾರಿತ ಫ್ಲೈಯರ್ ತಯಾರಿಕೆ, ಜೈವಿಕ ಕಲೆ, ವಿಷಯಾಧಾರಿತ ಅಡುಗೆ, ಪೆನ್ಸಿಲ್ ಚಿತ್ರಕಲೆ, ಪೋಸ್ಟರ್ ಸ್ಪರ್ಧೆ, ತ್ಯಾಜ್ಯದಿಂದ ಅದ್ಭುತ  ಮತ್ತು ಶಾರ್ಕ್ ಟ್ಯಾಂಕ್ ಮಾದರಿ ತಯಾರಿಕೆ ಮುಂತಾದ ಸ್ಪರ್ಧೆಗಳು ಸೇರಿವೆ.

ವಿವಿಧ ಸ್ಪರ್ಧಾ ವಿಭಾಗಗಳಲ್ಲಿ 1,80,000 ರೂಪಾಯಿ ಮೌಲ್ಯದ ಬಹುಮಾನಗಳು ಹಾಗೂ ಇನ್ನೂ ಹೆಚ್ಚಿನ ಬಹುಮಾನಗಳನ್ನು ನೀಡಲಾಗುತ್ತಿದ್ದು, ಈ ಉತ್ಸವವು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ, ಸೃಜನಶೀಲತೆ ಮತ್ತು ವೈಜ್ಞಾನಿಕ ಚಿಂತನೆಯನ್ನು ಪ್ರದರ್ಶಿಸಲು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ.

ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್‌ನ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಆಂತರಿಕ ಸ್ಪರ್ಧೆಗಳನ್ನೂ ಆಯೋಜಿಸಲು ಯೋಜಿಸಲಾಗಿದೆ.

ಪ್ರಾಯೋಗಿಕ ತರಬೇತಿ ಮತ್ತು ಅನುಭವಾಧಾರಿತ ಕಲಿಕೆ:

ನೋಂದಾಯಿತ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಕಲಿಯಲು ಮತ್ತು ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು 4 ಪ್ರತ್ಯೇಕ ಪ್ರಾಯೋಗಿಕ ತರಬೇತಿ ಕೇಂದ್ರಗಳನ್ನು (ಹ್ಯಾಂಡ್ಸ್-ಆನ್ ಟ್ರೈನಿಂಗ್ ಸ್ಟೇಷನ್ಸ್) ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಜೀವ ರಕ್ಷಣಾ ವಿಧಾನಗಳು (ಬೇಸಿಕ್ ಲೈಫ್ ಸಪೋರ್ಟ್ – ಬಿ ಎಲ್ ಎಸ್), ಹೃದಯ-ಶ್ವಾಸಕೋಶ ಪುನಶ್ಚೇತನ ವಿಧಾನ (ಕಾರ್ಡಿಯೋಪಲ್ಮನರಿ ರಿಸಸಿಟೇಷನ್ – ಸಿ ಪಿ ಆರ್), ಪ್ರಥಮ ಚಿಕಿತ್ಸೆ (ಫಸ್ಟ್ ಏಯ್ಡ್), ಡಿಎನ್‌ಎ ಪ್ರತ್ಯೇಕಿಸುವಿಕೆ (ಡಿ ಎನ್ ಎ ಐಸೊಲೇಷನ್), ಓಆರ್‌ಎಸ್ ದ್ರಾವಣ ತಯಾರಿಕೆ (ಓ ಆರ್ ಎಸ್ ಪ್ರಿಪರೇಷನ್) ಹಾಗೂ ಪಿಎಚ್ ಮೌಲ್ಯ ಪರೀಕ್ಷೆ (ಪಿ ಎಚ್ ಟೆಸ್ಟಿಂಗ್) ಸೇರಿದಂತೆ ವಿವಿಧ ವೈಜ್ಞಾನಿಕ ಮತ್ತು ಆರೋಗ್ಯ ಸಂಬಂಧಿತ ಕೌಶಲ್ಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ಕುತೂಹಲ ಮತ್ತು ನಾವೀನ್ಯತೆಗೆ ಒಂದು ವೇದಿಕೆ:

ಒಂದೇ ವೇದಿಕೆಯಲ್ಲಿ 50ಕ್ಕೂ ಹೆಚ್ಚು ಶಾಲೆಗಳ 4,000ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ, ಪ್ರಾಯೋಗಿಕ ಅನುಭವಗಳ ಮೂಲಕ ವೀಕ್ಷಿಸಲು, ಸೃಜನಶೀಲತೆಯನ್ನು ಪ್ರದರ್ಶಿಸಲು, ಸ್ಪರ್ಧಿಸಲು ಮತ್ತು ಕಲಿಯಲು ಅವಕಾಶಗಳನ್ನು ಒದಗಿಸುವ ಮೂಲಕ ಪ್ರೇರಣಾ ವಿಜ್ಞಾನ ಉತ್ಸವ – 2026, ಭವಿಷ್ಯದ ನವೋದ್ಯಮಿಗಳು, ಸಂಶೋಧಕರು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವುಳ್ಳವರ ಹೊಸ ಪೀಳಿಗೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಸುಸ್ಥಿರತೆ, ವೈಜ್ಞಾನಿಕ ಸಂವಹನ, ಕೃತಕ ಬುದ್ಧಿಮತ್ತೆ, ಸೃಜನಾತ್ಮಕ ಅಭಿವ್ಯಕ್ತಿ ಮತ್ತು ಮಾದರಿ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಒಳಗೊಂಡಿರುವ ಇದರ ವೈವಿಧ್ಯಮಯ ಕಾರ್ಯಕ್ರಮವು, ವಿಜ್ಞಾನವು ನಮ್ಮ ಜಗತ್ತಿನ ಕುರಿತಾದ ತಿಳುವಳಿಕೆಯನ್ನು ಹೇಗೆ ರೂಪಿಸಬಲ್ಲದು ಎಂಬುದನ್ನು ತಿಳಿಸುತ್ತದೆ.

ಪ್ರೇರಣಾ ವಿಜ್ಞಾನ ಉತ್ಸವ – 2026, ಯುವ ಮನಸ್ಸುಗಳಿಗೆ ಹೊಸ ಆಲೋಚನೆಗಳನ್ನು ಅನ್ವೇಷಿಸಲು, ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ವೈಜ್ಞಾನಿಕ ಅನ್ವೇಷಣೆಯ ಉತ್ಸಾಹವನ್ನು ಸಂಭ್ರಮಿಸಲು ಪ್ರೇರಣಾದಾಯಕ ಹಾಗೂ ಆಸಕ್ತಿದಾಯಕ ವೇದಿಕೆಯಾಗಲಿದೆ.

ಪ್ರೇರಣಾ ವಿಜ್ಞಾನ ಉತ್ಸವ 2026 — ಕುತೂಹಲದಿಂದ ಆವಿಷ್ಕಾರದತ್ತ:

ವಂದನೀಯ ಫಾದರ್ ಫಾಸ್ಟಿನ್ ಲೂಕಾಸ್ ಲೋಬೋ, ನಿರ್ದೇಶಕರು, FMCI; ವಂದನೀಯ ಫಾದರ್ ಡೊನಾಲ್ಡ್ ನಿಲೇಶ್ ಕ್ರಾಸ್ಟಾ, ಆಡಳಿತಾಧಿಕಾರಿಗಳು, FMHMC & FMCOPS; ವಂದನೀಯ ಫಾದರ್ ನೆಲ್ಸನ್ ಧೀರಜ್ ಪಾಯಸ್, ಆಡಳಿತಾಧಿಕಾರಿಗಳು, FMHPD; ಡಾ. ಪ್ರಭು ಕಿರಣ್, ಪ್ರಾಂಶುಪಾಲರು, FMHMC; ಡಾ. ಸತೀಶ್, ಪ್ರಾಂಶುಪಾಲರು, FMCOPS; ಡಾ. ವಿಲ್ಮಾ ಮೀರಾ ಡಿಸೋಜ, ಉಪಪ್ರಾಂಶುಪಾಲರು, FMHMC; ಡಾ. ಗಿರೀಶ್ ನವಾಡ, ವೈದ್ಯಕೀಯ ಅಧೀಕ್ಷಕರು, FMHMC; ಡಾ. ದೀಪಾ ಪಾಯಸ್, ಉಪ ವೈದ್ಯಕೀಯ ಅಧೀಕ್ಷಕರು; ಡಾ. ಇಂದು ಓ.ಎಸ್., ಸಂಚಾಲಕರು; ನಿಶ್ಮಿತಾ, ಸಹ-ಸಂಚಾಲಕರು; ಡಾ. ಧೀರಜ್ ಫೆರ್ನಾಂಡಿಸ್, ಮಾಧ್ಯಮ ಸಂಯೋಜಕರು ಹಾಗೂ ಡಾ. ಶ್ರೇಯಾಂಕ್ ಕೋಟ್ಯಾನ್, ಸಹ-ಸಂಯೋಜಕರು. ಪತ್ರಿಕಾ ಪ್ರಕಟಣೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

You may also like

News

Bendoor Church Inaugurates Long-Awaited Adoration Chapel – Blessed Sacrament Installed

Marking a significant milestone in the spiritual journey of the Saint Sebastian Church Bendoor community, the long-awaited Adoration Chapel was
News

SCS HOSPITAL MARKS 39 YEARS OF SERVICE WITH MEMORIAL SCHOLARSHIPS AND CELEBRATIONS

SCS Hospital celebrated its 39th Hospital Anniversary with great enthusiasm, combining a memorial scholarship programme in honour of late Sorake

You cannot copy content of this page