October 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅವರ ಪತ್ನಿ ಉಷಾಕುಮಾರಿ ನಿಧನ

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅವರ ಪತ್ನಿ 56 ವರ್ಷ ಪ್ರಾಯದ ಉಷಾಕುಮಾರಿ ಅವರು ಅಸೌಖ್ಯದಿಂದ ಇಂದು ಅಕ್ಟೋಬರ್ 24ರಂದು ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಉರ್ವದ ಸೈಂಟ್ ಅಲೋಶಿಯಸ್ ಹೈಸ್ಕೂಲ್‌ನಲ್ಲಿ ಸುಮಾರು 26 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಅವರು, ಮಂಗಳೂರಿನ ಚಿನ್ಮಯ ಹೈಸ್ಕೂಲ್ ಹಾಗೂ ಉಳ್ಳಾಲದ ಭಾರತ್ ಹೈಸ್ಕೂಲ್‌ನಲ್ಲಿಯೂ ಕೆಲವು ವರ್ಷಗಳ ಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು.

ಮೃತರು ಪತಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಭಾನುವಾರ ಅಂತಿಮ ದರ್ಶನ:

ಮೃತರ ಅಂತಿಮ ದರ್ಶನವು ನಾಳೆ ಅಕ್ಟೋಬರ್ 25ರಂದು ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಂಗಳೂರಿನ ಹ್ಯಾಟ್ ಹಿಲ್‌ನಲ್ಲಿರುವ ಅವರ ಸ್ವಗೃಹದಲ್ಲಿ ನಡೆಯಲಿದೆ.

ಅಂತಿಮ ದರ್ಶನದ ವಿಳಾಸ:

ವಿನಾಯಕ ಅಪಾರ್ಟ್‌ಮೆಂಟ್, ಡೋರ್ ನಂಬರ್ 102, ಕರಾವಳಿ ಉತ್ಸವ ಮೈದಾನದ ಮುಂಭಾಗದ ರಸ್ತೆ, ಹ್ಯಾಟ್ ಹಿಲ್, ಮಂಗಳೂರು.

ಅಂತಿಮ ಸಂಸ್ಕಾರವು ಭಾನುವಾರ ಮಧ್ಯಾಹ್ನ 12.30ಕ್ಕೆ ಕದ್ರಿ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

 

You may also like

News

ಕೊಲೆ ಆರೋಪದ ಸುಳ್ಳು ಪ್ರಕರಣ ದಾಖಲಿಸಿ ಹಣ ಮತ್ತು ಆಸ್ತಿ ಸುಲಿಗೆಗೆ ಸಂಚು – ನವೀನ್ ತೊರಾಸ್ ಬಂಧನ

ಕೊಲೆಯಂತಹ ಗಂಭೀರ ಆರೋಪ ಹೊರಿಸಿ ಹಣ ಮತ್ತು ಆಸ್ತಿಯನ್ನು ಸುಲಿಗೆ ಮಾಡಲು ಸಂಚು ರೂಪಿಸಿ, ಸಾರ್ವಜನಿಕವಾಗಿ ಕುಟುಂಬದ ಗೌರವಕ್ಕೆ ಧಕ್ಕೆ ತಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ
News

Bendoor Church Inaugurates Long-Awaited Adoration Chapel – Blessed Sacrament Installed

Marking a significant milestone in the spiritual journey of the Saint Sebastian Church Bendoor community, the long-awaited Adoration Chapel was

You cannot copy content of this page