October 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೇವಲ ₹200ರ ಕೂಪನ್‌ಗೆ ₹50 ಲಕ್ಷದ ಫಾರ್ಚುನರ್ ಕಾರು – ಆರು ವರ್ಷದ ಬಾಲಕನಿಗೆ ಅದೃಷ್ಟದ ಜಾಕ್‌ಪಾಟ್!

ಮಧ್ಯಪ್ರದೇಶದ ಸೀಲಂಪುರದಲ್ಲಿ ಆರು ವರ್ಷದ ಬಾಲಕನೊಬ್ಬ ಕೇವಲ ₹200 ಮೌಲ್ಯದ ಲಕ್ಕಿ ಡ್ರಾ ಕೂಪನ್ ಮೂಲಕ ಬರೋಬ್ಬರಿ ₹50 ಲಕ್ಷ ಮೌಲ್ಯದ ಟೊಯೊಟಾ ಫಾರ್ಚುನರ್ ಕಾರನ್ನು ಗೆದ್ದಿರುವ ಘಟನೆ ಎಲ್ಲರ ಗಮನ ಸೆಳೆದಿದೆ.

ಅದೃಷ್ಟ ಯಾವಾಗ, ಹೇಗೆ ಕೈಹಿಡಿಯುತ್ತದೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಗರ್ಬಾ ಕಾರ್ಯಕ್ರಮವೊಂದರಲ್ಲಿ ಬಾಲಕನ ಅಜ್ಜಿ ಖರೀದಿಸಿದ ಲಕ್ಕಿ ಡ್ರಾ ಕೂಪನ್ ಮೊಮ್ಮಗನ ಹೆಸರಿನಲ್ಲಿ ನೋಂದಣಿಯಾಗಿದ್ದು, ಅದೇ ಕೂಪನ್ ಕುಟುಂಬಕ್ಕೆ ಭರ್ಜರಿ ಬಹುಮಾನ ತಂದುಕೊಟ್ಟಿದೆ.

ಅಜ್ಜಿ ಖರೀದಿಸಿದ ಕೂಪನ್‌ಗೆ ಮೊಮ್ಮಗನಿಗೆ ಬಹುಮಾನ! :

ಸೀಲಂಪುರ ನಿವಾಸಿ ಮೆದಾಂಶ್ ರೈಕ್ವಾರ್ ಎಂಬ ಆರು ವರ್ಷದ ಬಾಲಕನ ಅಜ್ಜಿ ಕಿರಣ್ ರೈಕ್ವಾರ್ ಅವರು ಗರ್ಬಾ ಕಾರ್ಯಕ್ರಮದ ಸಂದರ್ಭದಲ್ಲಿ ₹200 ನೀಡಿ ಲಕ್ಕಿ ಡ್ರಾ ಕೂಪನ್ ಖರೀದಿಸಿದ್ದರು. ಅದನ್ನು ಮೊಮ್ಮಗನ ಹೆಸರಿನಲ್ಲಿ ನೋಂದಾಯಿಸಿದ್ದರು. 2026ರಲ್ಲಿ ನಡೆದ ಲಕ್ಕಿ ಡ್ರಾ ಫಲಿತಾಂಶ ಪ್ರಕಟವಾದಾಗ, ಮೆದಾಂಶ್‌ಗೆ ಮೊದಲ ಬಹುಮಾನವಾಗಿ ₹50 ಲಕ್ಷ ಮೌಲ್ಯದ ಟೊಯೊಟಾ ಫಾರ್ಚುನರ್ ಕಾರು ಲಭಿಸಿದೆ ಎಂದು ವರದಿಯಾಗಿದೆ.

ಎರಡು ವರ್ಷಗಳ ಕನಸು ನನಸು!:

ಕುಟುಂಬವು ಕಳೆದ ಎರಡು ವರ್ಷಗಳಿಂದ ಸ್ವಂತ ಕಾರು ಖರೀದಿಸುವ ಕನಸು ಕಾಣುತ್ತಿತ್ತು ಎನ್ನಲಾಗಿದೆ. ಇದೀಗ ಲಕ್ಕಿ ಡ್ರಾದಲ್ಲಿ ದುಬಾರಿ ಕಾರು ಬಹುಮಾನವಾಗಿ ದೊರೆತಿರುವುದು ಕುಟುಂಬದ ಸಂತಸವನ್ನು ಇಮ್ಮಡಿಗೊಳಿಸಿದೆ. ಹೊಸ ಕಾರನ್ನು ಮನೆಗೆ ಬರಮಾಡಿಕೊಂಡ ಕುಟುಂಬಸ್ಥರು ಪೂಜೆ ಸಲ್ಲಿಸಿ ಸಂಭ್ರಮಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್:

ಕೇವಲ ₹200 ಹೂಡಿಕೆಗೆ ₹50 ಲಕ್ಷದ ಕಾರು ಒಲಿದಿರುವ ಈ ಬಾಲಕನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಅಜ್ಜಿ ಖರೀದಿಸಿದ ಒಂದು ಕೂಪನ್ ಮೊಮ್ಮಗನ ಹೆಸರಿನಲ್ಲಿ ಅದೃಷ್ಟದ ಬಾಗಿಲು ತೆರೆದಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

You may also like

News

ಮೂರು ದಶಕಗಳ ಪೊಲೀಸ್ ಸೇವೆ ಹಾಗೂ ಸ್ನೇಹ ಮತ್ತು ಸವಿನೆನಪುಗಳ ಸಂಗಮ: ‘ಮುತ್ತಿನ ಮಹೋತ್ಸವದ ಸ್ನೇಹ ಸಮ್ಮಿಲನ–2026’ ಸಂಭ್ರಮ

ಗುರುಗಳಿಗೆ ಗೌರವ, ಸಾಧಕರಿಗೆ ಸನ್ಮಾನ, ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ; ಕುಟುಂಬ ಸಮೇತರಾಗಿ ಒಂದಾದ 1996ನೇ ಸಾಲಿನ ಪೊಲೀಸ್ ಸಿಬ್ಬಂದಿಗಳು ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಸೇರಿದ 1996ನೇ ಸಾಲಿನ
News

Advanced Minimally Invasive Lung Surgery Successfully Performed at Father Muller Medical College Hospital

Father Muller Medical College Hospital (FMMCH) this September  – October 2026 has successfully performed two complex lung surgeries using the

You cannot copy content of this page