November 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

MLC ಐವನ್ ಡಿಸೋಜ ನೇತೃತ್ವದಲ್ಲಿ ನವಂಬರ್ 8ರಂದು 12ನೇ ವರ್ಷದ ಭಾವೈಕ್ಯತೆಯ ದೀಪಾವಳಿ ಆಚರಣೆ

ಸರ್ವಧರ್ಮ ಸಾಮರಸ್ಯ ಸಾರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳ ಆಯೋಜನೆ

ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಅವರ ನೇತೃತ್ವದಲ್ಲಿ ಕಳೆದ 11 ವರ್ಷಗಳಿಂದ ಮಂಗಳೂರಿನ ವಿವಿಧೆಡೆಗಳಲ್ಲಿ ಸರ್ವಧರ್ಮಗಳ ಭಾವೈಕ್ಯತೆಯ ಸಂಕೇತವಾಗಿ ದೀಪಾವಳಿ, ಕ್ರಿಸ್ಮಸ್ ಹಾಗೂ ರಂಜಾನ್ ಹಬ್ಬಗಳನ್ನು ಎಲ್ಲಾ ಧರ್ಮಗಳ ಜನರು ಒಗ್ಗೂಡಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಈ ಬಾರಿ 12ನೇ ವರ್ಷದ ಭಾವೈಕ್ಯತಾ ದಿನಾಚರಣೆ ಸಂಭ್ರಮಾಚರಣೆ-2026 ಅನ್ನು ನವೆಂಬರ್ 8ರಂದು ಭಾನುವಾರದಂದು ಮಂಗಳೂರಿನ ಕದ್ರಿ ಪಾರ್ಕ್ ಬಳಿಯ ಶ್ರೀ ಗೋರಕ್ಷನಾಥ ಜ್ಞಾನ ಮಂದಿರ ಸಭಾಂಗಣದಲ್ಲಿ ಮಧ್ಯಾಹ್ನ 1.30ರಿಂದ ರಾತ್ರಿ 9 ಗಂಟೆಯವರೆಗೆ ಆಯೋಜಿಸಲಾಗಿದೆ.

ದಿನಾಚರಣೆಯ ಅಂಗವಾಗಿ ಭರತನಾಟ್ಯ ಸ್ಪರ್ಧೆ, ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಗೂಡುದೀಪ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಸಂಗೀತ ರಸಮಂಜರಿ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಯಕ್ಷಗಾನ ಕಲಾವಿದರಿಗೆ ವಿಶೇಷ ಗೌರವ ಸಲ್ಲಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು.

ಭರತನಾಟ್ಯ ಸ್ಪರ್ಧೆ:

ಮಧ್ಯಾಹ್ನ 3.30ರಿಂದ ಭರತನಾಟ್ಯ ಸ್ಪರ್ಧೆ ಆರಂಭವಾಗಲಿದ್ದು, ಎಲ್ಲಾ ವಯೋಮಾನದವರಿಗೂ ಭಾಗವಹಿಸಲು ಅವಕಾಶವಿದೆ. 12 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ವಿಜೇತರಿಗೆ ಪ್ರಥಮ ₹25,000, ದ್ವಿತೀಯ ₹20,000 ಹಾಗೂ ತೃತೀಯ ₹15,000 ಬಹುಮಾನಗಳೊಂದಿಗೆ ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು.

ಚಿತ್ರಕಲಾ ಸ್ಪರ್ಧೆ:

ಶಾಲಾ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನ 3 ಗಂಟೆಯಿಂದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. 1ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ.

ಗೂಡುದೀಪ ಸ್ಪರ್ಧೆ:

ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ನವೆಂಬರ್ 5ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಭಾವೈಕ್ಯತೆಯ ಧಾರ್ಮಿಕ ಸಭಾ ಕಾರ್ಯಕ್ರಮ:

ಮಧ್ಯಾಹ್ನ 3 ಗಂಟೆಗೆ ಸರ್ವಧರ್ಮ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ಶ್ರೀ ಈಶ ವಿಠಲ ನ್ಯಾಮೀಜಿಯವರು, ಶ್ರೀ ಸಾಂದೀಪನಿ ಸಾಧನಾಶ್ರಮ, ಶ್ರೀ ಕ್ಷೇತ್ರ ಕೇಮಾರು ಮಠ ಮೂಡುಬಿದಿರೆ ಇವರು ಉಧ್ಘಾಟಿಸಿ ದೀಪಾವಳಿ ಸಂದೇಶ ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು MLC ಐವನ್ ಡಿಸೋಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಾಲ್ದಾನೆ ಚರ್ಚ್ ಇದರ ಪ್ರಧಾನ ಧರ್ಮಗುರು ವಂದನೀಯ ಫಾದರ್ ರಿಚರ್ಡ್ ಕುವೆಲ್ಲೊ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಸನಬ್ಬ ಅವರು  ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಯಕ್ಷಗಾನ ಕಲೆಯ ಮೂಲಕ ಯಕ್ಷ ಲೋಕದಲ್ಲಿ ಯಕ್ಷ ಪ್ರಿಯೆ ಎಂದು ಗುರುತಿಸಿಕೊಂಡಿರುವ ಯಕ್ಷಗಾನ ಕಲಾವಿದೆ ಅರ್ಷಿಯ ಖಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.

ಮಂಗಳೂರಿನ ಮಹಾನಗರ ಪಾಲಿಕೆ ಆಯುಕ್ತರಾದ ರಾಹುಲ್ ರತ್ನಂ ಪಾಂಡೆ ಐ.ಎ.ಎಸ್. ಇವರು ಚಿತ್ರಕಲಾ ಸ್ಪರ್ಧೆಯನ್ನು, ಕರ್ನಾಟಕ ಗೇರುಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್. ಗಟ್ಟಿ ಇವರು ಭರತನಾಟ್ಯ ಸ್ಪರ್ಧೆಯನ್ನು ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಗೂಡುದೀಪ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಗೂಡುದೀಪ ಸ್ಪರ್ಧೆಗೆ 9036719916, 9986036959, ಭರತನಾಟ್ಯ ಸ್ಪರ್ಧೆಗೆ 9686261829, 7411008428 ಹಾಗೂ ಚಿತ್ರಕಲಾ ಸ್ಪರ್ಧೆಗೆ 9964764010, 9481380949, 9845459372 ಸಂಪರ್ಕಿಸಬೇಕಾಗಿ ಕೋರಲಾಗಿದೆ.

ಇಂದು ಅಕ್ಟೋಬರ್ 31ರಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಗತಿ ಬೇಕೆಲ್, ಎಸ್.ಪಿ. ಮನುರಾಜ್, ಮನೀಷ್ ಬೋಳಾರ್, ಅಮೃತ್ ಕರ್ಕಿ, ಜೇಮ್ಸ್ ಪ್ರವೀಣ್, ಅಶ್ರಫ್ ಬೆಂಗ್ರೆ ಹಾಗೂ ಹಬರ್ಟ್ ಡಿಸೋಜ ಕಡೇಕಾರ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕರಾದ ಜೆ. ನಾಗೇಂದ್ರ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

News

ವಾಮಂಜೂರಿನಲ್ಲಿ ನವೆಂಬರ್ 8ಕ್ಕೆ ಮಕ್ಕಳ ಕಲರವ – 125 ಚರ್ಚ್‌ಗಳಿಂದ 6,000ಕ್ಕೂ ಅಧಿಕ ಮಕ್ಕಳ ‘ನಿನಾದ್ 2K26’ ಮಹೋತ್ಸವ!

ಮಂಗಳೂರು ರೋಮನ್ ಕ್ಯಾಥೊಲಿಕ್ ಧರ್ಮಕ್ಷೇತ್ರದ ವತಿಯಿಂದ 2026ನೇ ವರ್ಷವನ್ನು ‘ಮಕ್ಕಳ ವರ್ಷ’ವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಧರ್ಮಕ್ಷೇತ್ರದ ಇತಿಹಾಸದಲ್ಲೇ ಬೃಹತ್ ಮಕ್ಕಳ ಸಮಾವೇಶವೆನಿಸಿರುವ ‘ನಿನಾದ್ – ಭುರ್ಗ್ಯಾಂಲೆಂ ಫೆಸ್ತ್
News

ಪೋಷಕರ ಸಿಬಿಲ್ ಸ್ಕೋರ್ ನೆಪದಲ್ಲಿ ಶಿಕ್ಷಣ ಸಾಲ ನಿರಾಕರಿಸಬೇಡಿ – ಬ್ಯಾಂಕುಗಳಿಗೆ ನಿಸಾರ್ ಅಹಮದ್ ಎಚ್ಚರಿಕೆ

ಉನ್ನತ ಶಿಕ್ಷಣ ಪಡೆಯುವ ಕನಸು ಹೊತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡಲು ಬ್ಯಾಂಕುಗಳು ಅನಗತ್ಯ ಅಡ್ಡಿಪಡಿಸುವಂತಿಲ್ಲ. ಪೋಷಕರ ಸಿಬಿಲ್ ಸ್ಕೋರ್ ಕಡಿಮೆ ಇದೆ ಅಥವಾ ಹಿಂದಿನ ಸಾಲ

You cannot copy content of this page