ಬೆಂಗಳೂರಿನಲ್ಲೂ ರೋಹನ್ ಕಾರ್ಪೋರೇಶನ್ನ ಭದ್ರ ಹೆಜ್ಜೆ – ನೂತನ ಕಚೇರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ
ನವಂಬರ್ 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಪ್ರದರ್ಶನ ಹಾಗೂ ವಿಶೇಷ ದರದಲ್ಲಿ ಮನೆ ಖರೀದಿಗೆ ಅವಕಾಶ

ಕರಾವಳಿಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಮಂಗಳೂರಿನ ಪ್ರತಿಷ್ಠಿತ ರೋಹನ್ ಕಾರ್ಪೋರೇಶನ್ ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯ ಸ್ಯಾಂಕಿ ರಸ್ತೆ ಕ್ರಾಸ್ನಲ್ಲಿರುವ ದಿ ಕನ್ನಿಂಗ್ಹ್ಯಾಮ್ ಕಮರ್ಷಿಯಲ್ನ ಮೊದಲ ಮಹಡಿಯಲ್ಲಿ ಸಂಸ್ಥೆಯ ನೂತನ ಕಚೇರಿಯನ್ನು ಆರಂಭಿಸಲಾಗಿದ್ದು, ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರು ದೇಶದ ಪ್ರಮುಖ ಉದ್ಯಮ, ವಾಣಿಜ್ಯ ಹಾಗೂ ಹೂಡಿಕೆಯ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ. ವಿವಿಧ ಕ್ಷೇತ್ರಗಳ ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ನಗರವು ಅಪಾರ ಅವಕಾಶಗಳನ್ನು ತೆರೆದಿಟ್ಟಿದೆ. ಇಂತಹ ಮಹತ್ವದ ಸಂದರ್ಭದಲ್ಲಿ ರೋಹನ್ ಕಾರ್ಪೋರೇಶನ್ ಬೆಂಗಳೂರಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿರುವುದು ಸಂತಸದ ಬೆಳವಣಿಗೆಯಾಗಿದೆ. ಸಂಸ್ಥೆಯು ಮುಂದಿನ ದಿನಗಳಲ್ಲಿಯೂ ಯಶಸ್ಸಿನ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲಿ ಎಂದು ಶುಭ ಹಾರೈಸಿದರು.

ರೋಹನ್ ಕಾರ್ಪೋರೇಶನ್ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೆರೊ ಮಾತನಾಡಿ, ಬೆಂಗಳೂರಿನಲ್ಲಿ ನೂತನ ಕಚೇರಿ ಆರಂಭಿಸಿರುವುದು ಸಂಸ್ಥೆಯ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಬೆಂಗಳೂರಿನ ಗ್ರಾಹಕರಿಗೆ ನಮ್ಮ ವಸತಿ ಯೋಜನೆಗಳನ್ನು ಪರಿಚಯಿಸುವುದು, ಅವರೊಂದಿಗೆ ವಿಶ್ವಾಸಪೂರ್ಣ ಸಂಬಂಧಗಳನ್ನು ಬೆಳೆಸುವುದು ಹಾಗೂ ಹೊಸ ಅವಕಾಶಗಳಿಗೆ ವೇದಿಕೆ ಕಲ್ಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದರು.

ಸಂಸ್ಥೆಯ ನಿರ್ದೇಶಕ ಡಿಯಾನ್ ಮೊಂತೆರೊ ಮಾತನಾಡಿ, ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮನೆ ಖರೀದಿದಾರರ ನಿರೀಕ್ಷೆಗಳು, ಜೀವನಶೈಲಿ ಮತ್ತು ಅಗತ್ಯಗಳು ನಿರಂತರವಾಗಿ ಬದಲಾಗುತ್ತಿವೆ. ಈ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅರಿತು, ಗ್ರಾಹಕರ ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ಗುಣಮಟ್ಟದ ವಸತಿ ಯೋಜನೆಗಳನ್ನು ರೂಪಿಸಿ ಪರಿಚಯಿಸುವುದು ಸಂಸ್ಥೆಯ ಬದ್ಧತೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರು ಮಹಾಧರ್ಮಕ್ಷೇತ್ರದ ಸಹಾಯಕ ಬಿಷಪ್ ಡಾ. ಜೋಸೆಫ್ ಸುಸೈನಾಥನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಖ್ಯಾತ ನಿರೂಪಕಿ ರೀನಾ ಡಿಸೋಜ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ನವಂಬರ್ 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್:
ನೂತನ ಕಚೇರಿಯ ಉದ್ಘಾಟನೆಯ ಸಂಭ್ರಮದ ಅಂಗವಾಗಿ ರೋಹನ್ ಕಾರ್ಪೋರೇಶನ್ ವತಿಯಿಂದ ನವೆಂಬರ್ 6, 7 ಮತ್ತು 8ರಂದು ಮೂರು ದಿನಗಳ ವಿಶೇಷ ಪ್ರಾಜೆಕ್ಟ್ ಎಕ್ಸಿಬಿಷನ್ ಆಯೋಜಿಸಲಾಗಿದೆ.
ಈ ಪ್ರದರ್ಶನದಲ್ಲಿ ಸಂಸ್ಥೆಯ ವಿವಿಧ ವಸತಿ ಹಾಗೂ ರಿಯಲ್ ಎಸ್ಟೇಟ್ ಯೋಜನೆಗಳ ಸಮಗ್ರ ಮಾಹಿತಿಯನ್ನು ಪಡೆಯಲು ಗ್ರಾಹಕರಿಗೆ ಅವಕಾಶವಿದೆ. ಅಲ್ಲದೆ, ಸಂಸ್ಥೆಯ ಪ್ರತಿನಿಧಿಗಳೊಂದಿಗೆ ನೇರವಾಗಿ ಸಮಾಲೋಚಿಸಿ ತಮ್ಮ ಮನೆ ಖರೀದಿಯ ಕನಸು ಮತ್ತು ಅಗತ್ಯಗಳಿಗೆ ಸೂಕ್ತವಾದ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆಯ್ದ ಯೋಜನೆಗಳನ್ನು ವಿಶೇಷ ಹಾಗೂ ಆಕರ್ಷಕ ದರಗಳಲ್ಲಿ ಖರೀದಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ.

ಮೂರು ದಶಕಗಳ ವಿಶ್ವಾಸದೊಂದಿಗೆ ಹೊಸ ಮಾರುಕಟ್ಟೆಗೆ ಪ್ರವೇಶ:
1994ರಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನ ಪಯಣ ಆರಂಭಿಸಿದ ರೋಹನ್ ಕಾರ್ಪೋರೇಶನ್, ಮೂರು ದಶಕಗಳಿಗೂ ಮೀರಿದ ಅನುಭವ, ಗುಣಮಟ್ಟದ ನಿರ್ಮಾಣ ಹಾಗೂ ಗ್ರಾಹಕರ ವಿಶ್ವಾಸವನ್ನು ತನ್ನ ಬಲವನ್ನಾಗಿಸಿಕೊಂಡಿದೆ. ಮಂಗಳೂರಿನಲ್ಲಿ ಯಶಸ್ವಿಯಾಗಿ ತನ್ನ ಛಾಪು ಮೂಡಿಸಿರುವ ಸಂಸ್ಥೆಯು ಇದೀಗ ಬೆಂಗಳೂರಿನಲ್ಲೂ ಹೊಸ ಅಧ್ಯಾಯ ಆರಂಭಿಸುವ ಮೂಲಕ ತನ್ನ ಬೆಳವಣಿಗೆಯ ಪಯಣಕ್ಕೆ ಮತ್ತಷ್ಟು ವೇಗ ನೀಡಿದೆ.



