November 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೇವಾ ಮನೋಭಾವದ ಕಾರ್ಯಕ್ಕೆ ವಲಯ ಮಟ್ಟದ ಗೌರವ

ಕಾಪು JCIಗೆ 2026ರ ಅತ್ಯುತ್ತಮ ಘಟಕ ಪ್ರಶಸ್ತಿ

ನಿಷ್ಠಾವಂತ ನಾಯಕತ್ವ, ಪ್ರಾಮಾಣಿಕ ಕಾರ್ಯವೈಖರಿ ಹಾಗೂ ಸಮಾಜಸೇವೆಯ ಮೇಲಿನ ಬದ್ಧತೆಯಿಂದ ಗುರುತಿಸಿಕೊಂಡಿರುವ ಕಾಪು ಜೇಸಿಐ ಘಟಕಕ್ಕೆ 2026ನೇ ಸಾಲಿನ ವಲಯ 15ರ ಪ್ರತಿಷ್ಠಿತ ‘ಅತ್ಯುತ್ತಮ ಘಟಕ’ ಪ್ರಶಸ್ತಿ ಲಭಿಸಿದೆ. ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ನಡೆದ ಆರ್ಯ ವಲಯ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ಕಾಪು JCI ಘಟಕಕ್ಕೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

2026ನೇ ಸಾಲಿನ ಘಟಕಾಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಅವರ ಸಮರ್ಥ ನಾಯಕತ್ವದಲ್ಲಿ ಘಟಕವು ವರ್ಷವಿಡೀ ಹಲವು ಮಹತ್ವದ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ವಲಯ ಹಾಗೂ ರಾಷ್ಟ್ರೀಯ ಮಟ್ಟದ ಸೂಚನಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಜತೆಗೆ, ಸಮಾಜಮುಖಿ ಸೇವಾ ಚಟುವಟಿಕೆಗಳು, ತರಬೇತಿ ಶಿಬಿರಗಳು ಹಾಗೂ ಜನಪರ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸಮಾಜದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದೆ.

ನಿಷ್ಠೆ, ಪ್ರಾಮಾಣಿಕತೆ, ಸಂಘಟನಾ ಸಾಮರ್ಥ್ಯ ಮತ್ತು ಸೇವಾ ಮನೋಭಾವವನ್ನು ಕಾರ್ಯರೂಪಕ್ಕೆ ತಂದು ಘಟಕದ ಸದಸ್ಯರನ್ನು ಒಗ್ಗೂಡಿಸಿ ಮುನ್ನಡೆಸಿದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಅವರ ನಾಯಕತ್ವ ಹಾಗೂ ಸದಸ್ಯರ ಸಮರ್ಪಿತ ಪರಿಶ್ರಮಕ್ಕೆ ಈ ಪ್ರಶಸ್ತಿ ಸಂದ ಗೌರವವಾಗಿದೆ. ಸಮಾಜದ ಹಿತಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುವ ಜೇಸಿಐ ಕಾಪು ಘಟಕದ ಸೇವಾ ಬದ್ಧತೆಗೆ ಈ ಸಾಧನೆ ಮತ್ತಷ್ಟು ಪ್ರೇರಣೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಲಯ ಉಪಾಧ್ಯಕ್ಷ ಅರುಣ್ ಮಾಂಜ, ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು, ಪೂರ್ವ ವಲಯ ಉಪಾಧ್ಯಕ್ಷೆ ಸೌಮ್ಯ ರಾಕೇಶ್, ಕಾಪು ಜೇಸಿಐ ಘಟಕಾಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು, ಕಾರ್ಯದರ್ಶಿ ಶ್ರುತಿ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ, ಪೂರ್ವಾಧ್ಯಕ್ಷರಾದ ಸುಧಾಕರ್ ಸಾಲ್ಯಾನ್, ಜಗದೀಶ್ ಬಂಗೇರ, ರಮೇಶ್ ನಾಯ್ಕ್, ಸುಖಲಾಕ್ಷಿ ಬಂಗೇರ, ಜೇಸಿಐ ಉಡುಪಿ ಶಿವಳ್ಳಿ ಘಟಕದ ಅಧ್ಯಕ್ಷ ವಿನೋದ್ ಶೆಟ್ಟಿ, ಸದಸ್ಯರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

You may also like

News

Thailand-Based Six-Year-Old Salman Skates His Way to Glory – Earns Karnataka’s National Championship Berth

Proving that age is no barrier to achievement, six-year-old Salman Sharik Sheik has made his mark in the world of
News

ಪೆನ್ನು ಹಿಡಿದು ಭಕ್ತಿಯ ಪಯಣ – 8 ತಿಂಗಳಲ್ಲಿ ಸಂಪೂರ್ಣ ಬೈಬಲ್ ಬರೆದು ಇತಿಹಾಸ ನಿರ್ಮಿಸಿದ ಮಡಂತ್ಯಾರ್‌ನ  ಸಾಧಕಿಯರು ಸುನೀತಾ ಮತ್ತು ಡಯಾನಾ

ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ ಚರ್ಚ್ ಧರ್ಮಗುರು ಫಾದರ್ ಸ್ಟ್ಯಾನಿ ಗೋವಿಯಸ್ ಹಾಗೂ ಸ್ತ್ರೀ ಸಂಘಟನೆಯ ಪದಾಧಿಕಾರಿಗಳು ಮಡಂತ್ಯಾರ್: ಅಚಲ ನಂಬಿಕೆ, ಅಪಾರ ತಾಳ್ಮೆ, ನಿರಂತರ ಪರಿಶ್ರಮ ಹಾಗೂ

You cannot copy content of this page