October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಸೈಗೋಳಿ ಕ್ಸೇವಿಯರ್ ಐಟಿಐ ಇದರ ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಪಾನೀರ್ ಆಯ್ಕೆ.

ಅಸೈಗೋಳಿಯಲ್ಲಿರುವ ಕ್ಸೇವಿಯರ್ ಎಜ್ಯುಕೇಶನ್ ಟ್ರಸ್ಟ್ (ರಿ.) ಇವರು ನಡೆಸುತ್ತಿರುವ ಕ್ಸೇವಿಯರ್ ಐಟಿಐ ಇದರ ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಪಾನೀರ್ ಆಯ್ಕೆಯಾಗಿರುತ್ತಾರೆ. ಈ ಟ್ರಸ್ಟ್ 1984ರಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ಹಿಂದುಳಿದ ಮತ್ತು ಗ್ರಾಮಿಣ ಯುವಕರಿಗೆ ತಾಂತ್ರಿಕ ತರಬೇತಿ ನೀಡುವ ಉದ್ದೇಶದಿಂದ ಜಾತಿ, ಮತ ಮತ್ತು ಧರ್ಮ ಲೆಕ್ಕಿಸದೆ ಸಮಾಜದ ಉದ್ಧಾರಕ್ಕಾಗಿ  ಸ್ಥಾಪನೆಗೊಂಡಿತು.

ಕ್ಸೇವಿಯರ್ ಟ್ರಸ್ಟ್ ವತಿಯಿಂದ 1984ರಲ್ಲಿ ಮುಕ್ಕದಲ್ಲಿ ಕ್ಸೇವಿಯರ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ (XITC) ಎಂದು ಸ್ಥಾಪನೆಗೊಂಡು, ತದನಂತರ 1992ರಲ್ಲಿ ಮುಕ್ಕದಿಂದ ಕೊಣಾಜೆ ಸಮೀಪದ ಅಸೈಗೋಳಿಗೆ ಸ್ಥಳಾಂತರಿಸಲಾಯಿತು. ಉದ್ಯೋಗ ಮತ್ತು ತರಬೇತಿ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರ ಮತ್ತು ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ NCVT ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಭಾರತ ಸರ್ಕಾರ ನವ ದೆಹಲಿಯಿಂದ ಗುರುತಿಸಲ್ಪಟ್ಟಿದ್ದ ಈ ಸಂಸ್ಥೆಗೆ 40 ವರ್ಷ ತುಂಬುವ ಈ ಶುಭ ಸಂದರ್ಭದಲ್ಲಿ 2024 ಸಪ್ಟಂಬರ್ 9ರಂದು ನಡೆದ ಸಭೆಯಲ್ಲಿ ಆಲ್ವಿನ್ ಡಿಸೋಜ ಪಾನೀರ್ ಇವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ನೇಮಿಸಲಾಯಿತು.

ಆಲ್ವಿನ್ ಡಿಸೋಜ ಪಾನೀರ್ ಇವರು All India Christian union ಇದರ ರಾಜ್ಯಧ್ಯಕ್ಷ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮೈನೋರಿಟಿಯ ಅಧ್ಯಕ್ಷರಾಗಿ ಸಾಮಾಜಿಕ ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನೆ ತಾನು ತೊಡಗಿಸಿಕೊಂಡು ಬಂದಿದ್ದಾರೆ.

You may also like

News

ಬೆಳ್ತಂಗಡಿಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು–2026

ಯುವ ಸಮುದಾಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು–2026 ಕಾರ್ಯಕ್ರಮ ಅಕ್ಟೋಬರ್ 8ರಂದು
News

Father Muller Thumbay Campus welcomes Nursing & Allied Health Students

The Course Inauguration Ceremony of the 5th batch of B.Sc. Nursing of Father Muller Nursing College Thumbay (FMNCT) and the

You cannot copy content of this page